ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ನನ್ನಿಬ್ಬರು ಮಕ್ಕಳಿದ್ದಾರೆ, ಅವರು ಚೆನ್ನಾಗಿದ್ದಾರಾ?

By Staff
|
Google Oneindia Kannada News

ಬೆಂಗಳೂರು : ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ ಕಟ್ಟಡದ ಮೇಲೆ ಉಗ್ರಗಾಮಿಗಳು ಮಂಗಳವಾರ ನಡೆಸಿದ ಸರಣಿ ಬಾಂಬ್‌ ದಾಳಿಯ ಸುದ್ದಿ ತಲುಪುತ್ತಿದ್ದಂತೆಯೇ ಅಮೆರಿಕದಲ್ಲಿನ ತಮ್ಮ ಸಂಬಂಧಿಕರ, ವ್ಯವಹಾರ ಸಂಬಂಧಿ ಕಚೇರಿಗಳ ಕುಶಲದ ಬಗ್ಗೆ ಬೆಂಗಳೂರಿಗರು ತೀವ್ರ ಆತಂಕಗೊಂಡಿದ್ದಾರೆ. ಈ ಕುರಿತ ಹಲವು ವಿಚಾರಣೆಗಳು ಮಾಧ್ಯಮ ಕಚೇರಿಗಳನ್ನು ತಲುಪುತ್ತಿವೆ.

ಅಮೆರಿಕಾ ಮೂಲದ ಸಾಕಷ್ಟು ಉದ್ಯಮಗಳು ಬೆಂಗಳೂರಿನಲ್ಲಿರುವುದರಿಂದ ಅಲ್ಲದೆ ಅಲ್ಲಿನ ಉದ್ಯಮ ಸ್ಥಿತಿ ಗತಿಯ ಮೇಲೆ ಬೆಂಗಳೂರಿನ ಕೆಲವು ಉದ್ಯಮಗಳು ಆಧರಿಸಿರುವುದರಿಂದ ಅಮೆರಿಕಾಕ್ಕೆ ಫೋನ್‌ ಹಚ್ಚುವುದು, ಟೀವಿ ಚಾನೆಲ್‌ಗಳನ್ನು ತಡಕಾಡುವುದು, ಅವಕಾಶವಿದ್ದವರು ವೆಬ್‌ಸೈಟ್‌ನ ಮೊರೆಹೋಗುವುದು ನಡೆದಿದೆ. ಇನ್ಫೋಸಿಸ್‌ನ ಅಧ್ಯಕ್ಷ ನಾರಾಯಣ ಮೂರ್ತಿ ಅವರು ಮಧ್ಯ ಏಷ್ಯಾ ಪ್ರವಾಸದಲ್ಲಿದ್ದು, ಅವರ ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.

ಮಂಗಳವಾರ ರಾತ್ರಿಯೆಲ್ಲಾ ಆಗಾಗ ವಿದ್ಯುತ್‌ ಕೈಕೊಡುತ್ತಿದ್ದ ಪರಿಣಾಮವಾಗಿ ಅಮೆರಿಕಾದ ದುರಂತವನ್ನು ಟೀವಿಯಲ್ಲಿ ನೋಡುವುದಕ್ಕೂ ಸಾಧ್ಯವಾಗದೇ ಬೆಂಗಳೂರಿಗರು ಅಕ್ಷರಶಃ ಕತ್ತಲಲ್ಲಿ ಮುಳುಗಿದ್ದರು. 24 ಗಂಟೆ ಸುದ್ದಿ ಒದಗಿಸುವ ಚಾನೆಲ್‌ಗಳಿದ್ದರೂ ದುರಂತದ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯವಾಗಲಿಲ್ಲ.

ನಗರದ ನಿವಾಸಿ, ಗೃಹಿಣಿಯಾಬ್ಬರು, ಅಮೆರಿಕಾದಲ್ಲಿ ಬೆಳಗ್ಗೆಯೇ ಈ ಘಟನೆ ಸಂಭವಿಸಿರುವುದರಿಂದ ಅಲ್ಲಿ ಕೆಲಸ ಮಾಡುತ್ತಿರುವ ತಮ್ಮಿಬ್ಬರು ಮಕ್ಕಳ ಬಗೆಗೆ ಆತಂಕಗೊಂಡಿರುವುದಾಗಿ ಹೇಳಿದರು. ಇಂಟರ್‌ನೆಟ್‌ ಚ್ಯಾಟ್‌ ಬಾಕ್ಸ್‌ಗಳಲ್ಲಿಯೂ ಅಮೆರಿಕಾ ದುರಂತದ ಬಗ್ಗೆ ಆತಂಕ, ಕಳವಳಗಳ ಮಾತುಗಳೇ ತುಂಬಿದ್ದವು. ಅಮೆರಿಕಾದಲ್ಲಿ ಸಂಬಂಧಿಕರ ಫೋನ್‌ ಕರೆಗಳಿಗಾಗಿ ಕಾಯುತ್ತಿದ್ದವರ ಸಂಖ್ಯೆಯೂ ಸಾಕಷ್ಟಿತ್ತು.

ಅಮೆರಿಕಾ ದುರಂತದ ಬಗ್ಗೆ ತಮ್ಮ ಬಂಧುಗಳು ಹಾಗೂ ವ್ಯವಹಾರ ಸಂಬಂಧಿ ಘಟನೆಗಳ ಬಗ್ಗೆ ತಿಳಿದುಕೊಳ್ಳಬಯಸುವವರು ಅಮೆರಿಕನ್‌ ಏರ್‌ಲೈನ್ಸ್‌ ಫೋನ್‌ ನಂಬರ್‌ಗೆ ಡಯಲ್‌ ಮಾಡಬಹುದು. ( 1-800-245-0999, 1-800-932-85555)

(ಇನ್ಫೋ ಇನ್‌ಸೈಟ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X