ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್‌ನಿಂದ ಈಜಿಪ್ಟ್‌, ಜೋರ್ಡಾನ್‌ ಗಡಿ ಬಂದ್‌, ಕಟ್ಟೆಚ್ಚರ

By Staff
|
Google Oneindia Kannada News

ಜೆರುಸೆಲೆಮ್‌: ಅಮೆರಿಕದ ಮೇಲೆ ಭಯೋತ್ಪಾದಕ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಈಜಿಪ್ಟ್‌ ಮತ್ತು ಜೋರ್ಡಾನ್‌ ಗಡಿಗಳನ್ನು ಇಸ್ರೇಲ್‌ ಮುಚ್ಚಿದೆ ಎಂದು ಇಸ್ರೇಲಿ ಸಾರ್ವಜನಿಕ ಟೆಲಿವಿಷನ್‌ ವರದಿ ಮಾಡಿದೆ.

ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ ಸಹಿತ ಅವಳಿ ಕಟ್ಟಡಗಳ ಮೇಲೆ ಅಪಹೃತ ವಿಮಾನಗಳಿಂದ ನಡೆದ ದಾಳಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 11ರಂದು ಇಸ್ರೇಲ್‌ ಪ್ರಧಾನಿ ಏರಿಯಲ್‌ ಶರೂನ್‌ ಕರೆದಿದ್ದ ತುರ್ತು ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಇದಕ್ಕೂ ಮುನ್ನ ಇಸ್ರೇಲ್‌ 24 ಗಂಟೆಗಳ ಅವಧಿಗೆ ವಿದೇಶಗಳಿಂದ ದೇಶಕ್ಕೆ ಬರುವ ವಿಮಾನ ಯಾನ ಪ್ರದೇಶವನ್ನು ಮುಚ್ಚಿರುವುದಾಗಿ ಘೋಷಿಸಿತ್ತು. ವಾಯುಪಡೆ ದೇಶದ ಸುತ್ತ ಕಟ್ಟೆಚ್ಚರ ವಹಿಸಿ ಕಾವಲು ಕಾಯುತ್ತಿದೆ. ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಶಿಮನ್‌ ಪೆರೆಸ್‌ ಅವರು ಅಮೆರಿಕೆಯಲ್ಲಿ ನಡೆದಿರುವ ಈ ದುರ್ಘಟನೆ ಅಣುಬಾಂಬ್‌ ದಾಳಿಗೆ ಸಮನಾಗಿದೆ ಎಂದು ಬಣ್ಣಿಸಿದ್ದಾರೆಂದು ಟೆಲಿವಿಷನ್‌ ವರದಿ ತಿಳಿಸಿದೆ.

ಇಸ್ರೇಲ್‌ ಸರಕಾರವು ಅಮೆರಿಕದಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಎಲ್ಲ ಸರಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸುವಂತೆ ಆದೇಶಿಸಲಾಗಿದೆ ಎಂದು ಸಾರ್ವಜನಿಕ ರೇಡಿಯೋ ವರದಿ ತಿಳಿಸಿದೆ.

(ಪಿ.ಟಿ.ಐ /ಎಎಫ್‌ಪಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X