ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಕೆಲಸ ನನ್ನದಲ್ಲ, ಮಾಡಿರುವವರಿಗೆ ಜಿಂದಾಬಾದ್‌- ಬಿನ್‌ ಲ್ಯಾಡೆನ್‌

By Staff
|
Google Oneindia Kannada News

ನಾನು ಈ ಕೃತ್ಯ ಎಸಗಿಲ್ಲ. ಆದರೆ ಯಾವ ಮಹಾನುಭಾವರು ಈ ಒಳ್ಳೆ ಕೆಲಸ ಮಾಡಿದ್ದಾರೋ, ಅವರಿಗೆ ಜಿಂದಾಬಾದ್‌. ತುಳಿತಕ್ಕೆ ಸಿಕ್ಕವರು ಸಿಡಿದೆದ್ದರೆ, ತುಳಿದು ಅಟ್ಟಹಾಸ ಹಾಕುವವರ ಗತಿ ಹೀಗೆ ಆಗೋದು. ಹೀಗೆ ಆಗುವುದೇ ಸರಿ ಎಂದು ಅಮೆರಿಕಾ ಮೇಲಿನ ದಾಳಿ ಕುರಿತು ಬಿನ್‌ ಲ್ಯಾ-ಡೆನ್‌ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನಿ ಉರ್ದು ಪತ್ರಿಕೆ ಔಸಫ್‌ನ ಸಂಪಾದಕ ಹಮೀದ್‌ ಮಿರ್‌, ಲ್ಯಾ-ಡೆನ್‌ ವಕ್ತಾರ ಹೇಳಿರುವ ಮಾತುಗಳನ್ನು ಯಥಾವತ್ತು ಬರೆದಿದ್ದಾರೆ. ಈ ಮಾತುಗಳನ್ನು ಖುದ್ದು ಲ್ಯಾ-ಡೆನ್‌ ಅರೇಬಿಕ್‌ ಭಾಷೆಯಲ್ಲಿ ಬರೆದಿ-ದ್ದು, ಅದನ್ನು ವಕ್ತಾರ ಉರ್ದು ಭಾಷೆಗೆ ತರ್ಜುಮೆ ಮಾಡಿ ಹಮೀದ್‌ ಮಿರ್‌ ಮುಂದೆ ಓದಿದ್ದಾನೆ ಎಂದು ಔಸಫ್‌ ಬರೆದುಕೊಂಡಿದೆ.

ಪತ್ರಿಕೆ ಪ್ರಕಟಿಸಿರುವ ಲ್ಯಾಡನ್‌ ಹೇಳಿಕೆಯ ಸಾರ ಹೀಗಿದೆ...

  • ಅಮೆರಿಕಾ ಧಾಳಿಯಲ್ಲಿ ನನ್ನ ಕೈವಾಡವಿಲ್ಲ. ನನಗೆ ಗೊತ್ತಿರುವ ಯಾರೂ ಈ ಕೆಲಸ ಮಾಡಿಲ್ಲ. ಆದರೆ ಯಾರು ಮಾಡಿರುವರೋ ಅವರು ‘ಗ್ರಸ್ತರು’.
  • ಈ ದುರಂತದಲ್ಲಿ ಸಾವಿರಾರು ಅಮಾಯಕರು ಸತ್ತಿದ್ದಾರೆ ನಿಜ. ಆದರೆ, ಇದೇ ಅಮೆರಿಕಾದ ಭಯೋತ್ಪಾದಕ ಚಟುವಟಿಕೆಗಳಿಂದ ಸತ್ತ ಪ್ಯಾಲಸ್ಟೀನಿಯರೂ ಅಮಾಯಕರೇ ಅಲ್ಲವೇ?
  • ನನಗೂ ಈ ಧಾಳಿಗೂ ಸಂಬಂಧಿವಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದೇನೆ. ಹೀಗಿದ್ದೂ ನನ್ನನ್ನು ಕೊಲ್ಲಲು ಯತ್ನಿಸಿದಲ್ಲಿ ಅಮೆರಿಕಾವನ್ನು ಆ ದೇವರೂ ಕಾಪಾಡಲು ಸಾಧ್ಯವಿಲ್ಲ.
  • ಒಬ್ಬ ಒಸಾಮನನ್ನು ಅಮೆರಿಕದವರು ಕೊಂದರೆ, ನೂರಾರು ಒಸಾಮಗಳು ಅವರಿಗೆ ಗತಿ ಕಾಣಿಸಲು ಎದ್ದು ನಿಲ್ಲುತ್ತಾರೆ.
  • ನಾನು ಹೂಡಿರುವುದು ಪವಿತ್ರ ಯುದ್ಧ (ಜೆಹಾದ್‌). ಅದರಲ್ಲಿ ಜಯ ನನ್ನದೇ. ಜಗತ್ತಿನ ವಿವಿಧ ಮುಸ್ಲಿಂ ಬಂಧುಗಳು ನನ್ನ ಜೊತೆಗಿದ್ದಾರೆ. ಇವರಲ್ಲಿ ಜಗಜ್ಜಾಣರೂ ಅಸಂಖ್ಯ. ವಿಜ್ಞಾನಿಗಳು, ಎಂಜಿನಿಯರುಗಳು, ಸಂಶೋಧಕರೂ ಜೆಹಾದ್‌ನಲ್ಲಿ ನನ್ನ ಅನುಯಾಯಿಗಳು. ಆತ್ಮಹತ್ಯಾ ದಳದ ಸದಸ್ಯರಾಗಲು ನಾ ಮುಂದು ತಾಮುಂದು ಎನ್ನುತ್ತಾರೆ.
  • ನಮ್ಮ ಹತ್ತಿರ ರಾಸಾಯನಿಕ ಶಸ್ತ್ರಾಸ್ತ್ರಗಳಿಲ್ಲ. ಆದರೆ ನೈತಿಕ ಸ್ಥೈರ್ಯ ಯಾವ ನ್ಯೂಕ್ಲಿಯರ್‌ ಬಾಂಬಿನ ಶಕ್ತಿಗೂ ಕಡಿಮೆಯಿಲ್ಲ. ಅಮೆರಿಕ ತನ್ನ ನಿಯಮಗಳನ್ನು, ಸಂಹಿತೆಗಳನ್ನು ಬದಲಿಸಲಿ. ಇಸ್ಲಾಂ ವಿರೋಧಿ ನಿಲುವನ್ನು ತ್ಯಜಿಸಲಿ. ಇದು ನನ್ನ ಕಟ್ಟೊತ್ತಾಯ.
1998ರಲ್ಲಿ ವಾಷಿಂಗ್ಟನ್‌ನಲ್ಲಿ ಭಾರೀ ಬಾಂಬ್‌ಗಳನ್ನು ಒಯ್ದಿದ್ದ ಬಿನ್‌ ಲ್ಯಾಡೆನ್‌ ವಿರುದ್ಧ ಅಮೆರಿಕನ್ನರು ಕಿಡಿ ಕಾರಿದ್ದರು. ಈಗ ಆ ಕಿಡಿಯೇ ಬೆಂಕಿಯಾಗಿದೆ. ಈ ನಡುವೆ ತಾಲಿಬಾನ್‌ ಸರ್ಕಾರ, ಬಿನ್‌ ಲ್ಯಾ-ಡೆನ್‌ ತನ್ನ ವ್ಯಾಪ್ತಿ ಬಿಟ್ಟು ಬೇರೆಲ್ಲೂ ಇಂಥಾ ಕೃತ್ಯ ಎಸಗಲು ಸಾಧ್ಯವಿಲ್ಲ. ಸುಮ್ಮನೆ ಕಲ್ಪಿಸಿಕೊಂಡು ನಮ್ಮ ಮೇಲೆ ಧಾಳಿ ಸಲ್ಲ. ಅಮೆರಿಕಾ ಧಾಳಿಯ ಬಗ್ಗೆ ಬಿನ್‌ ಲ್ಯಾ-ಡೆನ್‌ ಕೈವಾಡ ಇದೆಯಾ ಎಂದು ಪತ್ತೆ ಹಚ್ಚಲು ಇಲ್ಲೂ ವಿಶೇಷ ತನಿಖೆ ನಡೆಸುತ್ತೇವೆ ಎಂದು ಹೇಳಿದೆ.

ತಾಲಿಬಾನ್‌ ಸರ್ಕಾರ ಅಮೆರಿಕವನ್ನು ಬೇಡಿದರೆ, ಬಿನ್‌ --ಲ್ಯಾಡೆನ್‌ ಎಚ್ಚರಿಕೆ ಕೊಡುತ್ತಾನೆ. ಅಮೆರಿಕ ಮುಂದಿನ ಗುರಿ ಬಿನ್‌ ಲ್ಯಾ-ಡೆನ್‌ ಎಂಬುದು ಬಲವಾಗುತ್ತಿದೆ. ಇದು ಜೆಹಾದ್‌. ಬಿನ್‌ ವರ್ಸಸ್‌ ಅಮೆರಿಕ. ಕ್ಷಣಗಣನೆ ಪ್ರಾರಂಭವಾಗಿದೆ !

(ಏಜೆ-ನ್ಸೀ-ಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X