Get Updates
Get notified of breaking news, exclusive insights, and must-see stories!

ನ್ಯೂಯಾರ್ಕ್‌ನಲ್ಲಿ ಸ್ಫೋಟಕಗಳು ತುಂಬಿದ್ದ ಟ್ರಕ್‌ ವಶ, ಇಬ್ಬರ ಬಂಧನ

ನ್ಯೂಯಾರ್ಕ್‌ : ಇಲ್ಲಿನ ಜಾರ್ಜ್‌ ವಾಷಿಂಗ್ಟನ್‌ ಸೇತುವೆ ಬಳಿ ಸ್ಫೋಟಕಗಳನ್ನು ತುಂಬಿದ್ದ ಟ್ರಕ್ಕೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದು , ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಸ್ಫೋಟಕಗಳನ್ನು ತುಂಬಿದ್ದ ಟ್ರಕ್ಕನ್ನು ಪೊಲೀಸರು ವಶಪಡಿಸಿಕೊಂಡಿರುವ ವಿಷಯವನ್ನು ಸ್ಥಳೀಯ ಸಿಬಿಎಸ್‌ ಟೆಲಿವಿಷನ್‌ ವರದಿ ಮಾಡಿದೆ. ಮಂಗಳವಾರ ನಡೆದ ಸರಣಿ ಬಾಂಬ್‌ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕಾದ್ಯಂತ ಕಟ್ಟುನಿಟ್ಟಿನ ಬಂದೋಬಸ್ತ್‌ ಮಾಡಲಾಗಿದೆ. ಈ ನಡುವೆ ಪೈಶಾಚಿಕ ಕೃತ್ಯ ಎಸಗಿದವರನ್ನು ಕಂಡುಹಿಡಿಯಲು ಅಮೆರಿಕಾ ಬೇಹುಗಾರಿಕೆ ದಳ ಅವಿರತವಾಗಿ ಪ್ರಯತ್ನಿಸುತ್ತಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+