ಯುದ್ಧ ದ ಕಾಲದಲ್ಲಿ ನವರಾತ್ರಿ ತಡವಾದ ಬೇಜಾರುಮರೆತೇಹೋಗುತ್ತೆ
ಬೆಂಗಳೂರು : ಸೆಪ್ಟೆಂಬರ್ 17ರ ಮಹಾಲಯ ಅಮಾವಾಸ್ಯೆಯಂದು ಹಿಂದಿನ ವರ್ಷಗಳಲ್ಲಿದ್ದ ಸಂಭ್ರಮವಿಲ್ಲ.
ಅನುಭವ ಜನ್ಯ ಗಾದೆಗಳು ಅಕ್ಷರಶಃ ನಿಜವಾಗಿಬಿಟ್ಟಿದೆ. ‘ದುರ್ಭಿಕ್ಷದಲ್ಲಿ ಅಧಿಕ ಮಾಸ’ ಎಂಬ ಗಾದೆಯ ಮುಸುಡಿಗೆ ಹೊಡೆದಂತೆ ಈ ವರ್ಷ ಅಧಿಕ ಮಾಸ ಬಂದಿದೆ. ಇದರಿಂದಾಗಿ ನವರಾತ್ರಿ ತಿಂಗಳು ತಡವಾಗಿದೆ. ಆದರೆ ಬೇಸರಕ್ಕೆ ಇದೊಂದೇ ಕಾರಣವಲ್ಲ.
ಸಾಮಾನ್ಯವಾಗಿ ಊರ ದೇವಸ್ಥಾನಗಳು, ಅದರಲ್ಲೂ ದೇವೀ ಉಪಾಸನಾ ಸ್ಥಳಗಳು ಪಿತೃಪಕ್ಷದ ಕೊನೆಯ ದಿನ ಮಹಾಲಯದಂದು ಸಂಜೆ ನವರಾತ್ರಿಯನ್ನು ಬರಮಾಡಿಕೊಳ್ಳುವುದರಲ್ಲಿ ವ್ಯಸ್ತ. ಒಂದೊಂದು ಊರಲ್ಲಿ ಒಂದೊಂದು ರೀತಿಯ ನವರಾತ್ರಿ ಆಚರಣೆ. ಲಲಿತಾ ಪಂಚಮಿ, ಶಾರದಾ ಪೂಜೆ, ವಿಜಯದಶಮಿ ಮತ್ತೆ ದಸರಾ ಹೀಗೆ ಸಾಗುತ್ತದೆ ಭಕ್ತಿ...
ಆದರೆ ಅಧಿಕ ಮಾಸ ಬಂದಿದೆ. ಮದುವೆ, ಮುಂಜಿ, ಶುಭ ಕಾರ್ಯಗಳನ್ನೆಲ್ಲಾ ಬಂದ್ ಮಾಡುವ ಅಧಿಕ ಆಶ್ವಯುಜ ಮಾಸ ಸೆಪ್ಟೆಂಬರ್ 18ರಿಂದ ಆರಂಭವಾಗಲಿದೆ. ಮತ್ತೆ 30 ದಿನಗಳ ಬಳಿಕ, ಅಕ್ಟೋಬರ್ 17ರಿಂದ ನಿಜ ಆಶ್ವಯುಜ ಶುರುವಾಗುತ್ತದೆ.
ಅಲ್ಲಿ ಯುದ್ಧ . ಯುದ್ಧ ಮಾಡುತ್ತಿರುವವರ ಬಗ್ಗೆ ನಮಗೆ ಸಂಬಂಧವಿಲ್ಲ ಎಂದು ನಾವು ನೆಮ್ಮದಿಯ ನಿದ್ದೆ ಹೋಗುವಂತಿಲ್ಲ. ಯುದ್ಧಕಾಲ ಬಂತೆಂದರೆ ದೇಶದಲ್ಲಿ ಸುಭಿಕ್ಷವೂ ಅಳಿಯುತ್ತದೆ ಅಂತ ಮನೆಯಲ್ಲಿ ಅಜ್ಜ ಅಜ್ಜಿಯಂದಿರು ಮಕ್ಕಳ ಹತ್ತಿರ ಹೇಳುತ್ತಲೇ ಇರುತ್ತಾರೆ. ‘ಏ .. ಬಿಡಜ್ಜಿ ..’ ಅಂತ ಶೂ ಲೇಸ್ ಕಟ್ಟಿಕೊಂಡು ಆಫೀಸಿಗೆ ಹೋದರೂ, ಯುದ್ಧ, ಕ್ಷಾಮ ಎಲ್ಲ ನಮಗೂ ತಟ್ಟುತ್ತದೆ ಎಂಬ ವಾಸ್ತವವನ್ನು ಮರೆಯುವುದಕ್ಕಾಗುತ್ತದಾ ?
ರಾಜ್ಯದಲ್ಲಿ ಬರ ಪರಿಸ್ಥಿತಿ, ಪರಿಹಾರ ಎಂಬ ಮಾತೆಲ್ಲ ಕ್ಲೀಷೆಯಾದರೂ ನೀರಿಲ್ಲದ ಊರಿಗೆ, ಮಳೆಗಾಲ ಮುಗಿದು ಹೋದರೂ ಮಳೆ ಬಂದಿಲ್ಲ ಎನ್ನುವುದೂ ಅಂಗೈನೆಲ್ಲಿ. ಬರ ತಂದಿರುವ ಬಡತನದಲ್ಲಿ ನವರಾತ್ರಿ ಬಂದಿಲ್ಲ ಎಂದು ಕೊರಗುವವರಿಲ್ಲ. ದಸರಾ ಕೈಬಿಡುವ ಮಾತು ಕೇಳಿಬರುತ್ತಿರುವಾಗ ನವರಾತ್ರಿ ತಡವಾಗಿರುವ ಬಗ್ಗೇನೂ ಬೇಜಾರಿಲ್ಲ.
ಆದರೆ ಗಂಧದ ಗುಡಿಯಲ್ಲಿ ನೀರು, ಮಳೆ ಬೆಳೆಯ ಬಗ್ಗೆಲ್ಲಾ ಮಾತನಾಡುವಾಗ ತೀರಾ ಬೇಜಾರಾಗುತ್ತದೆ. ಮಲೆನಾಡ ಅಂಗಳ ಶಿವಮೊಗ್ಗ ಜಿಲ್ಲೆಯೇ ಬರಪೀಡಿತ ಜಿಲ್ಲೆ ಎಂದು ಕರೆಯುವಾಗ ಎದೆಯಾಳಗೇ ಸಟ್ಟುಗ ಹಾಕಿದ ಹಾಗಾಗುತ್ತದೆ. ಸೆಪ್ಟೆಂಬರ್ 18ರಂದು ಹಬ್ಬ ಆರಂಭವಾಗದೇ ಇರುವುದಕ್ಕೆ ಅಧಿಕ ಮಾಸ ಒಂದೇ ಕಾರಣವೇ ಎಂದು ಪ್ರಶ್ನಿಸಿಕೊಳ್ಳುವ ಧೈರ್ಯವಾಗುವುದಿಲ್ಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications