ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆಗೆ 8 ವರ್ಷಗಳಷ್ಟು ಹಿನ್ನಡೆ ;1 ಡಾಲರ್‌=48 ರುಪಾಯಿ !

By Staff
|
Google Oneindia Kannada News

ಮುಂಬಯಿ : ಇನ್ಫೋಸಿಸ್‌ ಟೆಕ್ನಾಲಜೀಸ್‌, ಸತ್ಯಂ ಕಂಪ್ಯೂಟರ್‌, ಎನ್‌ಐಐಟಿ, ಆರ್‌ಐಎಲ್‌, ಎಚ್‌ಎಲ್‌ಎಲ್‌, ಎಂಟಿಎನ್‌ಎಲ್‌, ಎಲ್‌ ಅಂಡ್‌ ಟಿ, ಐಟಿಸಿ ಮೊದಲಾದ ದಿಗ್ಗಜಾತಿ ದಿಗ್ಗಜ ಕಂಪನಿಗಳು ಸೋಮವಾರದ ಷೇರು ಮಾರುಕಟ್ಟೆಯಲ್ಲಿ ತೀರಾ ನಷ್ಟ ಅನುಭವಿಸಿವೆ.

ವಿದೇಶೀ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐಎಸ್‌) ಹಾಗೂ ದೇಶೀ ವಿತ್ತ ಸಂಸ್ಥೆಗಳ ಭಾರೀ ಮಾರಾಟದ ಭರಾಟೆಯಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಸೂಚ್ಯಂಕ ಕಳೆದ ಎಂಟು ವರ್ಷಗಳಲ್ಲಿ ಎಷ್ಟು ದಾಖಲಾಗಿತ್ತೋ ಅದಕ್ಕೆ ಸಮನಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಶುಕ್ರವಾರ ಪೇಟೆ ಸೂಚ್ಯಂಕ 2830.12 ದಾಖಲಾಗಿತ್ತು. ಸೋಮವಾರ ಇದು 2644.56ರಷ್ಟು ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಷೇರು ಪೇಟೆಯಲ್ಲಿ ಗೋಳೋ ಅನ್ನುವವರು ಹೆಚ್ಚಾಗಿದ್ದಾರೆ.

ಒಂದೆಡೆ ಚಿನ್ನದ ಬೆಲೆ ಗಗನಕ್ಕೆ ಮುಟ್ಟಿದೆ. ಷೇರು ಪೇಟೆ ಗೋಳೋ ಅನ್ನುತ್ತಿದೆ. ಈ ನಡುವೆಯೇ ರುಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 48 ರುಪಾಯಿಯಾಗಿದ್ದು, ಮಹಾಲಯ ಅಮಾವಾಸ್ಯೆಯ ಸೋಮವಾರ ಭಾರತೀಯರ ಪಾಲಿಗೆ ಕೆಟ್ಟ ದಿನವಾಗಿ ಪರಿಣಮಿಸಿದೆ. ರುಪಾಯಿ ಮೌಲ್ಯ ಕುಸಿಯುವ ಲಕ್ಷಣಗಳು ಕಳೆದ ಶುಕ್ರವಾರವೇ ಕಂಡು ಬಂದಿತ್ತು. ಅಂದು ಒಂದು ಡಾಲರ್‌ 47.98 ರುಪಾಯಿಗೆ ಸಮನಾಗಿತ್ತು. ಭಾರತದಲ್ಲಿ ಪ್ರತಿ ಡಾಲರ್‌ಗೆ ರುಪಾಯಿ ಮೌಲ್ಯ ಹಿಂದೆಂದೂ 48 ರುಪಾಯಿ ಮುಟ್ಟಿರಲಿಲ್ಲ!

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X