ಬೆಂಗಳೂರಿನ ಪ್ರಮೋದ್‌ಗೆ ರೇಲು ಮಿಸ್ಸಾಯಿತು, ಪ್ರಾಣ ಉಳಿಯಿತು
ಬೆಂಗಳೂರು : ಇಲ್ಲಿನ ಮೂಲದ, ಈಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಎಸ್.ಎ.ಪ್ರಮೋದ್ ಎಂಬುವರು ಮನೆ ತಡವಾಗಿ ಬಿಟ್ಟದ್ದೇ ಅವರಿಗೆ ವರದಾನವಾಗಿದೆ.
ಮಂಗಳವಾರ ಭಯೋತ್ಪಾದಕರ ದಾಳಿಗೆ ಕುಸಿದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳಲ್ಲಿ ಒಂದರ 40ನೇ ಮಹಡಿಯಲ್ಲಿದ್ದ ಸಾಫ್ಟ್‌ವೇರ್ ಕಂಪನಿಯಾಂದರಲ್ಲಿ ಕೆಲಸ ಮಾಡುತ್ತಿದ್ದರು ಪ್ರಮೋದ್. ನಿತ್ಯ ನ್ಯೂಜೆರ್ಸಿಯಿಂದ ನ್ಯೂಯಾರ್ಕ್‌ಗೆ ರೇಲಿನಲ್ಲಿ ಕಚೇರಿಗೆ ಬಂದು, ಹೋಗುತ್ತಿದ್ದರು. ದುರಂತ ಸಂಭವಿಸಿದ ದಿನ ತಡವಾಗಿ ಮನೆ ಬಿಟ್ಟದ್ದರಿಂದ ನಿತ್ಯ ಕಚೇರಿಗೆ ಹೋಗುವ ರೇಲು ಪ್ರಮೋದ್‌ಗೆ ಸಿಗಲಿಲ್ಲ. ನಂತರದ ರೇಲು ಹತ್ತಿ ಕಚೇರಿಗೆ ಹೋಗುವ ಹೊತ್ತಿಗೆ ಒಂದು ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು. ಅದನ್ನು ಕಂಡು, ಸಹ ಕೆಲಸಗಾರರಿಗೆ ಫೋನಾಯಿಸಿ ಪ್ರಮೋದ್ ವಿಷಯ ತಿಳಿದುಕೊಂಡರು.
ಎರಡನೇ ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದದ್ದನ್ನು ನೋಡಿದವರ ಪೈಕಿ ಪ್ರಮೋದ್ ಕೂಡ ಒಬ್ಬರು. ಅವರ ತಂದೆ ಅನಂತ ರಾಮನ್ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ. ತಾಯಿ ಶಕುಂತಲಾ ಅವರು ಮಗ ಸುರಕ್ಷಿತವಾಗಿದ್ದಾನೆ ಎಂದು ತಿಳಿದುಕೊಂಡ ನಂತರವೇ ಸಮಾಧಾನವಾದದ್ದು.
ಅವರು ಮಾಧ್ಯಮಗಳಿಗೆ ಹೇಳಿದ್ದು ಹೀಗೆ- ಟಿವಿಯಲ್ಲಿ ಅಮೆರಿಕಾ ದುರಂತದ ಚಿತ್ರಗಳನ್ನು ನೋಡಿ ದಂಗಾಗಿಹೋದೆವು. ಪ್ರಮೋದನಿಗೆ ಎಷ್ಟು ಫೋನ್ ಮಾಡಿದರೂ ಲೈನ್ ಸಿಗಲಿಲ್ಲ. ಕೊನೆಗೆ ಸಂಬಂಧಿಕರೊಬ್ಬರು ಆತ ಕರೆ ಮಾಡಿ, ಕ್ಷೇಮವಾಗಿದ್ದೇನೆ ಎಂದು ಹೇಳಿದ್ದಾನೆ. ಆತಂಕ ಬೇಡ ಅಂದರು. ಅದುವರೆಗೂ ನಮಗೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು.
ಪ್ರಮೋದ್ ಗೆಳೆಯ ಕಿರಣ್ ಕುಮಾರ್ ಎಂಬುವರೂ ಬೆಂಗಳೂರು ನಿವಾಸಿ. ಅಮೆರಿಕಾದ ನ್ಯೂಜೆರ್ಸಿಯಲ್ಲೇ ಇರುವ ಈತ ಕೂಡ ನ್ಯೂಯಾರ್ಕ್‌ನಲ್ಲಿರುವ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವುದು. ವಿಶ್ವ ವ್ಯಾಪಾರ ಕೇಂದ್ರ ಕಟ್ಟಡ ಕುಸಿದಾಗ ಹಾರಿದ ದೊಡ್ಡ ಕಲ್ಲೊಂದು ಕಿರಣ್‌ಗೆ ಬಡಿಯಬೇಕಿತ್ತು. ಸ್ವಲ್ಪದರಲ್ಲೇ ಅವರು ಬಚಾವಾದರು. ಅವರ ತಾಯಿ ಸೀತಾಲಕ್ಷ್ಮಿ ಈ ವಿಷಯ ತಿಳಿಸಿದ್ದಾರೆ.
ಕೌಸಲ್ಯ ಮಲ್ಯ ಎಂಬ ಬೆಂಗಳೂರಿನ ಇನ್ನೊಬ್ಬ ತಾಯಿ ಮಗನಿಂದ ಫೋನು ಬರುವವರೆಗೆ ದೇವರ ಮನೆ ಬಿಟ್ಟು ಎದ್ದಿರಲಿಲ್ಲ. ಮಗ ದೀಪಕ್, ನಾನು ಚೆನ್ನಾಗಿದ್ದೇನಮ್ಮಾ ಅಂದಾಗ, ದೇವರ ದೀಪಕ್ಕೆ ಇನ್ನಷ್ಟು ತುಪ್ಪ ಹಾಕಿದ ಕೌಸಲ್ಯ, ಹರಕೆಗಳನ್ನೆಲ್ಲಾ ಬೇಗ ತೀರಿಸುವುದಾಗಿ ನಗುನಗುತ್ತಾ ದೇವರ ಮುಂದೆ ಹೇಳಿದರಂತೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications