ಅನಂತಮೂರ್ತಿ, ಹರಿಖೋಡೆ ನೇತೃತ್ವದಲ್ಲಿ ಜೆ.ಎಚ್. ಪಟೇಲ್ ಪ್ರತಿಷ್ಠಾನ
ಮೈಸೂರು : ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿವಂಗತ ಜೆ. ಎಚ್. ಪಟೇಲ್ ಅವರ ಸ್ಮರಣಾರ್ಥ ಜೆ. ಎಚ್. ಪಟೇಲ್ ಪ್ರತಿಷ್ಠಾನವನ್ನು ಬಿಜಾಪುರದ ಕೂಡಲಸಂಗಮದಲ್ಲಿ ಅಕ್ಟೋಬರ್ 1ರಂದು ಔಪಚಾರಿಕವಾಗಿ ಉದ್ಘಾಟಿಸಲಾಗುವುದು.
ಗುಂಡ್ಲುಪೇಟೆ ಶಾಸಕ ಎಚ್. ಎಸ್. ಮಹದೇವ್ ಪ್ರಸಾದ್ ಈ ವಿಷಯವನ್ನು ಸೋಮವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಪ್ರತಿಷ್ಠಾನದ ನೇತೃತ್ವವನನ್ನು ಸಾಹಿತಿ. ಡಾ. ಯು.ಆರ್. ಅನಂತ ಮೂರ್ತಿ, ಕೈಗಾರಿಕೋದ್ಯಮಿ ಕೆ.ಎಲ್. ಹರಿಖೋಡೆ, ಶಾಸಕ ಮಹದೇವ್ ಪ್ರಸಾದ್ ಹಾಗೂ ಪಟೇಲರ ಮಗ, ಮಹಿಮಾ ಪಟೇಲ್ ವಹಿಸಲಿದ್ದಾರೆ.
ಪ್ರತಿಷ್ಠಾನವು ಜೆ. ಎಚ್. ಪಟೇಲರನ್ನು ಕುರಿತು ಸಾಕ್ಷ್ಯಚಿತ್ರವನ್ನು ಹೊರತರಲಿದೆ. ಮಾಧ್ಯಮಗಳಿಂದ ಹಾಗೂ ಸಾಹಿತಿಗಳಿಂದ ಪಟೇಲರ ಬಗೆಗೆ ಲೇಖನಗಳನ್ನು ಆಹ್ವಾನಿಸಲಾಗಿದ್ದು, ಇವುಗಳನ್ನು ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು.
ಮಾದರಿ ಊರುಗಳನ್ನು ನಿರ್ಮಿಸಲು ಹಳ್ಳಿಗಳ ದತ್ತು ಸ್ವೀಕಾರ , ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಗಲಿದ ನಾಟಕ ಪಟೇಲರ ಸ್ಮರಣಾರ್ಥ ಸ್ಮಾರಕ ನಿರ್ಮಾಣ, ಪಟೇಲರ ಹುಟ್ಟೂರು, ಕರಿಗನೂರು ಹಳ್ಳಿಯಲ್ಲಿ ಪಟೇಲರ ಪತ್ರಗಳು, ಭಾಷಣಗಳು, ಫೋಟೋಗಳು, ಸಂಗ್ರಹಗಳು ಮತ್ತು ಪುಸ್ತಕಗಳ ವಸ್ತುಸಂಗ್ರಹಾಲಯ ತೆರೆಯಲಾಗುವುದು. ರಾಮಮನೋಹರ ಲೋಹಿಯಾರ ಪುಣ್ಯ ತಿಥಿ ಆಚರಣೆ, ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಸಮಾಜವಾದ ಶಾಲೆಗಳ ಸ್ಥಾಪನೆ ಇವು ಸದ್ಯಕ್ಕೆ ಪ್ರತಿಷ್ಠಾನದ ಕಾರ್ಯ ಸೂಚಿಯಲ್ಲಿವೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications