ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಮೇಲಿನ ದಾಳಿ : ಪ್ರಥಮ ಆರೋಪಿಯ ಬಂಧನ

By Staff
|
Google Oneindia Kannada News

ವಾಷಿಂಗ್ಟನ್‌ : ಮಂಗಳವಾರ ನ್ಯೂಯಾರ್ಕ್‌ನ ಅವಳಿ ಗಗನಚುಂಬಿ ಕಟ್ಟಡಗಳು ಹಾಗೂ ಅಮೆರಿಕ ಪ್ರತಿಷ್ಠೆಯ ಪ್ರತೀಕವಾಗಿದ್ದ ವಾಷಿಂಗ್ಟನ್‌ನ ಪೆಂಟಗಾನ್‌ ಮೇಲೆ ನಡೆದ ಭಯೋತ್ಪಾದಕ ವೈಮಾನಿಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧಿಕಾರಿಗಳು ವ್ಯಕ್ತಿಯಾಬ್ಬನನ್ನು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವೇ ಪ್ರಪ್ರಥಮ ಬಂಧವವಾಗಿದೆ. ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಪುರಾವೆಗಳ ಶೋಧದಲ್ಲಿ ನಿರತವಾಗಿರುವ ಎಫ್‌ಬಿಐ 36,000 ಸುಳಿವುಗಳನ್ನು ಪತ್ತೆಹಚ್ಚಿದ್ದಾರೆ. ಶುಕ್ರವಾರ ಬಂಧಿಸಲಾಗಿರುವ ವ್ಯಕ್ತಿಯ ಬಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳಿವೆ ಎಂದು ಎಫ್‌ಬಿಐ ಅಧಿಕಾರಿಗಳು ಶಂಕಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಜ್ವಲಂತ ಸಾಕ್ಷಿ ಎಂದು ಪರಿಗಣಿಸಲಾಗಿದೆ ಎಂದು ನ್ಯಾಯಿಕ ಇಲಾಖೆ ತಿಳಿಸಿದೆ. ಆದರೆ, ಈ ವ್ಯಕ್ತಿಯನ್ನು ಎಲ್ಲಿ ಬಂಧಿಸಲಾಯಿತು ಎಂಬುದನ್ನು ಮಾತ್ರ ಎಫ್‌ಬಿಐ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಶುಕ್ರವಾರ ಮೇಲ್ಕಂಡ ಶಂಕಿತ ವ್ಯಕ್ತಿಯ ಬಂಧನಕ್ಕಾಗಿ ಹೊರಡಿಸಲಾದ ಬಂಧನದ ವಾರೆಂಟ್‌, ದಾಳಿ ಪ್ರಕರಣಾನಂತರದ ಮೊದಲ ವಾರೆಂಟ್‌ ಆಗಿದೆ.

ಭಾರತದ ನೆರವು : ಎಫ್‌.ಬಿ.ಐ. ಭಾರತದಿಂದ ಭಯೋತ್ಪಾದಕತೆಗೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯ ಪುರಾವೆಗಳನ್ನು ಪಡೆದುಕೊಂಡಿದೆ. ಈ ಮಧ್ಯೆ ಯಾವುದೇ ಕಾರಣಕ್ಕೂ ಬಿನ್‌ ಲಾಡನ್‌ನನ್ನು ಅಮೆರಿಕಕ್ಕೆ ಒಪ್ಪಿಸಲು ಸಾಧ್ಯವೇ ಇಲ್ಲ ಎಂದು ತಾಲಿಬಾನ್‌ ಅಗ್ರ ನಾಯಕರು ರೇಡಿಯೋ ಭಾಷಣದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X