• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೋಗ್ಯಮಾತೆ ಜಯಂತಿ

By Staff
|

ಬೆಂಗಳೂರು : ಸೆಪ್ಟೆಂಬರ್‌ ತಿಂಗಳು ಬಂತೆಂದರೆ ಬೆಂಗಳೂರಿನ ಶಿವಾಜಿನಗರ ರಂಗುಗೊಳ್ಳುತ್ತದೆ. ಜಾತ್ರೆಯ ಸಡಗರ, ಸಂಭ್ರಮ ಎಲ್ಲೆಡೆ ಕಾಣ ಬರುತ್ತದೆ. ಸೆಪ್ಟೆಂಬರ್‌ 8 ಬೆಂಗಳೂರಿನಲ್ಲಿರುವ ಕ್ರೆೃಸ್ತ ಜನಾಂಗದವರಿಗೆ ತುಂಬಾ ಪವಿತ್ರವಾದ ದಿನ.

ಅಂದು, ಒಲವೇ ದೇವರು ಎಂಬ ಸಂದೇಶವನ್ನು ಮನುಕುಲಕ್ಕೆ ಸಾರಿದ ತಾಯಿ ಮೇರಿಯಮ್ಮನ ಹುಟ್ಟು ಹಬ್ಬದ ದಿನ. ಸಾಮಾನ್ಯವಾಗಿ ಮೇರಿಯಮ್ಮನ ಹಬ್ಬದ ಒಂದು ವಾರದಿಂದಲೇ ಶಿವಾಜಿನಗರದ ರಸ್ತೆಗಳು ಸಿಂಗರಿಸಿಕೊಳ್ಳುತ್ತವೆ. ಎಲ್ಲೆಡೆ ವೈಭವ, ಸಂಭ್ರಮ. ಶಿವಾಜಿನಗರ ಬಸ್‌ ನಿಲ್ದಾಣದ ಪಕ್ಕದಲ್ಲೇ ಇರುವ ಶತಮಾನಗಳಷ್ಟು ಹಳೆಯದಾದ ಮೇರಿಯಮ್ಮನ ಚರ್ಚ್‌ ಜನಾಕರ್ಷಣೆಯ ಕೇಂದ್ರವಾಗುತ್ತದೆ.

1882ರಲ್ಲಿ ಫ್ರೆಂಚ್‌ ಪಾದ್ರಿ ಕ್ಲೈನರ್‌ ಕಟ್ಟಿಸಿದ ಈ ಚರ್ಚ್‌, ಬೆಸಿಲಿಕಾ ಇತಿಹಾಸ - ಸಂಪ್ರದಾಯಗಳ ದೇಗುಲಗಳ ಸಾಲಿಗೆ ಸೇರಿದೆ. ಶತಮಾನಗಳ ಇತಿಹಾಸ ಹಾಗೂ ಅತ್ಯಪೂರ್ವ ಶಿಲ್ಪಕಲಾ ವೈಭವದಿಂದ ಕಂಗೊಳಿಸುವ ಈ ದೇವಾಲಯಕ್ಕೆ ಎಲ್ಲ ಧರ್ಮದ ಜನರೂ ಆಗಮಿಸುವುದು ಒಂದು ವಿಶೇಷ.

ಬೆಂಗಳೂರೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆ ಪವಿತ್ರ ದಿನದಂದು ಮೇರಿಯಮ್ಮನ ದರ್ಶನಕ್ಕಾಗಿ ಸಾಲುಗಟ್ಟಿ ನಿಲ್ಲುತ್ತಾರೆ. 9 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಪೂಜಾ ಸಮಯದಲ್ಲಿ ತಾಯಿ ಮೇರಿಯಮ್ಮಳ ಧ್ವಜಾರೋಹಣವೂ ನೆರವೇರುತ್ತದೆ. ಅಂದು ಮೇರಿಯಮ್ಮನ ಭಕ್ತರು ಮನೆಯಲ್ಲಿ ಹೊಸ ಭತ್ತದ ಅಕ್ಕಿಯಿಂದ ಅನ್ನ ಮಾಡುತ್ತಾರೆ.

ಸುಂದರವಾದ ವಾಸ್ತುಶಿಲ್ಪದಿಂದ ಕೂಡಿದ ಈ ಚರ್ಚ್‌ನ ಪಾರ್ಶ್ವದಲ್ಲಿರುವ ಆಲಯದಲ್ಲಿ ಸಂತ ಏಸುಕ್ರಿಸ್ತನ ತಾಯಿಯಾದ ಮೇರಿಯ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಶತಮಾನಗಳಿಂದಲೂ ಈ ದೇವಾಲಯಕ್ಕೆ ದೈವೀ ಚಮತ್ಕಾರದ ಇತಿಹಾಸ ಅಂಟಿಕೊಂಡಿದೆ.

ಆರೋಗ್ಯದೇವತೆ : ತಾಯಿ ಮೇರಿಯಮ್ಮಳನ್ನು ಆರೋಗ್ಯದೇವತೆ, ಆರೋಗ್ಯ ಮಾತೆ ಎಂದೇ ಜನ ನಂಬಿದ್ದಾರೆ. ತಮ್ಮ ಬೇಡಿಕೆಗಳನ್ನು ದೇವಿಯ ಮುಂದಿಟ್ಟು, ಅದನ್ನು ಈಡೇರಿಸುವಂತೆ ಕೋರುತ್ತಾರೆ. ದೇವಿಗೆ ಹರಕೆ ಹೊತ್ತು , ತಮ್ಮ ಬೇಡಿಕೆ ಈಡೇರಿಸಿಕೊಂಡ ಜನ ಪತ್ರಗಳ ಮೂಲಕ ತಮ್ಮ ಧನ್ಯವಾದವನ್ನು ಅರ್ಪಿಸುತ್ತಾರೆ. ಈ ಧನ್ಯವಾದಗಳನ್ನು ಅರ್ಪಿಸಲೆಂದೇ ಇಲ್ಲಿ ಒಂದು ಪ್ರತ್ಯೇಕ ಪೆಟ್ಟಿಗೆ ಇದೆ.

ಈ ಪೆಟ್ಟಿಗೆಯಲ್ಲಿ ಸಂಗ್ರಹವಾಗುವ ಎಲ್ಲ ಧನ್ಯವಾದದ ಪತ್ರಗಳನ್ನೂ ಪ್ರತಿ ಶನಿವಾರ ಪ್ರಾರ್ಥನೆ ಸಮಯದಲ್ಲಿ ಓದಲಾಗುತ್ತದೆ. ಮೇರಿಯಮ್ಮಳಿಗೆ ಶನಿವಾರ ಬಹು ಪವಿತ್ರವಾದ ದಿನ. ಪ್ರತಿ ಶನಿವಾರ ಇಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ.

ಜಾತ್ರೆ ಸೆ.8ರಂದೇ ಆದರೂ, ಆಗಸ್ಟ್‌ 29ರಿಂದಲೇ ವಿವಿಧ ಪ್ರಾರ್ಥನೆ, ಉಪನ್ಯಾಸಗಳು ಜರುಗುತ್ತವೆ. ಮೇರಿ ದೈವಿಕ ಆದರ್ಶಿನಿ, ಮೇರಿ ವಿಶ್ವಾಸದ ಪ್ರತಿಮೆ, ಮರಿಯ ಪ್ರಾರ್ಥನೆಯ ಪ್ರತಿಮೆ, ಮೇರಿ ವ್ಯಾಕುಲದ ಮೂರ್ತಿ, ಮರಿಯ ಕೃತಜ್ಞನತೆಯ ಆದರ್ಶಿನಿ, ವಿಧೇಯತೆಯ ಪ್ರತಿಮೂರ್ತಿ, ನಮ್ರತೆಯ ಮಾದರಿ, ಮರಿಯಾ ತ್ಯಾಗ ಸ್ವರೂಪಿಣಿ, ಮೇರಿ ಸರಳತೆಯ ಸಾಕಾರ ಮೂರ್ತಿ ಹೀಗೆ ನಾನಾ ಹೆಸರುಗಳಿಂದ 10 ದಿನಗಳ ಕಾಲ ಪ್ರಾರ್ಥನೆ, ಪೂಜೆ, ಉಪನ್ಯಾಸ ಜರುಗುತ್ತದೆ.

ಶಿಕ್ಷಣಕ್ಕೆ ನೆರವು : ಮೇರಿಯಮ್ಮನ ದೇವಾಲಯ ಪ್ರತಿವರ್ಷ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಒಂದು ಲಕ್ಷ ರುಪಾಯಿಗಳನ್ನು ವಿನಿಯೋಗಿಸುತ್ತದೆ. ದೇವಾಲಯಕ್ಕೆ ಸೇರಿದ ಬೆರಳಚ್ಚು ಕೇಂದ್ರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೃತ್ತಿ ಶಿಕ್ಷಣ ತರಬೇತಿ ಪಡೆಯುತ್ತಿದ್ದಾರೆ. ಇದೇ ಕೇಂದ್ರದ ಹೊಲಿಗೆ ತರಬೇತಿ ಕೇಂದ್ರದಲ್ಲಿ 50 ವಿದ್ಯಾರ್ಥಿಗಳಿದ್ದಾರೆ.

ದೇವಾಲಯ ಶಿಕ್ಷಣಕ್ಕಷ್ಟೇ ಅಲ್ಲದೆ, ಬಡ ರೋಗಿಗಳಿಗೂ ನೆರವಾಗುತ್ತದೆ. ಚರ್ಚ್‌ನ ನಿಧಿಯಿಂದ ಹೃದ್ರೋಗ ಚಿಕಿತ್ಸೆ, ಮೂತ್ರಪಿಂಡ ವೈಫಲ್ಯದ ಚಿಕಿತ್ಸೆಗಳಿಗೂ ನೆರವು ನೀಡಲಾಗುತ್ತದೆ.

ಕ್ರಿಸ್‌ಮಸ್‌ ಹಬ್ಬದ ಸಂದರ್ಭದಲ್ಲಿ 500ಕ್ಕೂ ಹೆಚ್ಚು ವಿಧವೆ ಹಾಗೂ ವಿಧುರರಿಗಾಗಿಯೇ ಔತಣಕೂಟವನ್ನೂ ಏರ್ಪಡಿಸುತ್ತದೆ. ಈವರೆಗೆ ದೇವಾಲಯದ ನೆರವಿನಿಂದ ಇನ್ನೂರಕ್ಕೂ ಹೆಚ್ಚು ಮದುವೆಗಳು ನಡೆದಿವೆ. ದೇಗುಲದ ಸಭಾಂಗಣದಲ್ಲಿ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. 50 ವರ್ಷ ದಾಂಪತ್ಯ ಜೀವನ ನಡೆಸಿದ ದಂಪತಿಗಳಿಗೆಗಾಗಿಯೇ ವಿಶೇಷ ಪೂಜೆ ನಡೆಯುತ್ತದೆ.

ವಯಸ್ಸಾದ, ಅನಾರೋಗ್ಯ ಅಥವಾ ಅಂಗವಿಕಲತೆಯಿಂದ ಬಳಲುತ್ತಿರುವವರಿಗೆ ದೇವಾಲಯಕ್ಕೆ ಬರಲು ಸಾಧ್ಯವಾಗದಿದ್ದರೆ, ಆರೋಗ್ಯ ಮಾತೆಯ ದರ್ಶನ ಪಡೆದು ವರ ಬೇಡಲು ವಾಹನಗಳ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ.

ವಾರ್ತಾ ಸಂಚಯ

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more