ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಜೀವ ಉಳಿಸಿದ ಪುಣ್ಯ ನಿಮ್ಮದೂ ಆಗಲಿ

By Staff
|
Google Oneindia Kannada News

ಬೆಂಗಳೂರು : ಬಲಹೀನ ಕೈಯಾಂದನ್ನು ಮೇಲೆತ್ತಿ ಸಹಾಯ ನಿರೀಕ್ಷಿಸುತ್ತಿರುವ ಜೀವಗಳನ್ನು ಉಳಿಸಲು ರೆಡ್‌ ಕ್ರಾಸ್‌ ಸಂಸ್ಥೆ ಉಸಿರು ಬಿಗಿ ಹಿಡಿದು ಕೆಲಸ ಮಾಡುತ್ತಿದ್ದು, ಅತ್ಯಂತ ಜರೂರಾಗಿ ರಕ್ತದ ಅವಶ್ಯಕತೆ ಇರುವುದಾಗಿ ಪ್ರಕಟಣೆ ಹೊರಡಿಸಿದೆ. ವಿಶ್ವದ ಯಾವ ಮೂಲೆಯಿಂದಾದರೂ ಸರಿ ,ರಕ್ತ ನೀಡುವವರು ರೆಡ್‌ ಕ್ರಾಸ್‌ ಸಂಸ್ಥೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳು ದುಷ್ಕರ್ಮಿಗಳ ದಾಳಿಗೆ ತುತ್ತಾಗಿದೆ. ನಿನ್ನೆಯಷ್ಟೇ ಜಗತ್ತಿನ ಅತೀ ಎತ್ತರದ ಕಟ್ಟಡದಲ್ಲಿ , ಮಾತ್ರವಲ್ಲ ಅತೀ ಮುಖ್ಯ ಸಂಸ್ಥೆಯಲ್ಲಿ ಅಧಿಕಾರಿಗಳಾಗಿದ್ದ ಹಲವರು ಇಂದು ಜಗತ್ತಿನಿಂದ ಕಣ್ಮರೆಯಾಗಿದ್ದಾರೆ. ಇನ್ನು ಸಾವಿರಾರು ಮಂದಿ ಜೀವದೊಡನೆ ಹೋರಾಡುತ್ತಿದ್ದಾರೆ. ಅಲ್ಲಿ ಎಲ್ಲಿಯೋ ದೂರದಲ್ಲಿ ನಡೆದ ಘಟನೆಯೆಂದು ನೀವು ಕೈಬೀಸಿ ನಡೆಯುವುದನ್ನು ನಿಮ್ಮ ಹೃದಯವೇ ಒಪ್ಪುವುದಿಲ್ಲ. ಹೇಗಾದರೂ ಸಹಾಯ ಮಾಡಬೇಕು ಎಂಬ ಸಣ್ಣ ಎಳೆಯಾಂದು ನಿಮ್ಮ ಎದೆಯಲ್ಲಿ ಹಾದು ಹೋದರೆ ಅದನ್ನು ಅದುಮಿಡಬೇಡಿ.

ಗುಜರಾತ್‌, ಒರಿಸ್ಸಾ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಿ ಕಳುಹಿಸಿದ ಹಾಗೆ ಇನ್ನೊಂದು ನಿಧಿ ಸಂಗ್ರಹಣೆಗೆ ಪ್ಲಾನ್‌ ಹಾಕುವುದು ಅಷ್ಟೇನೂ ಉಪಯೋಗವಾಗಲಿಕ್ಕಿಲ್ಲ. ಯಾಕೆಂದರೆ ಅಮೆರಿಕಾ ಜಗತ್ತಿನ ಬಲಿಷ್ಟ ರಾಷ್ಟ್ರ. ಹಾಗೆಂದು ಈ ಪರಿಸ್ಥಿತಿಯಲ್ಲಿ ಕ್ಷಣ ಕ್ಷಣಕ್ಕೂ ಸಾಯುತ್ತಿರುವ ಮಂದಿಯನ್ನು ಹೇಗೆ ಉಳಿಸಿಕೊಳ್ಳುವುದು? ಜೀವವೊಂದನ್ನು ಉಳಿಸಿ ಪುಣ್ಯ ಕಟ್ಟಿಕೊಳ್ಳುವ ಅವಕಾಶ ಈಗ ನಿಮ್ಮ ಮುಂದಿದೆ.

ರೆಡ್‌ ಕ್ರಾಸ್‌ ಸಂಸ್ಥೆಯವರು ಮಾತಾಡಲು ಪುರುಸೊತ್ತಿಲ್ಲದೇ ಗಾಯಗೊಂಡವರನ್ನು ಬಚಾವ್‌ ಮಾಡುವ ಕೆಲಸ ಮಾಡುತ್ತಿದ್ದಾರೆ. ರಕ್ತ ನಿಧಿಯಲ್ಲಿ ರಕ್ತದ ಕೊರತೆ ಉಂಟಾಗಿದ್ದು, ಅತ್ಯಂತ ತುರ್ತಾಗಿ ರಕ್ತ ಬೇಕಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಒ ನೆಗೆಟಿವ್‌ ಗ್ರೂಪ್‌ನ ರಕ್ತ ಆಗಲೇ ಮುಗಿದು ಹೋಗಿದೆ. ಅಲ್ಲದೆ ಅತ್ಯಂತ ಅಗತ್ಯವಿರುವ ರಕ್ತದ ಗುಂಪು ಕೂಡ ಒ ನೆಗೆಟಿವ್‌.

ದಯವಿಟ್ಟು ತಕ್ಷಣ ಸಂಪರ್ಕಿಸಿ 1-800-448-3543

ರಕ್ತದಾನ ಮಾಡಲಿಚ್ಚಿಸುವವರು ಸಂಪರ್ಕಿಸಬೇಕಾದ ಫೋನ್‌ ನಂಬರ್‌ ಇಲ್ಲದೆ (1-800-448-3543). ಎಷ್ಟು ಬೇಗ ಸಂಪರ್ಕಿಸುತ್ತೀರೋ ಅಷ್ಟು ಜೀವಗಳು ಉಳಿದುಕೊಳ್ಳುತ್ತವೆ. ಬದುಕಿನುದ್ದಕ್ಕೂ ಆ ಜೀವದ ಹಾರೈಕೆ ನಿಮ್ಮ ಮೇಲಿರಬಹುದು. ನೀವು ಸ್ವತಃ ಆಸಕ್ತಿಯಿಂದ ಅಥವಾ ನಿಮ್ಮ ಸಂಘಟನೆಯ ಮೂಲಕ ರಕ್ತದಾನ ಮಾಡುತ್ತೀರಾ ?

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X