Get Updates
Get notified of breaking news, exclusive insights, and must-see stories!

ತೆಂಡೂಲ್ಕರ್‌ ಸೇರ್ಪಡೆಯಿಂದ ತಂಡದ ಇಮೇಜ್‌ ಬದಲಾಗಿದೆ-ಗಂಗೂಲಿ

ಕೋಲ್ಕತಾ : ಸಚಿನ್‌ ತೆಂಡೂಲ್ಕರ್‌ ತಂಡಕ್ಕೆ ಮರಳಿರುವುದರಿಂದ ತಂಡದ ನೈತಿಕ ಸ್ಫೂರ್ತಿ ಮರಳಿದೆ ಹಾಗೂ ತಂಡ ಮತ್ತಷ್ಟು ಬಲಶಾಲಿಯಾಗಿದೆ ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ಸೌರವ್‌ ಗಂಗೂಲಿ ಹೇಳಿದ್ದಾರೆ.

ತೆಂಡೂಲ್ಕರ್‌ ವಾಪಸ್ಸಾಗುವುದರೊಂದಿಗೆ ಇಡೀ ತಂಡದ ಇಮೇಜು ಬದಲಾಗಿದೆ. ತಂಡ ತನ್ನ ಅತ್ಯುತ್ತಮ ಸಾಧನೆಯನ್ನು ದಕ್ಷಿಣ ಆಫ್ರಿಕಾದಲ್ಲಿ ತೋರಲಿದೆ ಎಂದು ಗಂಗೂಲಿ ಪಿಟಿಐಗೆ ತಿಳಿಸಿದ್ದಾರೆ. ಮೈದಾನದಲ್ಲಿ ತಮ್ಮ ನಡವಳಿಕೆಗಳಿಂದ ಪಂದ್ಯದ ರೆಫರಿಗಳಿಗೆ ಕಿರಿಕಿರಿಯಾಗುವ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಗಂಗೂಲಿ- ತಂಡದ ನಾಯಕ ಕೆಲವು ಭಾವನೆಗಳನ್ನು ತೋರುವುದು ಅಗತ್ಯ. ಇಲ್ಲದೆ ಹೋದಲ್ಲಿ ಎಲ್ಲ ಪ್ರಯತ್ನಗಳು ವ್ಯರ್ಥವಾಗುತ್ತವೆ ಎಂದು ಗಂಗೂಲಿ ಹೇಳಿದರು.
ತಾವಿನ್ನೂ ಹೊಟ್ಟೆಯ ನೋವಿನಿಂದ ಸಂಪೂರ್ಣ ಗುಣಮುಖವಾಗಿಲ್ಲ ಎಂದು ಹೇಳಿದ ಗಂಗೂಲಿ, ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಗೆ ಸಂಪೂರ್ಣ ಗುಣಮುಖವಾಗುವ ವಿಶ್ವಾಸ ವ್ಯಕ್ತಪಡಿಸಿದರು. ಬುಲವಾಯೋ, ಢಾಕಾ ಹಾಗೂ ಕ್ಯಾಂಡಿಗಳಲ್ಲಿನ ಟೆಸ್ಟ್‌ಗಳಲ್ಲಿ ತಮ್ಮ ನೇತೃತ್ವದಲ್ಲಿ ತಂಡ ಸಾಧಿಸಿದ ಸಾಗರೋತ್ತರ ಗೆಲುವುಗಳನ್ನು ಪ್ರಸ್ತಾಪಿಸಿ, ಒಂದೇ ವರ್ಷದ ಅವಧಿಯಲ್ಲಿ ಈ ಮೂರೂ ಯಶಸ್ಸುಗಳು ತಂಡಕ್ಕೆ ಮುಖ್ಯವಾಗುತ್ತವೆ ಎಂದು ಹೇಳುವ ಮೂಲಕ ತಮ್ಮ ನಾಯಕತ್ವ ವೈಫಲ್ಯದ ಟೀಕೆಗಳನ್ನು ತಳ್ಳಿಹಾಕಿದರು.

ದಕ್ಷಿಣ ಆಫ್ರಿಕಾ ಬಲಿಷ್ಠ ತಂಡವೆನ್ನುವುದರಲ್ಲಿ ಎರಡು ಮಾತಿಲ್ಲ . ಆದರೆ ನಾವು ನಮ್ಮ ಸಂಪೂರ್ಣ ಬಲದೊಂದಿಗೆ ತೆರಳುತ್ತಿರುವುದರಿಂದ ಉತ್ತಮ ಸಾಧನೆಯನ್ನು ನಿರೀಕ್ಷಿಸಿದ್ದೇನೆ ಎಂದು ಗಂಗೂಲಿ ಹೇಳಿದರು.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+