Get Updates
Get notified of breaking news, exclusive insights, and must-see stories!

‘ನಮ್ಮದು ಅಲಿಪ್ತ ನೀತಿಯ ರಾಷ್ಟ್ರ ಎಂಬುದನ್ನು ಸರಕಾರ ಮರೆತರೆ ಒಳಿತಾಗದು’

ನವದೆಹಲಿ : ವಿದೇಶಗಳಿಗೆ ಯಾವುದೇ ರೀತಿಯ ಮಿಲಿಟರಿ ನೆರವು ನೀಡುವುದು ಭಾರತಕ್ಕೆ ಶ್ರೇಯಸ್ಸಲ್ಲ. ನಮ್ಮದು ಅಲಿಪ್ತ ನೀತಿಯನ್ನು ಅನುಸರಿಸುವ ರಾಷ್ಟ್ರ ಎಂಬುದನ್ನು ಸರಕಾರ ಮರೆತಂತಿದೆ. ಸರಕಾರ ರಾಷ್ಟ್ರದ ಮೂಲಭೂತ ತತ್ವಗಳನ್ನೇ ಬದಲಿಸಲು ಹೊರಟಿದ್ದರೆ, ಆಗ ದೇಶದ ಆಂತರಿಕ ಶಾಂತಿಯೇ ಕದಡಿಹೋಗುವ ಸಂಭವವಿದೆ.ಆದ್ದರಿಂದ ಸರಕಾರ ಎಚ್ಚರಿದಿಂದಿರಬೇಕು ಎಂದು ಕಾಂಗ್ರೆಸ್‌ ನಾಯಕ ಕೆ. ನಟ್ವರ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ವಿದೇಶಾಂಗ ಖಾತೆಗಳ ರಾಜ್ಯಸಚಿವರಾಗಿದ್ದ ಕೆ. ನಟ್ವರ್‌ ಸಿಂಗ್‌, ಅಫ್ಘನಿಸ್ತಾನ್‌ ಮೇಲೆ ದಾಳಿ ನಡೆಸಲಿರುವ ಅಮೆರಿಕಾಕ್ಕೆ ನೆರವಾಗಲು ಭಾರತ ಇಚ್ಚಿಸಿರುವ ಬಗೆಗೆ ಪ್ರತಿಕ್ರಿಯಿಸುತ್ತಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ, ಅದರಲ್ಲಿಯೂ ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್‌ ಸಿಂಗ್‌ ಮತ್ತು ಅವರ ಸಲಹಾಕಾರ ಅರುಣ್‌ ಸಿಂಗ್‌ , ಅಮೆರಿಕಾಕ್ಕೆ ನೆರವಾಗಲು ಮುಂದಾಗಿದ್ದಾರೆ. ಆದರೆ ನಾವು ಅಲಿಪ್ತ ನೀತಿಯನ್ನು ಅನುಸರಿಸುವವರು ಎಂಬುದನ್ನು ಮರೆತಲ್ಲಿ ಕಾಂಗ್ರೆಸ್‌ ಪಕ್ಷ ಸರಕಾರದ ವಿದೇಶಾಂಗ ನೀತಿಯ ಬಗ್ಗೆ ತೀವ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಲಿದೆ.

ಎಲ್ಲ ಪಕ್ಷಗಳಂತೆ ಕಾಂಗ್ರೆಸ್‌ ಕೂಡ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಭಾರತವೂ ಹಿಂದೆ ಪಂಜಾಬ್‌ನಲ್ಲಿ , ಈಗ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸರಕಾರ ರಾಷ್ಟ್ರೀಯ ಹಿತಾಸಕ್ತಿಯನ್ನು ಮರೆತು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ . ಜಾಣತನದಿಂದ ವರ್ತಿಸಬೇಕಾಗಿದೆ ಎಂದು ನಟ್ವರ್‌ ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ.

(ಇನ್ಫೋ ವಾರ್ತೆ)

Post Your Views

ಮುಖಪುಟ / ಭಯೋತ್ಪಾದನೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+