6 ಗಂಟೆಗಳ ಕಾಲ ಮುಚ್ಚಿದ ಪಾಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಇಸ್ಲಾಮಾಬಾದ್ : ಪಾಕಿಸ್ತಾನದ ರಾಜಧಾನಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶುಕ್ರವಾರ ಸುಮಾರು 6 ಗಂಟೆಗಳಿಗೂ ಹೆಚ್ಚುಕಾಲ ಮುಚ್ಚಲಾಗಿತ್ತು ಎಂದು ಪಾಕ್ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಕಾಲಮಾನದ ರೀತ್ಯ ಬೆಳಗಿನ ಜಾವ 3 ಗಂಟೆಯಿಂದ ಬೆಳಗ್ಗೆ 8.45ರವರೆಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು.
ಈ ವಿಷಯವನ್ನು ಪೊಲೀಸರು ದೃಢಪಡಿಸಿದ್ದಾರಾದರೂ, ಕಾರಣ ಏನು ಎಂಬುದನ್ನು ಬಹಿರಂಗ ಪಡಿಸಿಲ್ಲ. ಮಂಗಳವಾರ ನ್ಯೂಯಾರ್ಕ್‌ನ ವಿ-ಶ್ವ ವ್ಯಾಪಾ-ರ ಕೇಂದ್ರ-ದ ಅವ-ಳಿ ಗಗನಚುಂಬಿ ಕಟ್ಟ-ಡದ ಮೇಲೆ ನಡೆದ ವಾಯು ದಾಳಿ-ಯ ಪ್ರ-ಮು-ಖ ಸೂತ್ರ--ಧಾ-ರ ಎಂದು ಭಾ-ವಿ-ಸ-ಲಾ-ಗಿ-ರು-ವ ಒಸಾ-ಮ ಬಿನ್ ಲ್ಯಾಡೆ-ನ್ ಅಡ-ಗಿ-ಕೊಂ-ಡಿದ್ದಾನೆನ್ನುವ ಆಪ್ಘಾ-ನಿ--ಸ್ತಾ-ನ-ದ ಮೇ-ಲೆ ದಾಳಿ ನಡೆ-ಸು-ವ ಇಂಗಿ-ತ-ವ-ನ್ನು ಅಮೆ-ರಿ-ಕ ವ್ಯಕ್ತ-ಪ-ಡಿ-ಸಿ-ದೆ. ಇದ-ಕ್ಕಾ-ಗಿ ಪಾಕ್ ವಾ-ಯುನೆಲೆ-ಯ-ನ್ನು ಬಳಸಿಕೊಳ್ಳಲು ಕೋರಿದೆ ಎನ್ನಲಾಗಿರುವ ಸುದ್ದಿಗೂ, ವಿಮಾನ ನಿಲ್ದಾಣ ಮುಚ್ಚಿದ್ದಕ್ಕೂ ಸಂಬಂಧ ಇದೆಯೇ ಎಂಬುದು ಈಗಿನ ಪ್ರಶ್ನೆ.
ಈ ಮಧ್ಯೆ ಪಾಕಿಸ್ತಾನದ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರು, ಮಿಲಿಟರಿಯ ಹಿರಿಯ ಅಧಿಕಾರಿಗಳೊಂದಿಗೆ ಅಮೆರಿಕಾ ಕೋರಿಕೆಯ ಸಂಬಂಧ ಹಾಗೂ ಅಮೆರಿಕಾ ಮೇಲಿನ ಹಲ್ಲೆಗೆ ಕಾರಣರಾದ ದುಷ್ಕರ್ಮಿಗಳ ಬೇಟೆಗೆ ನೆರವಾಗುವ ವಿಷಯಕ್ಕೆ ಸಂಬಂಧಿಸದಂತೆ ಸಮಾಲೋಚನೆ ನಡೆಸಿದ್ದಾರೆ ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ.
ಯುಎಸ್ ಸೆಕ್ರೇಟರಿ ಆಫ್ ಸ್ಟೇಟ್ ಕೋಲಿನ್ ಪೋವೆಲ್ ಅವರು ಸೆಪ್ಟೆಂಬರ್ 13ರಂದು ನ್ಯೂಯಾರ್ಕ್ ಹಾಗೂ ವಾಷಿಂಗ್ಟನ್ ಮೇಲೆ ನಡೆದ ವಾಯು ದಾಳಿಗೆ ಒಸಾಮ ಬಿನ್ ಲೆಡನ್‌ನೇ ಕಾರಣ ಎಂದು ಶಂಕಿಸಿದ್ದರು.
(ಪಿ.ಟಿ.ಐ/ಎಎಫ್‌ಪಿ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications