ಅಮೆರಿಕಾ ಕಟ್ಟಡಗಳ ಮೇಲೆ ಧಾಳಿಮಾಡಿದವರ ಸುಳಿವು ಪತ್ತೆ
ನ್ಯೂಯಾರ್ಕ್ : ಐವರು ಅರಬರ (?) ಬಗ್ಗೆ ಪೊಲೀಸರಿಗೆ ಪುರಾವೆ ಸಿಕ್ಕಿದ್ದು, ಅವರು ಓಡಾಡುತ್ತಿದ್ದ ಬಾಡಿಗೆ ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೋಸ್ಟನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ. ಅಮೆರಿಕಾ ಮೇಲಿನ ಧಾಳಿ ಹಿಂದಿನ ಸಂಚು ಪತ್ತೆ ಹಚ್ಚುವಲ್ಲಿ ಪೊಲೀಸರ ಮೊದಲ ವಿಕ್ರಮ ಇದು.
ವರದಿ ಉಲ್ಲೇಖಿಸಿರುವ ಪ್ರಮುಖ ಮಾಹಿತಿಗಳು....
ಕಾರಿನಲ್ಲಿ ಕೆಲವು ವಿಮಾನಯಾನ ತರಪೇತಿಗೆ ಸಂಬಂಧಿಸಿದ ದಾಖಲೆಗಳು ದೊರೆತಿದ್ದು, ಅವು ಅರಬ್ ಭಾಷೆಯಲ್ಲಿವೆ. ಐವರ ಪೈಕಿ ಇಬ್ಬರ ಪಾಸ್‌ಪೋರ್ಟ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿರುವಂತೆ ಅನುಮಾನಾಸ್ಪದ ವ್ಯಕ್ತಿಗಳು ಸಂಯುಕ್ತ ಅರಬ್ ಎಮಿರೇಟ್ಸ್‌ನವರಾಗಿದ್ದಾರೆ. ಪಾಸ್‌ಪೋರ್ಟ್ ಸಿಕ್ಕಿರುವ ಇಬ್ಬರೂ ಸಹೋದರರಾಗಿದ್ದಾರೆ.
ಇವರಲ್ಲಿ ಒಬ್ಬ ತರಪೇತಿ ಪಡೆದ ಪೈಲಟ್ ಆಗಿದ್ದಾನೆ. ಇವರಲ್ಲದೆ ಕನಿಷ್ಠ ಇನ್ನಿಬ್ಬರು ಬೋಸ್ಟನ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಪೋರ್ಟ್‌ಲ್ಯಾಂಡ್, ಮೇಯ್ನ್‌ನಿಂದ ಪ್ರಯಾಣಿಸಿದ್ದಾರೆ. ಇದಕ್ಕೂ ಮೊದಲು ಅವರು ಕೆನಡಾ ತಲುಪಿದ್ದರು ಎಂದು ತನಿಖಾ ತಂಡ ಶಂಕಿಸಿದೆ.
ವಿಮಾನಗಳನ್ನು ಹೈಜಾಕ್ ಮಾಡಿದ್ದು ಹೇಗೆ? : ಅಪಹರಣಕಾರರ ಬಳಿ ಪಿಸ್ತೂಲು, ಬಂದೂಕು ಇವ್ಯಾವುವೂ ಇರಲಿಲ್ಲ. ಚಾಕು ಚೂರಿಯಂಥಾ ಚಿಕ್ಕ ಶಸ್ತ್ರಗಳನ್ನು ಶೇವಿಂಗ್ ಸೆಟ್ ಜೊತೆಯಲ್ಲೇ ವಿಮಾನದೊಳಕ್ಕೆ ಒಯ್ದಿದ್ದಾರೆ. ವಿಮಾನದ ಕೆಲವು ಪರಿಚಾರಕರನ್ನು ಕೊಂದು, ಬೆದರಿಕೆಯಾಡ್ಡಿ ಪೈಲಟ್‌ನಿಂದ ವಿಮಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆ ಲೋಗನ್‌ನಿಂದ ಹೊರಟ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ನಡೆಯಿತೋ ಅಥವಾ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ನಡೆಯಿತೋ ಗೊತ್ತಿಲ್ಲ. ಆದರೆ ಈ ರೀತಿ ನಡೆದಿರುವುದಂತೂ ನಿಜ.
ಬೋಸ್ಟನ್‌ನಿಂದ ಈ ವಿಮಾನಗಳು ಹೊರಟ ಒಂದು ಗಂಟೆಯ ಅವಧಿಯಲ್ಲೇ ವಿಶ್ವ ವ್ಯಾಪಾರ ಕೇಂದ್ರ ಕಟ್ಟಡದತ್ತ ಹಾರಿವೆ. ನಾಗರಿಕನೊಬ್ಬನನ್ನು ಬೆದರಿಸಿಯೇ ಕಾರನ್ನು ಬಾಡಿಗೆ ಪಡೆದಿರಬಹುದು ಎಂದಬ ಪೊಲೀಸರು ಶಂಕಿಸಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications