ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡಲ್ಲಿ ಓದಬೇಕೆ? ಸೆ. 16ರಂದು ಬೆಂಗಳೂರಲ್ಲಿ ಸಂದರ್ಶನವಿದೆ

By Staff
|
Google Oneindia Kannada News

ಬೆಂಗಳೂರು : ಸೆಪ್ಟೆಂಬರ್‌ 16 ಹಾಗೂ 17ರಂದು ನಗರದ ಲೀ ಮೆರಿಡಿಯನ್‌ ಹೊಟೇಲಿನಲ್ಲಿ ನ್ಯೂಜಿಲೆಂಡ್‌ ಶಿಕ್ಷಣ ಮೇಳ ನಡೆಯಲಿದೆ. ನ್ಯೂಜಿಲೆಂಡಿನಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಯಾಗಿ ಓದುವ ಬಯಕೆ ಇರುವವರಿಗೆ ಇದೊಂದು ಅಪರೂಪದ ಅವಕಾಶ. ಭಾರತದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಬ್ರಿಟನ್‌ ಹಾಗೂ ಆಸ್ಟ್ರೇಲಿಯಾ ಜಾಡನ್ನು ಇದೀಗ ನ್ಯೂಜಿಲೆಂಡ್‌ ಕೂಡ ಹಿಡಿದಿದೆ.

ನ್ಯೂಜಿಲೆಂಡ್‌ನ ಉದ್ದಿಮೆ ಆಯುಕ್ತ ಹಾಗೂ ವಾಣಿಜ್ಯ ಸಲಹೆಗಾರ ಪೀಟರ್‌ ಹೀಲಿ ಆಂಗ್ಲ ಪತ್ರಿಕೆಯಾಂದಕ್ಕೆ ಈ ವಿಷಯ ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್‌, ಆಹಾರ ತಂತ್ರಜ್ಞಾನ, ಅಧ್ಯಾಪನಾ ವೃತ್ತಿ, ಶುಶ್ರೂಷೆ ಹಾಗೂ ಕಾನೂನು ಕ್ಷೇತ್ರಗಳಿಗೆ ನ್ಯೂಜಿಲೆಂಡಿನಲ್ಲಿ ಸಾಕಷ್ಟು ಬೇಡಿಕೆಯಿದೆ. ಆದರೆ ಸ್ಥಳೀಯರಲ್ಲಿ ಸಾಕಷ್ಟು ಪರಿಣತಿ ಇಲ್ಲದ್ದರಿಂದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ರೂಪಿಸುವ ಉದ್ದೇಶ ನಮ್ಮದಾಗಿದೆ ಎಂದು ಹೀಲಿ ಹೇಳಿದ್ದಾರೆ.

ಫೋರ್ಡ್‌ನ ಚೆನ್ನೈ ವಿಭಾಗದ ಜನರಲ್‌ ಮೇನೇಜರ್‌, ಡಿ ಬಿಯರ್ಸ್‌ನ ಸಿಇಓ, ವರ್ಜಿನ್‌ ಅಟ್ಲಾಂಟಾದ ಪ್ರಾಂತೀಯ ಮೇನೇಜರ್‌ ಮೊದಲಾದ ಕಾರ್ಪೊರೇಟ್‌ ದಿಗ್ಗಜರು ಓದಿರುವುದು ನ್ಯೂಜಿಲೆಂಡಿನಲ್ಲೇ. ಅಲ್ಲಿ ವಿದ್ಯಾಭ್ಯಾಸದ ಖರ್ಚು ಕಡಿಮೆ. ವಾರಕ್ಕೆ 13 ತಾಸು ಪಾರ್ಟ್‌ ಟೈಂ ಕೆಲಸಕ್ಕೂ ಹೋಗಬಹುದು. ಪಾರ್ಟ್‌ ಟೈಂ ಕೆಲಸಗಳಿಗೇನೂ ಕೊರತೆಯಿಲ್ಲ. ಓದು ಮುಗಿದ ನಂತರ ಕನಿಷ್ಠ ಎರಡು ವರ್ಷ ನ್ಯೂಜಿಲೆಂಡಿನಲ್ಲೇ ಸೇವೆ ಸಲ್ಲಿಸಬೇಕು. ವಿದ್ಯಾರ್ಥಿ ಒಬ್ಬ ಅಂತರರಾಷ್ಟ್ರೀಯ ಪರಿಣತನಾಗಿ ರೂಪುಗೊಳ್ಳುವ ಅಪರೂಪದ ಅವಕಾಶವಿದು ಎಂಬುದು ಹೀಲಿ ಅಭಿಪ್ರಾಯ.

ಅಂದಹಾಗೆ, ಅಲ್ಲಿ ಓದಲು ನ್ಯೂಜಿಲೆಂಡ್‌ ಯಾವುದೇ ವಿದ್ಯಾರ್ಥಿ ವೇತನ ನೀಡುವುದಿಲ್ಲ ಎಂಬುದನ್ನೂ ಹೀಲಿ ಸ್ಪಷ್ಟಪಡಿಸಿದ್ದಾರೆ

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X