ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರ ಬಲಿಷ್ಠ ಅಂಗರಕ್ಷಕರ ಸರ್ಪ ಕಾವಲಿನ ನಡುವೆ ಬಿನ್‌ ಲ್ಯಾಡೆನ್‌

By Staff
|
Google Oneindia Kannada News

ಫ್ರಾಂಕ್‌ಫರ್ಟ್‌: ಅಮೆರಿಕ ಹುಡುಕುತ್ತಿರುವ ಸೌದಿ ಸಂಜಾತ ಒಸಾಮ ಬಿನ್‌ ಲ್ಯಾಡೆನ್‌ ಪ್ರಸ್ತುತ ಆಪ್ಘಾನಿಸ್ತಾನದಲ್ಲೇ ಇದ್ದು , 13 ಸಾವಿರ ಸಂಖ್ಯೆಯ ಬಲಿಷ್ಠ ಖಾಸಗಿ ರಕ್ಷಣಾ ಪಡೆ ಆತನನ್ನು ಸಂರಕ್ಷಿಸುತ್ತಿದೆ ಎಂದು ಆಪ್ಘನ್‌ನ ವಿರೋಧ ಪಕ್ಷಗಳ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಲ್ಯಾಡೆನ್‌ನ ಅಂಗರಕ್ಷಕಾ ಪಡೆ ಸಣ್ಣ ಸೇನೆಯಾಗಿದ್ದು , ಸುಮಾರು 13 ಸಾವಿರ ಮಂದಿಯನ್ನು ಹೊಂದಿದೆ ಎಂದು ಉತ್ತರ ಒಕ್ಕೂಟದ ಅಧ್ಯಕ್ಷ ಬುರ್ಹಾನುದ್ದೀನ್‌ ರಬ್ಬಾನಿ ಅವರ ವಕ್ತಾರ ಅಬೆದ್‌ ರಜಿಬ್‌ ಅವರು, ಫ್ರಾಂಕ್‌ಫರ್ಟರ್‌ ಅಲ್‌ಜೆಮೀನ್‌ ರಿkುೕಟುಂಗ್‌ಗೆ ತಿಳಿಸಿದ್ದಾರೆ.

ರಬ್ಬಾನಿ ಅವರು ಪ್ರಸ್ತುತ ಉತ್ತರ ಆಪ್ಘಾನಿಸ್ತಾನದಲ್ಲಿದ್ದು , ಅವರು ಸೆಪ್ಟಂಬರ್‌ 15 ರಂದು ಮೃತರಾದ ವಿರೋಧಿ ಮುಖಂಡ ಅಹ್ಮದ್‌ ಷಾ ಮಸೂದ್‌ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ವಾರ ಭಯೋತ್ಪಾದಕ ದಾಳಿಯಲ್ಲಿ ಮಸೂದ್‌ ಗಾಯಗೊಂಡಿದ್ದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X