ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ಸೇರಿದಂತೆ ಐಟಿ ಕಂಪನಿಗಳಿಗೆ ಕಟ್ಟೆಚ್ಚರದ ಭದ್ರತೆ-ಖರ್ಗೆ

By Staff
|
Google Oneindia Kannada News

ಬೆಂಗಳೂರು : ಇನ್ಫೋಸಿಸ್‌ ಹಾಗೂ ವಿಪ್ರೋ ಸೇರಿದಂತೆ ರಾಜ್ಯದ ಪ್ರಮುಖ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಗಳಿಗೆ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ ಎಂದು ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಅಮೆರಿಕಾದ ಮೇಲಿನ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಪೊಲೀಸ್‌ ಕಂಟ್ರೋಲ್‌ ರೂಂನ್ನು ದೂರವಾಣಿ ಸಂಖ್ಯೆ 080- 2256242 ಸಂಪರ್ಕಿಸುವ ಮೂಲಕ ಅಮೆರಿಕಾದಲ್ಲಿ ನೆಲೆಸಿರುವ ಸಂಬಂಧಿಕರು ಹಾಗೂ ಸ್ನೇಹಿತರ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆಯಬಹುದು ಎಂದು ಖರ್ಗೆ ತಿಳಿಸಿರುವುದಾಗಿ explocity.com ವರದಿ ಮಾಡಿದೆ. 080- 2210391 ಹಾಗೂ 080- 2211777 ದೂರವಾಣಿ ಸಂಖ್ಯೆಗಳನ್ನು ಮಾಹಿತಿಗಾಗಿ ಸಂಪರ್ಕಿಸಬಹುದು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ವಿ.ಭಾಸ್ಕರ್‌ ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಂಪನಿಗಳು ಮಾತ್ರವಲ್ಲದೆ ವಿಮಾನ ನಿಲ್ದಾಣ, ವಿಧಾನ ಸೌಧ, ಸರ್ಕಾರದ ಪ್ರಮುಖ ಕಟ್ಟಡಗಳು, ವಾಣಿಜ್ಯ ಸಮುಚ್ಛಯಗಳು ಹಾಗೂ ರಾಜ್ಯದ ಪ್ರಮುಖ ಜಲಾಶಯಗಳಿಗೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ. ತೆರೇಸಾ ಭಟ್ಟಾಚಾರ್ಯ ನೇತೃತ್ವದಲ್ಲಿನ ಪ್ರಕೋಪ ನಿರ್ವಹಣಾ ಸಮಿತಿ ಪರಿಸ್ಥಿತಿಯ ಬಗ್ಗೆ ತೀವ್ರ ನಿಗಾ ವಹಿಸಿದೆ ಎಂದು ಖರ್ಗೆ ಹೇಳಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X