ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಬೂಸವಾರಿಗೆ ಕುಟುಕು ಜೀವ

By Staff
|
Google Oneindia Kannada News

World famous Jumbu Savariಮೈಸೂರು : ಪಂಜಿನ ಕವಾಯತು, ದಸರಾ ಚಲನಚಿತ್ರೋತ್ಸವ, ಕ್ರೀಡಾಕೂಟ ಹಾಗೂ ವಿಶ್ವವಿಖ್ಯಾತ ಜಂಬೂಸವಾರಿಯನ್ನು ಬರದ ಹಿನ್ನೆಲೆಯಲ್ಲಿ ಈ ಬಾರಿ ರದ್ದುಪಡಿಸಿರುವುದಾಗಿ ಹೇಳಿಕೆ ನೀಡಿದ್ದ ಸಚಿವೆ ರಾಣಿ ಸತೀಶ್‌ ತಮ್ಮ ಹೇಳಿಕೆಗೆ ತಾವೇ ತಿದ್ದುಪಡಿ ನೀಡಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಮುಖ್ಯಮಂತ್ರಿಗಳ ಆದೇಶಾನುಸಾರ ಈ ಬಾರಿ ಸ್ತಬ್ಧಚಿತ್ರ ಮೆರವಣಿಗೆ, ಜಂಬೂಸವಾರಿ, ವಸ್ತುಪ್ರದರ್ಶನ, ಪಂಜಿನ ಕವಾಯತು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.

ಇದಾದ ಕೆಲ ಸಮಯದ ಬಳಿಕ ಮತ್ತೆ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಜಂಬೂಸವಾರಿ ರದ್ದು ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುವ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಒಂದೆರಡು ದಿನದಲ್ಲೇ ತೀರ್ಮಾನಿಸಲಾಗುವುದು ಎಂದರು.

ವಸ್ತು ಪ್ರದರ್ಶನ : ಇದರಿಂದಾಗಿ, ನಾಲ್ಕು ಶತಮಾನಗಳ ಸುದೀರ್ಘ ಇತಿಹಾಸದ ದಸರಾ ಉತ್ಸವದಲ್ಲಿ ಜಂಬೂಸವಾರಿ ನಡೆಯುವ ಆಸೆ ಜೀವಂತವಾಗಿದೆ. ಈ ಮಧ್ಯೆ ರಾಜ್ಯ ವಸ್ತು ಪ್ರದರ್ಶ ಪ್ರಾಧಿಕಾರದ ಅಧ್ಯಕ್ಷ ಎಸ್‌. ಪುಟ್ಟಸ್ವಾಮಿ ಅವರು, ದಸರಾ ವಸ್ತು ಪ್ರದರ್ಶನ ಶತಾಯಗತಾಯ ನಡೆದೇತೀರುತ್ತದೆ ಎಂದು ತಿಳಿಸಿದ್ದಾರೆ.

ವಸ್ತು ಪ್ರದರ್ಶನದ ಗುತ್ತಿಗೆಯನ್ನು ಈಗಾಗಲೇ 1.35 ಕೋಟಿ ರುಪಾಯಿಗೆ ನೀಡಲಾಗಿದೆ. ಅದಕ್ಕೆ ಸರಕಾರ ಮಂಜೂರಾತಿಯನ್ನೂ ನೀಡಿದೆ. ಪರಿಸ್ಥಿತಿ ಹೀಗಿರುವಾಗ ವಸ್ತುಪ್ರದರ್ಶನ ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X