ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದಕರಿಗೆ ನೆಲೆ ಕೊಟ್ಟವರ ಮೇಲೆ ಕ್ರಮ-ಜಾರ್ಜ್‌ ಡಬ್ಲ್ಯು.ಬುಷ್‌

By Staff
|
Google Oneindia Kannada News

George W Bush, US Presidentವಾಷಿಂಗ್ಟನ್‌ : ಮಾರಣಾಂತಿಕ ಕೃತ್ಯಗಳಿಂದ ಅಮೆರಿಕವನ್ನು ತಲ್ಲಣಗೊಳಿಸಿರುವ ಭಯೋತ್ಪಾದಕರು ಹಾಗೂ ಅವರಿಗೆ ಕುಮ್ಮಕ್ಕು ನೀಡಿರುವವರನ್ನು, ಆಶ್ರಯದಾತರನ್ನು ಏಕ ರೀತಿಯಲ್ಲಿ ಪರಿಗಣಿಸುವುದಾಗಿ ಅಮೆರಿಕದ ಅಧ್ಯಕ್ಷ ಜಾರ್ಜ್‌ ಡಬ್ಲ್ಯು. ಬುಷ್‌ ಹೇಳಿದ್ದಾರೆ.

ಈ ದಾಳಿಗಳ ಹಿಂದಿನ ಕೈಗಳನ್ನು ಪತ್ತೆ ಹಚ್ಚುವಲ್ಲಿ ನಿರಂತರ ಶೋಧಗಳು ನಡೆಯುತ್ತಿವೆ. ಇಂಟೆಲಿಜೆನ್ಸ್‌ ಏಜೆನ್ಸಿಗಳು ನ್ಯಾಯ ದೊರಕಿಸಿಕೊಡಲು ನಡೆಯುತ್ತಿವೆ ಎಂದು ಬುಧವಾರ ಬೆಳಗ್ಗೆ ದೂರದರ್ಶನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದ ಬುಷ್‌ ಹೇಳಿದರು. ಪೆಂಟಗನ್‌ ಹಾಗೂ ವಾಷಿಂಗ್ಟನ್‌ನಲ್ಲಿನ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ದಾಳಿ ನಡೆಸುವ ಮೂಲಕ ಸಾವಿರಾರು ಅಮಾಯಕರ ಸಾವಿಗೆ ಕಾರಣವಾಗಿರುವ ಭಯೋತ್ಪಾದಕರಿಗೆ ನೆಲೆ ನೀಡಿರುವ ಆಶ್ರಯದಾತರ ಮೇಲೂ ಕ್ರಮ ಕೈಗೊಳ್ಳುವ ಸ್ಪಷ್ಟ ಇಂಗಿತವನ್ನು ಬುಷ್‌ ವ್ಯಕ್ತಪಡಿಸಿದರು.

ಪೈಶಾಚಿಕ ಕೃತ್ಯದಿಂದಾಗಿ ಸಾವಿರಾರು ಜೀವಗಳು ಏಕಾಏಕಿ ಕೊನೆಗೊಂಡವು ಎಂದು ತಮ್ಮ ಐದು ನಿಮಿಷಗಳ ಭಾಷಣದಲ್ಲಿ ಬುಷ್‌ ವಿಷಣ್ಣವದನರಾಗಿ ನುಡಿದರು. ಈ ಭಯೋತ್ಪಾದಕ ಕೃತ್ಯಗಳು ಅಮೆರಿಕವನ್ನು ಗಾಬರಿಗೊಳಿಸುವ ಉದ್ದೇಶವನ್ನು ಹೊಂದಿವೆ. ಆದರೆ ನಮ್ಮ ದೇಶ ಅತ್ಯಂತ ಬಲಶಾಲಿಯಾದುದು. ಈ ದಾಳಿ ಅಮೆರಿಕದ ಅಮೆರಿಕದ ಧೃತಿಗೆಡಿಸಲು ವಿಫಲವಾಗಿವೆ ಎಂದು ಬುಷ್‌ ಘೋಷಿಸಿದರು.

ಈ ಮುನ್ನ ಭಯೋತ್ಪಾದಕ ಕೃತ್ಯಗಳಿಗೆ ಜವಾಬ್ದಾರರಾದವರನ್ನು ಬೇಟೆಯಾಡಲಾಗುವುದು ಎಂದು ಬುಷ್‌ ಪ್ರಕಟಿಸಿದುದನ್ನು ಇಲ್ಲಿ ಸ್ಮರಿಸಬಹುದು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X