ಉಗ್ರರ ಆಕ್ರಮಣ : ಅಮೆರಿಕದಲ್ಲಿ 10 ಸಾವಿರ ಸಾವಿನ ಶಂಕೆ
ನ್ಯೂಯಾರ್ಕ್ : ಅಮೆರಿಕದ ಮೇಲೆ ಉಗ್ರರು ನಡೆಸಿರುವ ಆಕ್ರಮಣದಲ್ಲಿ ಹತ್ತು ಸಾವಿರ ಮಂದಿ ಸತ್ತಿರಬಹುದು ಇಲ್ಲವೆ ಗಾಯಗೊಂಡಿರಬಹುದು ಎಂದು ಶಂಕಿಸಲಾಗಿದೆ. ಒಂದರ ನಂತರ ಒಂದರಂತೆ ಅಮೇರಿಕದ ವಿವಿಧ ಸ್ಥಳಗಳಲ್ಲಿ ಮಂಗಳವಾರ ನಡೆದ ವಿಮಾನ ದಾಳಿಯಲ್ಲಿ ಸತ್ತವರ ಸಂಖ್ಯೆ ಸಾವಿರಗಳ ಸಂಖ್ಯೆಯಲ್ಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡ, ಪೆಂಟಗನ್‌ಗಳ ಮೇಲೆ ಮಂಗಳವಾರ, ಅಪಹೃತ ವಿಮಾನಗಳ ನೆರವಿನಿಂದ ಉಗ್ರಗಾಮಿಗಳು ದಾಳಿ ಮಾಡಿದ್ದರು. ಕಟ್ಟಡಗಳಿಗೆ ಬಲವಂತವಾಗಿ ವಿಮಾನಗಳನ್ನು ಡಿಕ್ಕಿ ಹೊಡೆಸಿ ಕಟ್ಟಡವನ್ನು ಧ್ವಂಸಗೊಳಿಸಿದರು.
110 ಅಂತಸ್ತುಗಳ ಬೃಹತ್ ಭವ್ಯ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆಸಿದ್ದರಿಂದ, ಕಟ್ಟಡ ಜಖಂಗೊಂಡಿದ್ದಲ್ಲದೆ, ಭಾರಿ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿತು. ಭಾರಿ ಹೊಗೆ ಇಡೀ ಪ್ರದೇಶವನ್ನೇ ಆವರಿಸಿತ್ತು. ಒಂದು ಗಂಟೆಯ ಬಳಿಕ ದಕ್ಷಿಣದ ಗೋಪುರ ಭಾರಿ ಶಬ್ದದೊಂದಿಗೆ ನೆಲಕ್ಕೆ ಕುಸಿಯಿತು.
ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಕಾರ್ಯ ನಿರ್ವಹಿಸುವ ಈ ಕಟ್ಟಡಲ್ಲಿ ಹತ್ತಾರು ಸಾವಿರ ಜನರು ಸತ್ತಿರಬಹುದು ಎಂದು ಹೇಳಲಾಗಿದೆ. ಅಮೆರಿಕದ ಮಿಲಿಟರಿ ಸಾರ್ವಭೌಮತೆಯ ಪ್ರತೀಕವಾದ ಪೆಂಟಗಾನ್ ಮೇಲೂ ದಾಳಿ ನಡೆದಿದೆ. ಪಿಟ್ಸ್‌ಬರ್ಗ್‌ನಲ್ಲಿ ಯುನೈಟೆಡ್ ಏರ್‌ಲೈನ್ಸ್ ವಿಮಾನ ಅಪಘಾತ ನಡೆದಿದೆ.
ಕರಾಳ ಮಂಗಳವಾರ ನಡೆದ ಕೆಲವು ಘಟನೆಗಳ ವಿವರ :
ಅಮೆರಿಕ ಕಾಲಮಾನ ಬೆಳಗ್ಗೆ 8:55 (ಭಾರತೀಯ ಕಾಲಮಾನ ಸಂಜೆ 6.25) - ಮೊದಲ ಅಪಹೃತ ವಿಮಾನ ವಿಶ್ವ ವಾಣಿಜ್ಯಕೇಂದ್ರದ ಅವಳಿ ಕಟ್ಟಡಕ್ಕೆ ಅಪ್ಪಳಿಸಿತು.
9:05 - ಎರಡನೇ ವಿಮಾನ ಮತ್ತೊಮ್ಮೆ ಇದೇ ಕಟ್ಟಡಕ್ಕೆ ಡಿಕ್ಕಿ ಹೊಡೆಯಿತು.
9:28 - ವಿಷಯ ತಿಳಿದು ಬೋಸ್ಟನ್ ಪ್ರವಾಸ ಮೊಟಕುಗೊಳಿಸಿ ವಾಷಿಂಗ್ಟನ್‌ಗೆ ಹಿಂತಿರುಗಿದ ಅಧ್ಯಕ್ಷ ಜಾರ್ಜ್ ಬುಷ್‌ರಿಂದ ಭಯೋತ್ಪಾದಕರನ್ನು ಬೇಟೆಯಾಡುವುದಾಗಿ ಘೋಷಣೆ.
9:45 - ಪೆಂಟಗನ್ ಮೇಲೆ ಮೂರನೇ ವಿಮಾನ ದಾಳಿ
9:48 - ಪ್ರಮುಖ ಕಟ್ಟಡಗಳಿಂದ ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ
9:49 - ಎಲ್ಲ ವಿಮಾನಗಳ ಸಂಚಾರ ಸ್ಥಗಿತ
10:00 - ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡ ಭಾರಿ ಶಬ್ದದೊಂದಿಗೆ ಕುಸಿತ
10:30 - ವಿಶ್ವ ವಾಣಿಜ್ಯ ಕೇಂದ್ರದ ಎರಡನೇ ಕಟ್ಟಡ ನೆಲಸಮ
11:27- ಏರ್‌ಲೈನ್ಸ್‌ನ 2 ವಿಮಾನ ಅಪಹರಣವಾಗಿದೆ ಎಂದು ಅಧಿಕೃತ ಪ್ರಕಟಣೆ
11:29 - ಪಿಟ್ಸ್‌ಬರ್ಗ್‌ನಲ್ಲಿ ಯುನೈಟೆಡ್ ಏರ್‌ಲೈನ್ಸ್ ವಿಮಾನ ಅಪಘಾತ
12:33 - ಯುನೈಟೆಡ್ ಏರ್‌ಲೈನ್ಸ್‌ನ ಮತ್ತೊಂದು ವಿಮಾನ ಅಪಘಾತ
12:39 - ಕಟ್ಟೆಚ್ಚರ ವಹಿಸುವಂತೆ ಸಶಸ್ತ್ರ ಪಡೆಗಳಿಗೆ ಬುಷ್ ಸೂಚನೆ
(ಪಿ.ಟಿಐ/ಇನ್‌ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications