Get Updates
Get notified of breaking news, exclusive insights, and must-see stories!

10 ಉಗ್ರರ ಬಂಧನ ಮತ್ತೊಂದು ವಾಯು ದಾಳಿ ಯತ್ನ ವಿಫಲ

ನ್ಯೂಯಾರ್ಕ್‌ : ಕರಾಳ ಮಂಗಳವಾರ ಅಮೆರಿಕಾ ಮೇಲೆ ವಾಯುದಾಳಿ ನಡೆದ 2 ದಿನಗಳ ಒಳಗೇ ಇದೇ ಮಾದರಿಯ ಮತ್ತೊಂದು ವೈಮಾನಿಕ ದಾಳಿ ಪ್ರಯತ್ನವನ್ನು ಅಮೆರಿಕ ಭದ್ರತಾಪಡೆ ವಿಫಲಗೊಳಿಸಿದೆ. ಈ ಸಂಬಂಧ 10 ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ನಕಲಿ ಪರಿಚಯಪತ್ರ, ಗುರುತುಚೀಟಿ, ನಕಲಿ ವಿಮಾನ ಚಾಲನೆ ಪರವಾನಗಿ ಮತ್ತು ಚಾಕುಹೊಂದಿದ್ದ 10 ಜನರನ್ನು ಜಾನ್‌ ಎಫ್‌ ಕೆನಡಿ ಮತ್ತು ಲಾಗಾರ್ಡಿಯಾ ವಿಮಾನ ನಿಲ್ದಾಣಗಳಲ್ಲಿ ಗುರುವಾರ ಸಂಜೆ ಬಂಧಿಸಲಾಗಿದೆ. ಇವರು, ಮತ್ತೊಂದು ವಿಮಾನ ಅಪಹರಿಸಿ, ದಾಳಿ ನಡೆಸಲು ಯೋಜಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ಜಾನ್‌ ಎಫ್‌ ಕೆನಡಿ ವಿಮಾನ ನಿಲ್ದಾಣದಿಂದ ಲಾಸ್‌ ಏಂಜಲೀಸ್‌ನತ್ತ ಹೊರಡಬೇಕಿದ್ದ ವಿಮಾನದಲ್ಲಿ ಆಸೀನರಾಗಿದ್ದ ಎಲ್ಲ ಪ್ರಯಾಣಿಕರನ್ನು ಆಮೂಲಾಗ್ರವಾಗಿ ತಪಾಸಣೆ ಮಾಡುತ್ತಿದ್ದಾಗ ನಾಲ್ವರು ಶಂಕಿತ ಉಗ್ರರು ಸಿಕ್ಕಿಬಿದ್ದರು. ಈ ಹಿನ್ನೆಲೆಯಲ್ಲಿ ಈ ಎರಡೂ ವಿಮಾನ ನಿಲ್ದಾಣಗಳನ್ನು ಮತ್ತೆ ಕಾರ್ಯಾರಂಭ ಮಾಡಿದ ಕೆಲವೇ ಹೊತ್ತಿನಲ್ಲಿ ಮುಚ್ಚಲಾಯಿತು.

ಈ ಘಟನೆಯ ಬಗ್ಗೆ ಟೆಲಿವಿಷನ್‌ಗೆ ಸಂದರ್ಶನ ನೀಡಿರುವ ಪ್ರಯಾಣಿಕರೊಬ್ಬರು ಉಗ್ರರು ವಿಮಾನ ಹಾರಲಿ ಎಂದು ಕಾಯುತ್ತಿದ್ದರು, ಆದರೆ, ಅಷ್ಟುಹೊತ್ತಿಗೆ ಅವರು ಸಿಕ್ಕಿಬಿದ್ದರು ಎಂದು ತಿಳಿಸಿದ್ದಾರೆ. ಈ ಘಟನೆಯಿಂದ ಪ್ರಯಾಣಿಕರು ಮತ್ತಷ್ಟು ಆತಂಕಕ್ಕೆ ಒಳಗಾದರಾದರೂ, ವಿಮಾನ ಹಾರಾಟಕ್ಕೆ ಮೊದಲೇ ಉಗ್ರರು ಸಿಕ್ಕಿಬಿದ್ದ ಬಗ್ಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬಂಧಿತ ಶಂಕಿತ ಉಗ್ರರನ್ನು ವಿಚಾರಣೆಗೆ ಗುರಿಪಡಿಸಲಾಗಿದ್ದು, ಪೊಲೀಸರು ಈ ಸಂಬಂಧ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಅವರ ಉದ್ದೇಶ ಮತ್ತೊಂದು ವಾಯು ದಾಳಿಯಾಗಿದ್ದಿರಬಹುದು ಎಂದು ಅವರು ಹೇಳಿದ್ದಾರೆ.

ಅಮೆರಿಕಾ ತಾಕೀತು : ಅಮೆರಿಕದ ಮೇಲೆ ನಡೆದಿರುವ ದಾಳಿ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಪತ್ತೆಗೆ ಸಂಪೂರ್ಣ ನೆರವು ನೀಡುವುದಾಗಿ ಪಾಕಿಸ್ತಾನ ತಿಳಿಸಿದ್ದಾಗ್ಯೂ, ವಾಯು ನೆಲೆ ಸ್ಥಾಪಿಸುವ ಅಮೆರಿಕದ ಕೋರಿಕೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಕೋರಿದೆ. ಈ ಮಧ್ಯೆ ಅಮೆರಿಕವು ಆಫ್ಘಾನಿಸ್ತಾನ ಗಡಿ ಮುಚ್ಚವಂತೆ ಪಾಕ್‌ಗೆ ತಾಕೀತು ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+