ಮಕ್ಕಳು ಮತ್ತು ಹೆಂಡಿರೊಂದಿಗೆ ರಹಸ್ಯತಾಣಕ್ಕೆ ಲ್ಯಾಡೆನ್ ಪರಾರಿ
ಇಸ್ಲಾಮಾಬಾದ್ : ಒಸಮಾ ಬಿನ್ ಲ್ಯಾಡೆನ್ ಪತ್ತೆಗಾಗಿ ಅಫ್ಘಾನಿಸ್ತಾನದ ಮೇಲೆ ಅಮೆರಿಕಾ ಧಾಳಿ ನಡೆಸಲು ತುದಿಗಾಲಲ್ಲಿ ನಿಂತಿರುವ ಹೊತ್ತಿನಲ್ಲಿ , ತನ್ನ ಹೆಂಡತಿಯರು ಮಕ್ಕಳು ಹಾಗೂ ಅನುಚರರೊಂದಿಗೆ ಒಸಮಾ ಬಿನ್‌ಲ್ಯಾಡೆನ್ ಅಫ್ಘನ್‌ನ ಅನಾಮಿಕ ಹಳ್ಳಿ ಮೂಲೆಗೆ ಪೇರಿ ಕಿತ್ತಿರುವುದಾಗಿ ವರದಿಯಾಗಿದೆ.
ಕಂದಾಹಾರ್ ಮೂಲವನ್ನುಲ್ಲೇಖಿಸಿ ಪಾಕಿಸ್ತಾನ್‌ನ ಪತ್ರಿಕೆ ದ ನ್ಯೂಸ್ ಈ ವಿಷಯವನ್ನು ಪ್ರಕಟಿಸಿದ್ದು, ನಗರದಲ್ಲಿ ಒಬ್ಬನೇ ಒಬ್ಬ ಅರಬ್ ಪ್ರಜೆ ಕಾಣಲು ಸಿಗುತ್ತಿಲ್ಲ. ಲ್ಯಾಡೆನ್‌ನ ದೊಡ್ಡ ಕುಟುಂಬವನ್ನು ಹಳ್ಳಿಯ ರಹಸ್ಯ ಪ್ರದೇಶಕ್ಕೆ ಕಳುಹಿಸಲಾಗಿದೆ. ಲ್ಯಾಡೆನ್‌ದು ನಾಲ್ಕು ಮಂದಿ ಹೆಂಡತಿಯರು ಮತ್ತು ಅನೇಕ ಮಕ್ಕಳ ದೊಡ್ಡ ಕುಟುಂಬ.
ಅಮೆರಿಕಾ ದಾಳಿಗಿಂತ ಮುಂಚೆಯೂ ಲ್ಯಾಡೆನ್ ರಹಸ್ಯ ತಾಣಗಳಲ್ಲಿಯೇ ಜೀವನ ನಡೆಸುತ್ತಲೇ ತನ್ನ ಕೆಲಸಗಳನ್ನು ನಿರ್ವಹಿಸುತ್ತಿದ್ದ. ಆದರೂ ಹೆಚ್ಚಾಗಿ ಕಂದಾಹಾರ್‌ನಲ್ಲಿಯೇ ಆತ ವಾಸಿಸುತ್ತಿದ್ದ. ಜಲಾಲಾಬಾದ್‌ಗೆ ಆಗಾಗ ಹೋಗುತ್ತಿದ್ದ . ಆತನ ತರಬೇತು ಕ್ಯಾಂಪ್ ಖೋಸ್ಟ್‌ನಲ್ಲಿ ಇರುವುದು ತಿಳಿದು ಬಂದಿದೆ.
ಅಮೆರಿಕಾ ದಾಳಿ ನಡೆಸಿದಾಗಲೂ ಒಸಮಾ ಬಚಾವ್ ಆಗುವಷ್ಟು ಸುರಕ್ಷಿತ ರಹಸ್ಯ ತಾಣಗಳಿವೆಯೇ ಎಂದು ಪ್ರಶ್ನೆಗೆ , ಅಫ್ಘನ್ ಮರುಭೂಮಿ, ಪರ್ವತ ಪ್ರದೇಶಗಳನ್ನೊಳಗೊಂಡಿರುವ ವಿಶಾಲ ದೇಶವಾದ್ದರಿಂದ ಇದು ದುಃಸ್ಸಾಧ್ಯದ ಮಾತಲ್ಲ ಎಂದು ಒಸಮಾ ಅಡಗಿಕೊಂಡಿರುವ ಪ್ರದೇಶಗಳ ಬಗೆಗೆ ತಿಳಿಸಿರುವ ಮೂಲಗಳು ಹೇಳಿವೆ.
(ಪಿಟಿಐ)
Post Your Views
ಮುಖಪುಟ / ಭಯೋತ್ಪಾದನೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications