BATF
ಬೆಂಗಳೂರು : ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಬೆಂಗಳೂರು ಅಜೆಂಡಾ ಟಾಸ್ಕ್‌ಪೋರ್ಸ್ ಸಭೆ, ಈವರೆಗೆ ಸಾಗಿಬಂದ ಹಾದಿ ಹಾಗೂ ಭವಿಷ್ಯತ್ತಿನ ಸವಾಲುಗಳ ಬಗೆಗೆ ಪರಾಮರ್ಶೆ ನಡೆಸಿತು. ಮಹಾನಗರದ ಏಳು ಸಾರ್ವನಿಕ ನಿಗಮ, ಮಂಡಳಿಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಟೆಲಿಕಾಂ, ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆ , ಬೆಂಗಳೂರು ನಗರ ಪೊಲೀಸ್, ಬೆಂಗಳೂರು ಸಿಟಿ ಕಾರ್ಪೊರೇಷನ್ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಆಡ್ವಾನ್ಸ್‌ಡ್ ಸ್ಟಡೀಸ್‌ನ ಆಡಿಟೋರಿಯಂನಲ್ಲಿ ಸಭೆ ನಡೆಸಿದರು. ಬಾಕಿಯಿರುವ ಹಾಗೂ ಚಾಲ್ತಿಯಲ್ಲಿರುವ ಅಲ್ಪಕಾಲೀನ ಹಾಗೂ ದೀರ್ಘಕಾಲೀನ ಕಾಮಗಾರಿಗಳ ಪ್ರಗತಿಯ ಸಮೀಕ್ಷೆ ಯನ್ನು ಸಭೆ ನಡೆಸಿತು.
ಪೊಲೀಸರೇ, ನೀವು ಇನ್ನುಷ್ಟು ಸುಧಾರಿಸಬೇಕು
ಕಾರ್ಯಪಡೆಯಲ್ಲಿರುವ ಬಹುತೇಕ ನಿಗಮ, ಮಂಡಳಿಗಳ ಈವರೆಗಿನ ಸಾಧನೆಯ ಬಗೆಗೆ ಸಭೆ ತೃಪ್ತಿ ವ್ಯಕ್ತಪಡಿಸಿತು. ಸಭೆಯ ಅಸಮಾಧಾನಕ್ಕೆ ತುತ್ತಾದ ಏಕೈಕ ಅಂಗವೆಂದರೆ ಬೆಂಗಳೂರು ನಗರ ಪೊಲೀಸ್. ಅಪರಾಧ ಪ್ರಕರಣಗಳನ್ನು ನಿಯಂತ್ರಣದಲ್ಲಿಡಲು ವಿಫಲವಾದ ಪೊಲೀಸ್ ವ್ಯವಸ್ಥೆ ಕುರಿತು ಸಭೆಯಲ್ಲಿ ಅಸಮಾಧನ ವ್ಯಕ್ತವಾಯಿತು.
ನಗರದ 60 ವಾರ್ಡ್‌ಗಳಲ್ಲಿ ಬಾಗಿಲಿನಿಂದ ಬಾಗಿಲಿಗೆ ತೆರಳಿ ಕಸ ಸಂಗ್ರಹಿಸುವ ಸ್ವಚ್ಛ ಬೆಂಗಳೂರು ಯೋಜನೆಯ ಅನುಷ್ಠಾನದ ಕುರಿತು ಸಭೆ ಮೆಚ್ಚುಗೆ ವ್ಯಕ್ತಪಡಿಸಿತು. ಇದೇ ವೇಳೆಯಲ್ಲಿ ಸ್ವಯಂ ತೆರಿಗೆ ಯೋಜನೆಯಡಿ 85 ಕೋಟಿ ರುಪಾಯಿಗಳ ಸಂಗ್ರಹ, ಕಳೆದ 6 ತಿಂಗಳಲ್ಲಿ ದುರ್ಬಲ ವರ್ಗದವರಿಗೆ ಬಿಡಿಎ ವತಿಯಿಂದ 6 ಸಾವಿರ ನಿವೇಶನಗಳ ವಿತರಣೆ, ಕೇಬಲ್ ಅಳವಡಿಸುವಲ್ಲಿ ವಿವಿಧ ಏಜೆನ್ಸಿಗಳ ನಡುವಣ ತಿಕ್ಕಾಟವನ್ನು ತಡೆಗಟ್ಟಲು ರೋಡ್ ಕಟ್ಟಿಂಗ್ ಸೆಲ್‌ನ ನೇಮಕ, 9 ಪೊಲೀಸ್ ಠಾಣೆಗಳಲ್ಲಿನ ಅತ್ಯುತ್ತಮ ವ್ಯವಸ್ಥೆ ಹಾಗೂ ಗಣಕೀಕೃತ ಎಫ್‌ಐಆರ್ ವರದಿ ವಿತರಣೆ ಮುಂತಾದ ಸಾಧನೆಗಳ ಕುರಿತು ಸಭೆ ಮೆಚ್ಚುಗೆ ವ್ಯಕ್ತಪಡಿಸಿತು.
ಕಳೆದ 2 ವರ್ಷಗಳಲ್ಲಿ 17 ಸಾವಿರ ನಿವೇಶನಗಳನ್ನು ವಿತರಿಸಿರುವ ಬಿಡಿಎ ದಾಖಲೆಯ ಸಾಧನೆಯನ್ನು ಗುರುವಾರ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವಾಗ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರಸ್ತಾಪಿಸಿದುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications