Get Updates
Get notified of breaking news, exclusive insights, and must-see stories!

ಅವಳಿ ಕಟ್ಟಡಗಳ ಅವಶೇಷಗಳಡಿ ಜೀವಗಳಿನ್ನೂ ಉಸಿರಾಡುತ್ತಿವೆಯೇ?

Twin Buildings of World Trade Centre after 2 aircraks crashನ್ಯೂಯಾರ್ಕ್‌ : ನ್ಯೂಯಾರ್ಕ್‌ನ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆದು ದಿನವೊಂದು ಉರುಳಿದ ನಂತರವೂ ಅದ್ಭುತಗಳಿಗಾಗಿ, ಪವಾಡಗಳಿಗಾಗಿ ಅಮೆರಿಕಾದ ಮಂದಿ ಕಾಯುತ್ತಿದ್ದಾರೆ. ತುರ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರ್ಯಕರ್ತರು ಕುಸಿದ ಕಟ್ಟಡ, ಬೆಂಕಿಯುಂಡೆಗಳ ನಡುವೆ ಪವಾಡ ಸದೃಶವಾಗಿ ಬದುಕುಳಿದವರಿದ್ದಾರೆಯೇ ಎಂದು ಹುಡುಕುತ್ತಿದ್ದಾರೆ.

ಬಂಧುಗಳ ಬಗ್ಗೆ ಯಾವ ಸುಳಿವೂ ಸಿಗದೇ ಕಾತರಿಸುತ್ತಿರುವವರು ನಮ್ಮವರ ಸುದ್ದಿಯೇನಾದರೂ ಬರಬಹುದೇ ಎಂಬ ಆಸೆಯಿಂದ ತುರ್ತುಪರಿಹಾರ ಕಾರ್ಯಕರ್ತರ ಅಧಿಕಾರಿಗಳನ್ನು ಸಂಪರ್ಕಿಸುತ್ತಲೇ ಇದ್ದಾರೆ. ಮಂಗಳವಾರ ತಡ ರಾತ್ರಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಮತ್ತು ಒಬ್ಬ ವ್ಯಕ್ತಿಯನ್ನು ಪಾರುಮಾಡಲಾಗಿದೆ. ಇದರಿಂದ ಮತ್ತಷ್ಟು ಮಂದಿ ತಮ್ಮ ಬಳಗದವರೂ ಉಸಿರು ಸಮೇತ ಸಿಗಬಹುದೇನೋ ಎಂದು ಕಾತರಿಸುತ್ತಿದ್ದಾರೆ.

ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ನ್ಯೂಯಾರ್ಕ್‌ನಲ್ಲಿ ಭಾರತೀಯ ಎರಡು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿದೆ. ಅಗತ್ಯವಿದ್ದವರು ಸಂಪರ್ಕಿಸಬಹುದು ಎಂದು ಕಚೇರಿಯ ಪ್ರಕಟಣೆ ತಿಳಿಸಿದೆ. (ಆರ್‌. ಕೆ. ಸಿಂಗ್‌ -001-212-774-0625, ಎ.ಎಸ್‌ ಬಾಜಪೇಯಿ - 001-212-774-0604) .

ಮಾಧ್ಯಮದವರು ಎಫ್‌ಬಿಐಯನ್ನು ಸಂಪರ್ಕಿಸುವಂತೆ ಆದೇಶಿಸಲಾಗಿದೆ. ಅಮೆರಿಕದ ಕುಟುಂಬದವರನ್ನು ಸಂಪರ್ಕಿಸಲು- 1-800-245-0999 ಹಾಗೂ 1-800-932-8555, ನಂಬರ್‌ಗಳನ್ನು ನೀಡಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+