Get Updates
Get notified of breaking news, exclusive insights, and must-see stories!

ಭಯೋತ್ಪಾದಕತೆ ವಿರುದ್ಧ ಒಂದಾಗಲು ವಿಶ್ವ ಸಮುದಾಯಕ್ಕೆ ಪುಟಿನ್‌ ಕರೆ

ಮಾಸ್ಕೋ : ಅಮೆರಿಕ ಮೇಲಿನ ಪೈಶಾಚಿಕ ದಾಳಿಗಳ ವಿರುದ್ಧ ವಿಶ್ವದೆಲ್ಲೆಡೆ ಪ್ರತಿಭಟನೆಯ ಸೊಲ್ಲು ಕೇಳಿಬರುತ್ತಿರುವ ನಡುವೆ, 21 ನೇ ಶತಮಾನದ ಪಿಡುಗು ಭಯೋತ್ಪಾದಕತೆಯ ವಿರುದ್ಧ ಹೋರಾಡಲು ವಿಶ್ವ ಸಮುದಾಯ ಪರಸ್ಪರ ಕೈ ಜೋಡಿಸಬೇಕೆಂದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಕರೆ ನೀಡಿದ್ದಾರೆ.

ದುರಂತದಲ್ಲಿ ಜೀವ ಕಳಕೊಂಡವರಿಗೆ ಹಾಗೂ ಅವರ ಬಂಧುಗಳಿಗೆ ನಾನು ಕಂಬನಿ ಮಿಡಿಯುತ್ತೇನೆ, ಸಂತಾಪ ಸೂಚಿಸುತ್ತೇನೆ. ಈ ದಾಳಿ ಮಾನವತೆಗೆ ದೊಡ್ಡದೊಂದು ಸವಾಲನ್ನು ಒಡ್ಡಿದ್ದು , ಕನಿಷ್ಠ ಮಾನವೀಯತೆಯುಳ್ಳ ನಾಗರಿಕರು ಒಗ್ಗೂಡಬೇಕು ಎಂದು ಪುಟಿನ್‌ ಮಂಗಳವಾರ ರಾತ್ರಿ ತಿಳಿಸಿದ್ದಾರೆ.

ನಾವೆಲ್ಲ ನಿಮ್ಮೊಂದಿಗಿದ್ದೇವೆ. ನಿಮ್ಮ ನೋವುಗಳನ್ನು ಹಂಚಿಕೊಳ್ಳುತ್ತೇವೆ ಎಂದು ಪುಟಿನ್‌ ಅಮೆರಿಕನ್‌ ಜನತೆಯನ್ನುದ್ದೇಶಿಸಿ ಹೇಳಿದರು. ಈ ನಡುವೆ ಬ್ರಿಟನ್‌ ಪ್ರಧಾನಿ ಟೋನಿ ಬ್ಲೇರ್‌ ಹಾಗೂ ಜರ್ಮನ್‌ ಚಾನ್ಸ್‌ಲರ್‌ ಜೆರ್‌ಹಾರ್ಡ್‌ ಸ್ಕೊೃಯೆಡರ್‌ ಅವರು ಫೋನ್‌ ಮೂಲಕ ಪುಟಿನ್‌ ಅವರನ್ನು ಸಂಪರ್ಕಿಸಿದ್ದು , ಪೆಂಟಗನ್‌ ಹಾಗೂ ವಿಶ್ವ ವ್ಯಾಪಾರ ಕೇಂದ್ರಗಳ ಮೇಲೆ ನಡದಿರುವಂಥ ದಾಳಿಗಳ ವಿರುದ್ಧ ಹೊಸ ಭದ್ರತಾ ವ್ಯವಸ್ಥೆಗಳನ್ನು ಜಂಟಿಯಾಗಿ ಕೈಗೊಳ್ಳುವ ಕುರಿತು ಚರ್ಚಿಸಿದರು.

ಇಸ್ಲಾಂ ಭಯೋತ್ಪಾದಕರ ಸಂಭವನೀಯ ಪ್ರತಿಭಟನೆಗಳ ವಿರುದ್ಧ ಕಟ್ಟೆಚ್ಚರದಿಂದ ಇರುವಂತೆ ರಷ್ಯಾ ತನ್ನ ಪಡೆಗಳಿಗೆ ಸೂಚಿಸಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+