ಹನ್ನೆರಡಕ್ಕೂ ಹೆಚ್ಚು ಹೈಜಾಕರ್‌ಗಳ ಬಗೆಗೆ ಮಹತ್ವದ ಮಾಹಿತಿ ಪತ್ತೆ
ವಾಷಿಂಗ್ಟನ್: ಮಂಗಳವಾರದ ಬಾಂಬ್ ದಾಳಿಗೆ ಸಂಬಂಧಿಸಿದಂತೆ 12 ಕ್ಕೂ ಹೆಚ್ಚು ಹೈಜಾಕರ್‌ಗಳ ಬಗೆಗೆ ಅಮೆರಿಕನ್ ಪ್ರಾಧಿಕಾರಗಳು ಮಾಹಿತಿಯನ್ನು ಸಂಗ್ರಹಿಸಿದ್ದು, ಈ ಹೈಜಾಕರ್‌ಗಳು ಬಿನ್ ಲ್ಯಾಡೆನ್ ಹಾಗೂ ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಬಗೆಗೆ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.
ಕೆನೆಡಿಯನ್ ಬಾರ್ಡರ್‌ನಲ್ಲಿ ವ್ಯಾಪಕ ತನಿಖೆ ನಡೆದಿದ್ದು , ಫ್ಲೋರಿಡಾ ಮೂಲಕ ಹೈಜಾಕರ್‌ಗಳು ದೇಶವನ್ನು ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದೆ. ದಾಳಿಗೆ ಮುನ್ನ ವಾಣಿಜ್ಯ ವಿಮಾನಗಳನ್ನು ಹಾರಿಸುವ ಬಗೆಗೆ ಕೆಲವರು ಅಭ್ಯಾಸ ನಡೆಸಿದ್ದಾರೆ. ಕೆಲವು ಭಯೋತ್ಪಾದಕರು ಪೈಲಟ್ ಲೈಸನ್ಸ್‌ಗಳನ್ನೂ ಹೊಂದಿದ್ದರು ಎಂದು ಹೇಳಲಾಗಿದೆ.
ಫ್ಲೋರಿಡಾದಲ್ಲಿ ನ ಕುಟುಂಬವೊಂದನ್ನು ಎಫ್‌ಬಿಐ ಪ್ರಶ್ನಿಸಿದ್ದು , ಈ ಕುಟುಂಬದಲ್ಲಿ ವರ್ಷದ ಹಿಂದೆ ತಾತ್ಕಾಲಿಕ ಆಶ್ರಯ ಪಡೆದಿದ್ದ ಇಬ್ಬರು ಭಯೋತ್ಪಾದಕರ ಹೆಸರುಗಳು ತಿಳಿದುಬಂದಿದೆ. ಸೌದಿ ಅರೇಬಿಯಾ ಹಾಗೂ ಈಜಿಪ್ಟ್‌ನ ಹಲವು ಭಯೋತ್ಪಾದಕ ಸಂಘಟನೆಗಳೊಂದಿಗೆ ಈ ಹೈಜಾಕರ್‌ಗಳು ಸಂಪರ್ಕ ಹೊಂದಿರುವ ಕುರಿತು ಗುಮಾನಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈವರೆಗೂ ಭಯೋಕತ್ಪಾದಕರ ದಾಳಿಗೆ ಸಂಬಂಧಿಸಿದಂತೆ ಯಾರ ಮೇಲೂ ಪ್ರಕರಣಗಳನ್ನು ದಾಖಲು ಮಾಡಿಲ್ಲ .
(ಪಿಟಿಐ)