ಅಮೆರಿಕದ ಮೇಲಿನ ದಾಳಿಗೆ ತಾನೇ ಹೊಣೆ ಎಂದ ಅನಾಮಧೇಯ
ಅಮ್ಮಾನ್ : ಅಮೆರಿಕದ ವಿವಿಧ ಸ್ಥಳಗಳ ಮೇಲೆ ಮಂಗಳವಾರ ನಡೆದ ಪ್ರತ್ಯೇಕ ವಿಮಾನ ದಾಳಿಗೆ ತಾನೆ ಹೊಣೆಯೆಂದು ಅನಾಮಧೇಯನೊಬ್ಬ ಹೇಳಿಕೊಂಡಿದ್ದಾನೆ. ಜಪಾನ್ನ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ನಡೆದಿದ್ದ ಪರಮಾಣು ದಾಳಿಯ ಪ್ರತೀಕಾರವಾಗಿ ಈ ದಾಳಿ ಮಾಡಲಾಗಿದೆ ಎಂದು ಆತ ತಿಳಿಸಿದ್ದಾನೆ.
ಜಪಾನ್ನ ರೆಡ್ ಆರ್ಮಿ ಸಂಘಟನೆಯ ಪರವಾಗಿ ತಾನು ಈ ಸಂಚು ರೂಪಿಸಿದ್ದಾಗಿ ಅನಾಮಧೇಯ ವ್ಯಕ್ತಿ ತಮಗೆ ತಿಳಿಸಿದ ಎಂದು ‘ಅಲ್ ವಹೇಬ್ ಅರಬ್’ ವಾರಪತ್ರಿಕೆಯ ಸಂಪಾದಕ ಫಕ್ರಿ ಕವಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. 1945ರಲ್ಲಿ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ನಡೆದ ಅಣ್ವಸ್ತ್ರ ದಾಳಿಗೆ ಪ್ರತೀಕಾರವಾಗಿ ಈ ದಾಳಿ ಮಾಡಿದ್ದಾಗಿ ಆತ ಸ್ಪಷ್ಟಪಡಿಸಿದ ಎಂದೂ ಅವರು ತಿಳಿಸಿದ್ದಾರೆ.
ಲೆಡೆನ್ ಕೈವಾಡ : ವಿಶ್ವವನ್ನೇ ತಲ್ಲಣಗೊಳಿಸಿದ ಈ ಘೋರ ದಾಳಿಗೆ ಅಧಿಕೃತ ಹೊಣೆಗಾರರಾರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಅಮೆರಿಕಾ ತಿಳಿಸಿದೆ. ಆದರೆ, ಅಧಿಕೃತ ಮೂಲಗಳ ಪ್ರಕಾರ ಈ ದಾಳಿಯ ಹಿಂದೆ ಅಂತಾರಾಷ್ಟ್ರೀಯ ಉಗ್ರವಾದಿ ನಾಯಕ ಒಸಾಮ ಬಿನ್ ಲೆಡೆನ್ ಕೈವಾಡ ಇದ್ದೇ ಇದೆ ಎಂದು ಅಮೆರಿಕಾ ಭಾವಿಸಿದೆ.
ಈ ಕುಕೃತ್ಯ ನಡೆಸಿದ ಭಯೋತ್ಪಾದಕರನ್ನು ಬೇಟೆ ಆಡುತ್ತೇವೆ ಎಂದು ತಿಳಿಸಿರುವ ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಷ್ ಅಮೆರಿಕದ ಜನರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಡಲು ಸಿದ್ಧ ಎಂದೂ ಸಾರಿದ್ದಾರೆ.
(ಪಿಟಿಐ/ಎಎಫ್ಪಿ/ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications