Get Updates
Get notified of breaking news, exclusive insights, and must-see stories!

ಎಚ್‌ಪಿಯಿಂದ 629 ದಶಲಕ್ಷ ಡಾಲರ್‌ಗೆ ಇಂಡಿಗೋ ಷೇರುಗಳ ಖರೀದಿ

ಬಾಲೋ ಆಲ್ಟೋ, ಕ್ಯಾಲಿಫೋರ್ನಿಯಾ : ಮೊನ್ನೆ ತಾನೆ ಕಾಂಪ್ಯಾಕ್‌ ಕಂಪ್ಯೂಟರ್‌ ಖರೀದಿಸಿದ ಹೆವ್ಲೆಟ್‌- ಪ್ಯಾಕಾರ್ಡ್‌ (ಎಚ್‌ಪಿ) ಕಂಪನಿ ಇಂಡಿಗೋ ಎಂಬ ಡಚ್‌ ಕಂಪನಿಯ ಷೇರುಗಳನ್ನು 629 ದಶಲಕ್ಷ ಡಾಲರ್‌ಗಳಿಗೆ ಖರೀದಿಸಿದೆ.

ಕಂಪ್ಯೂಟರ್‌ಗಳಿಗೆ ಮುದ್ರಣ ಯಂತ್ರಗಳನ್ನು ತಯಾರಿಸುವಲ್ಲಿ ಹೆಸರು ಮಾಡಿರುವ ಹೆವ್ಲೆಟ್‌- ಪ್ಯಾಕಾರ್ಡ್‌ ಈಗ ಇಡೀ ಕಂಪ್ಯೂಟರ್‌ ಉದ್ದಿಮೆಯ ಮುಂಚೂಣಿ ಕಂಪನಿಯಾಗಿ ರೂಪುಗೊಂಡಿದೆ. ಕಳೆದ ಬೇಸಗೆಯಲ್ಲಿ ಮುದ್ರಣ ವ್ಯಾಪಾರಕ್ಕೂ ಕಾಲಿಟ್ಟ ಎಚ್‌ಪಿ ಇದೀಗ ಇಂಡಿಗೋ ಷೇರುಗಳನ್ನು ಖರೀದಿಸಿರುವುದರಿಂದ. ತನ್ನ ಗ್ರಾಹಕರಿಗೆ ಕೊಡುತ್ತಿರುವ ಸೇವೆಯಲ್ಲಿ ಗಣನೀಯ ಬದಲಾವಣೆಯಾಗಲಿದೆ. ಮುದ್ರಣದ ವೇಗ, ಗುಣಮಟ್ಟ ದ ಛಾಯಾಚಿತ್ರಗಳು ಹಾಗೂ ಅಗ್ಗದ ಬೆಲೆಯ ಸೇವೆ ನೀಡುವ ಇಂಡಿಗೋ ಕಂಪನಿಯ ತಂತ್ರಜ್ಞಾನ ಎಚ್‌ಪಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಎಚ್‌ಪಿಯ ಮುಖ್ಯಸ್ಥ ವ್ಯೋಮಕೇಶ ಜೋಷಿ ಹೇಳಿದರು.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+