ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಪಿಯರ್‌ ಬುಷ್‌ ಆಗಿದ್ದರೆ..

By Staff
|
Google Oneindia Kannada News

ಬೆಂಗಳೂರು : ನಾನೇನಾದರೂ ಅಮೆರಿಕಾ ಅಧ್ಯಕ್ಷ ಜಾರ್ಜ್‌ ಬುಷ್‌ ಆಗಿದ್ದರೆ, ಸಿಐಎ ಮತ್ತು ಎಫ್‌ಬಿಐ (ಅಮೆರಿಕಾದ ಬೇಹುಗಾರಿಕಾ ಸಂಸ್ಥೆಗಳು) ತಕ್ಷಣವೇ ನನ್ನ ಬೆಂಕಿಯಿಂದ ಸುಟ್ಟುಹೋಗುತ್ತಿದ್ದವು. ಮಂಗಳವಾರ ಅಮೆರಿಕಾದ ದುರಂತ ಅಲ್ಲಿನ ಬೇಹುಗಾರಿಕಾ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಫ್ರೆಂಚ್‌ ಲೇಖಕ ಡಾಮಿನಿಕ್‌ ಲ್ಯಾಪಿಯರ್‌ ಅಭಿಪ್ರಾಯ ಪಟ್ಟಿದ್ದಾರೆ.

ಭೋಪಾಲ್‌ ಅನಿಲ ದುರಂತ ಕುರಿತ ತಮ್ಮ ಕೃತಿ It Was Five Past Midnight in Bhopalನ್ನು ಬುಧವಾರ ನಗರದಲ್ಲಿ ಬಿಡುಗಡೆ ಮಾಡಿ, ಅವರು ಮಾತಾಡುತ್ತಿದ್ದರು. ಅಮೆರಿಕೆಯಲ್ಲಿ ನಡೆದಿರುವ ದುರಂತ ತಮ್ಮ The Fifth Horseman ಕೃತಿಯನ್ನು ನೆನಪಿಗೆ ತರುತ್ತದೆ ಎಂದರು. ಆ ಕೃತಿಯ ವಸ್ತು ಕೂಡ ನ್ಯೂಯಾರ್ಕ್‌ ಮೇಲೆ ಭಯೋತ್ಪಾದಕರ ದಾಳಿ !

ಭೋಪಾಲ್‌ ಅನಿಲ ದುರಂತದಲ್ಲಿ ಸಾವಿರಾರು ಅಮಾಯಕರು ಸತ್ತಿದ್ದಾರೆ. ಲಕ್ಷಾಂತರ ಮಂದಿ ಹೊಡೆತಕ್ಕೆ ಸಿಲುಕಿ ಇಂದಿಗೂ ಒದ್ದಾಡುತ್ತಿದ್ದಾರೆ. ಇದಕ್ಕೂ ದೊಡ್ಡ ದುರಂತವೆಂದರೆ, ಇಂಥಾ ಅವಘಡಕ್ಕೆ ಕಾರಣವಾದ ಯಾವುದೇ ಪ್ರಾಧಿಕಾರ ಕೂಡ ಸಂತ್ರಸ್ತರಲ್ಲಿ ಕ್ಷಮೆ ಯಾಚಿಸಿಲ್ಲ. ಭಾರತದಲ್ಲಿ ಕಾರ್ಮಿಕ ಕಾಯ್ದೆಗಳಲ್ಲಿ ಮಾರ್ಪಾಟು ಅಗತ್ಯ. ಬೆಂಗಳೂರು ಸುಂದರ ನಗರಿ. ಮಾಹಿತಿ ತಂತ್ರಜ್ಞಾನದ ಮೂಲಕ ಸದ್ದು ಮಾಡುತ್ತಿರುವ ಇಲ್ಲಿನವರು ಮನಸ್ಸು ಮಾಡಿ, ಮುಂದೆ ಭೋಪಾಲ್‌ನಂಥಾ ದೊಡ್ಡ ದುರಂತ ಸಂಭವಿಸದಂತೆ ಎಚ್ಚರಿಕೆಯಿಂದಿರಲಿ ಎಂದು ಕರೆ ಕೊಟ್ಟರು.

ಬೆಂಗಳೂರನ್ನು ನೋಡಿದರೆ ಖುಷಿಯಾಗುತ್ತದೆ. ಭಾರತ ಅಭಿವೃದ್ಧಿ ಪಥದಲ್ಲಿ ಸಾಗಿದೆ ಅನ್ನುವುದಕ್ಕೆ ಈ ನಗರಿಯೇ ಕನ್ನಡಿ. ಕಲ್ಕತ್ತಾದಲ್ಲಿ ಲವಲವಿಕೆಯೇ ಇಲ್ಲ. ಆದರೆ, ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ‘ಗಾರ್ಡನ್‌ ಸಿಟಿ ಆಫ್‌ ಇಂಡಿಯಾ’ವನ್ನು ತೊಳೆಯಲೇಬೇಕಾಗಿದೆ ಎಂದರು.

(ಇನ್ಫೋ ವಾರ್ತೆ)

Post your opinion

‘ಸಿಟಿ ಆಫ್‌ ಜಾಯ್‌’ಲೇಖಕ ಡಾಮಿನಿಕ್‌ ಲ್ಯಾಪಿಯರ್‌ ಬೆಂಗಳೂರಲ್ಲಿ

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X