ಅಮೆರಿಕಾ ಮೇಲೆ ದಾಳಿ : ಕನ್ನಡ ಚಿತ್ರನಟ ಕೌಶಿಕ್ ಮತ್ತು ತಂಡ ಸುರಕ್ಷಿತ
ಬೆಂಗಳೂರು : ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಅಮೆರಿಕ ಪ್ರವಾಸದಲ್ಲಿರುವ ಕನ್ನಡ ಚಲನಚಿತ್ರ ನಟ, ನಿರ್ದೇಶಕ ಎಂ.ಡಿ. ಕೌಶಿಕ್ ಮತ್ತು ‘ಸೀಮಾ’ ಚಿತ್ರತಂಡ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು, ಅವರೆಲ್ಲ ಸುರಕ್ಷಿತವಾಗಿದ್ದಾರೆ.
ಮಂಗಳವಾರ ನ್ಯೂಯಾರ್ಕ್‌ನಲ್ಲಿರುವ ವಿಶ್ವ ವ್ಯಾಪಾರ ಕೇಂದ್ರದ 110 ಅಂತಸ್ತುಗಳ ಅವಳಿ ಗೋಪುರಗಳ ಮೇಲೆ ವಿಮಾನ ದಾಳಿ ನಡೆಯುವ ಕೇವಲ ಎರಡು ಗಂಟೆಗಳ ಮೊದಲು ‘ಸೀಮಾ’ ಚಿತ್ರತಂಡ, ಅಲ್ಲೇ ಚಿತ್ರೀಕರಣ ಮುಗಿಸಿ, ಕಟ್ಟಡದಿಂದ ಹೊರಬಂದಿತ್ತು.
ಈ ಕೇಂದ್ರದಲ್ಲಿ ಸೀಮಾ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಶ್ಯಾಮಸುಂದರ್ ಅವರು ಅಮೆರಿಕ ಕಾಲಮಾನದ ರೀತ್ಯ ಬೆಳಗ್ಗೆ 6.30ರಿಂದ 7 ಗಂಟೆವರೆಗೆ ಚಿತ್ರೀಕರಣ ನಡೆಸಿದ್ದರು ಎನ್ನಲಾಗಿದೆ. ಚಿತ್ರೀಕರಣ ಮುಗಿಸಿಕೊಂಡು ಇಡೀ ತಂಡ ಹೊರ ಬಂದ ಎರಡು ಗಂಟೆಗಳ ತರುವಾಯ ದಾಳಿಗೆ ಕಟ್ಟಡ ನೆಲಸಮವಾಯ್ತು ಎಂದು ಚಿತ್ರೋದ್ಯಮದ ಮೂಲಗಳು ತಿಳಿಸಿವೆ.
ಇದೇ ಕೇಂದ್ರದಲ್ಲಿ ಚಿತ್ರತಂಡ ಸೋಮವಾರ ಸಂಜೆ ಕೂಡ ಚಿತ್ರೀಕರಣ ನಡೆಸಿತ್ತು. ಚಿತ್ರತಂಡದಲ್ಲಿದ್ದ ಕಿರಣ್‌ಗೌಡ, ಪ್ರವೀಣ್, ಸುಧೀರ್ ರೆಡ್ಡಿ, ಎಂ.ಡಿ. ಕೌಶಿಕ್ ಹಾಗೂ ಎಲ್ಲರೂ ಕ್ಷೇಮವಾಗಿದ್ದಾರೆ. ಮುರುಳಿಧರ್ ಕೌಶಿಕ್ ಬೆಂಗಳೂರಿನ ರಾಜಾಜಿನಗರದ ತಮ್ಮ ಮನೆಗೆ ಫೋನ್ ಮಾಡಿ, ತಾವು ಈಗ ಫೋರಿಡಾದಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ ಎಂದು ಅವರ ಪತ್ನಿ ಉಷಾ ಕೌಶಿಕ್ ಕನ್ನಡ.ಇಂಡಿಯಾ ಇನ್‌ಫೋ.ಕಾಂಗೆ ತಿಳಿಸಿದ್ದಾರೆ.
ಭಾರತೀಯರು ನಾಪತ್ತೆ : ಈ ಮಧ್ಯೆ ವಿಶ್ವ ವ್ಯಾಪಾರ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವವರ ಪೈಕಿ ಶೇ.10 ರಿಂದ 15ರಷ್ಟು ಮಂದಿ ಭಾರತೀಯರಿದ್ದು, ಇವರಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಕೇಂದ್ರದ ಪಕ್ಕದಲ್ಲೇ ಇರುವ ವಾಲ್‌ಸ್ಟ್ರೀಟ್‌ನಲ್ಲಿ ಕೂಡ ಹಲವು ಭಾರತೀಯರು ಒಂದಿಲ್ಲೊಂದು ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications