Get Updates
Get notified of breaking news, exclusive insights, and must-see stories!

ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್‌ಗೆ ಆಸ್ರಣ್ಣ ಪ್ರಶಸ್ತಿ

ಮಂಗಳೂರು : ಪ್ರಸಿದ್ಧ ಯಕ್ಷಗಾನ ಕಲಾವಿದ, ಸ್ತ್ರೀ ಪಾತ್ರಧಾರಿ ಕೋಳ್ಯೂರು ರಾಮಚಂದ್ರ ರಾವ್‌ ಈ ಬಾರಿಯ ಆಸ್ರಣ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಟೀಲು ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಹಾಗೂ ಆಡಳಿತ ಮೊಕ್ತೇಸರರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ದಿವಂಗತ ಗೋಪಾಲ ಕೃಷ್ಣ ಆಸ್ರಣ್ಣರ ಸ್ಮರಣಾರ್ಥ , ಕದ್ರಿಯ ಅವರ ಶಿಷ್ಯವೃಂದದವರು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಪ್ರಶಸ್ತಿಯು ಕಟೀಲು ದೇವಿ ಭ್ರಮರಾಂಬಿಕೆಯ ಚಿತ್ರವುಳ್ಳ ಚಿನ್ನದ ಪದಕ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನೊಳಗೊಂಡಿದೆ.

ಕೋಳ್ಯೂರು ರಾಮಚಂದ್ರ ರಾವ್‌ ಅವರು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಾ ಬಂದವರು. ಪುಂಡುವೇಷ, ಅಗ್ರಪಂಕ್ತಿಯ ಸ್ತ್ರೀ ವೇಷ, ಅರ್ಥದಾರಿಯಾಗಿ, ನಾಟ್ಯಗುರುವಾಗಿ ರಂಗದ ಮೇಲೆ ಕೋಳ್ಯೂರು ಅವರು ಪ್ರೇಕ್ಷಕರ ಮನ ಗೆಲ್ಲುತ್ತಾರೆ.

ಧರ್ಮಸ್ಥಳ, ಕಟೀಲು, ಕರ್ನಾಟಕ, ಇರಾ, ಕೂಡ್ಲು, ಬಪ್ಪನಾಡು, ಕದ್ರಿ ಮೇಳಗಳಲ್ಲಿ ಕಲಾವಿದರಾಗಿ ಕೋಳ್ಯೂರು ಅವರು ಕೆಲಸ ಮಾಡಿದ್ದಾರೆ. ಈ ತಿಂಗಳ 16 ರಂದು ಕಟೀಲಿನ ದಿ। ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾ ಭವನದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ಬಂಧುಗಳು ಆಯೋಜಿಸಿರುವ ಸಂಸ್ಮರಣಾ ಕಾರ್ಯಕ್ರಮದಲ್ಲಿ ಕೋಳ್ಯೂರು ಅವರಿಗೆ ಆಸ್ರಣ್ಣ ಪ್ರಶಸ್ತಿ ಪ್ರದಾನ ಮಾಡಲಾಗುವುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+