Get Updates
Get notified of breaking news, exclusive insights, and must-see stories!

ಕಾವೇರಿ : ಶನಿವಾರ ಕರ್ನಾಟಕ ನಿಯೋಗದಿಂದ ಪ್ರಧಾನಿ ಭೇಟಿ

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಕೃಷ್ಣ ನೇತೃತ್ವದ ಸರ್ವಪಕ್ಷ ನಿಯೋಗ ಶನಿವಾರ ಸಂಜೆ 4.30ಕ್ಕೆ ದೆಹಲಿಯಲ್ಲಿ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದೆ. ಮಳೆಯಿಲ್ಲದೆ ಕರ್ನಾಟಕವೇ ನೀರಿನ ಕೊರತೆ ಅನುಭವಿಸುತ್ತಿರುವುದರಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಂಶವನ್ನು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡಲಿದೆ.

ಕರ್ನಾಟಕದ ಜಲಾಶಯಗಳಲ್ಲಿ ಪ್ರಸಕ್ತ ಇರುವ ನೀರಿನ ಪ್ರಮಾಣ ಎಷ್ಟು, ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಎಷ್ಟು ನೀರಿನ ಅಗತ್ಯ ಇದೆ. ಬರದಿಂದ ರಾಜ್ಯದಲ್ಲಿ ಉಂಟಾಗಿರುವ ನೀರಿನ ಅಭಾವ ಹಾಗೂ ತಮಿಳುನಾಡಿಗೆ ಏಕೆ ನೀರು ಬಿಡಲಾಗುತ್ತಿಲ್ಲ ಎಂಬ ಎಲ್ಲಾ ವಿವರಗಳನ್ನೂ ಈ ನಿಯೋಗ ಕೇಂದ್ರಕ್ಕೆ ವಿವರಿಸಲಿದೆ.

ಸಂಜೆ 6-30ಕ್ಕೆ ರಾಷ್ಟ್ರಪತಿ ನಾರಾಯಣನ್‌ ಅವರನ್ನೂ ಭೇಟಿ ಮಾಡಿ, ನಿಯೋಗ ರಾಜ್ಯದ ಅಸಹಾಯಕತೆ ವಿವರಿಸಲಿದೆ. ಶುಕ್ರವಾರ ಸಂಜೆ ದೆಹಲಿಗೆ ಪ್ರಯಾಣ ಬೆಳಸಲಿದೆ. ನಿಯೋಗದಲ್ಲಿ ಸಚಿವರಾದ ಎಚ್‌.ಸಿ. ಶ್ರೀಕಂಠಯ್ಯ, ವಿರೋಧ ಪಕ್ಷದ ನಾಯಕ ಕೆ.ಎಚ್‌. ಶ್ರೀನಿವಾಸ್‌, ಸದಾನಂದಗೌಡ, ಚೆನ್ನಿಗಪ್ಪ, ಬಸವರಾಜ ಹೊರಟ್ಟಿ, ಸೋಮಶೇಖರ್‌, ವೆಂಕಟರಾವ್‌, ಭಕ್ತವತ್ಸಲಂ, ಮಾಜಿ ಸಚಿವ ನಾಣಯ್ಯ, ಸೂರ್ಯನಾರಾಯಣರಾವ್‌ ಮೊದಲಾದವರು ಇದ್ದಾರೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+