Get Updates
Get notified of breaking news, exclusive insights, and must-see stories!

ದೇಶದ 7.4 ಕೋಟಿ ಸ್ಲಂ ನಿವಾಸಿಗಳ ಅಭಿವೃದ್ಧಿಗೆ ಕೇಂದ್ರದ ಯೋಜನೆ

ಬೆಂಗಳೂರು : ಕೊಳಗೇರಿ ವಾಸಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀತಿಯಾಂದನ್ನು ಹೊರ ತರುತ್ತಿದೆ ಎಂದು ನಗರಾಭಿವೃದ್ಧಿ ಹಾಗೂ ಬಡತನ ನಿರ್ಮೂಲನೆ ಸಚಿವ ಅನಂತಕುಮಾರ್‌ ತಿಳಿಸಿದರು.

ಕೊಳಗೇರಿ ಪ್ರದೇಶಗಳ ನಿವಾಸಿಗಳ ಜೀವನಮಟ್ಟ ಸುಧಾರಣೆಗೆ ಸರ್ಕಾರ ಸಿದ್ಧಪಡಿಸುತ್ತಿರುವ ನೂತನ ನೀತಿಯು, ಕೊಳಗೇರಿ ನಿವಾಸಿಗಳ ಅಭಿವೃದ್ಧಿ- ಪ್ರದೇಶಗಳ ಸುಧಾರಣೆ ಹಾಗೂ ಸ್ಥಳಾಂತರ ಕುರಿತಾದ ದ್ವಿಮುಖ ಉದ್ದೇಶವನ್ನು ಹೊಂದಿದೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅನಂತಕುಮಾರ್‌ ಹೇಳಿದರು. ಬೆಂಗಳೂರು ನಗರ ಸಾರಿಗೆ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರೊಡನೆ ಚರ್ಚಿಸುವುದಾಗಿ ಪ್ರಶ್ನೆಯಾಂದಕ್ಕೆ ಸಚಿವರು ಉತ್ತರಿಸಿದರು.

ದೇಶದಲ್ಲಿ ಸುಮಾರು 7.4 ಕೋಟಿ ಮಂದಿ ಕೊಳಗೇರಿಗಳಲ್ಲಿ ವಾಸವಾಗಿದ್ದು , ಅವುಗಳನ್ನು ನಾಶ ಮಾಡಿದಲ್ಲಿ ಆ ಮಂದಿ ಎಲ್ಲಿ ಹೋಗಬೇಕು ಎಂದು ಸಚಿವರು ಪ್ರಶ್ನಿಸಿದರು. ಕೊಳಗೇರಿಗಳು ಹಾಗೂ ಅಲ್ಲಿನ ನಾಗರಿಕರ ಸಮಸ್ಯೆಗಳು ಮಾನವೀಯ ಸಮಸ್ಯೆಗಳಾಗಿವೆ ಹಾಗೂ ಅವುಗಳಿಗೆ ಪರಿಹಾರ ಕಂಡು ಹಿಡಿಯುವುದು ಅತ್ಯಂತ ಕಠಿಣವಾಗಿದೆ ಎಂದು ಸಚಿವರು ಹೇಳಿದರು.

ಉತ್ತಮ ನಗರಾಡಳಿತಕ್ಕೆ ರಾಷ್ಟ್ರೀಯ ಕ್ರಿಯಾ ಯೋಜನೆ

ಮುಂದಿನ ಎರಡೂವರೆ ತಿಂಗಳುಗಳಲ್ಲಿ ಎಲ್ಲ ರಾಜ್ಯಗಳ ರಾಜಧಾನಿಗಳಿಗೆ ಭೇಟಿ ನೀಡಿ, ಅಲ್ಲಿನ ಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಸಚಿವರೊಂದಿಗೆ ಉತ್ತಮ ನಗರಾಡಳಿತ ಕಲ್ಪಿಸುವುದರ ಕುರಿತು ಚರ್ಚಿಸಲಾಗುವುದು. ಈ ಮೂಲಕ ನಗರ ಸಂಬಂಧಿತ ಎಲ್ಲ ಯೋಜನೆಗಳನ್ನು ಏಕ ಗವಾಕ್ಷಿ ಪದ್ಧತಿಯಡಿ ಇತ್ಯರ್ಥಪಡಿಸಲಾಗುವುದು ಎಂದು ಅನಂತಕುಮಾರ್‌ ತಿಳಿಸಿದರು.

ನಗರ ಪ್ರದೇಶಗಳಲ್ಲಿ 28.5 ಕೋಟಿ ಜನ ವಾಸಿಸುತ್ತಿದ್ದು , ಅವರಲ್ಲಿ 7.5 ಕೋಟಿ ಮಂದಿ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿದ್ದಾರೆ. ದೇಶದಲ್ಲಿನ 20 ಕೋಟಿ ಕುಟುಂಬಗಳ ಪೈಕಿ 3.3 ಕೋಟಿ ಕುಟುಂಬಗಳು ಮನೆಯನ್ನು ಹೊಂದಿಲ್ಲ . ಇವರಲ್ಲಿ 1.624 ಕೋಟಿ ಕುಟುಂಬಗಳು ಗ್ರಾಮೀಣ ಪ್ರದೇಶಕ್ಕೆ ಸೇರಿದ್ದರೆ, ಉಳಿದ 1.676 ಕೋಟಿ ಕುಟುಂಬಗಳು ನಗರ ಪ್ರದೇಶಕ್ಕೆ ಸೇರಿವೆ ಎನ್ನುವ ಅಂಕಿ ಅಂಶಗಳನ್ನು ಸಚಿವರು ನೀಡಿದರು.

2010 ನೇ ಇಸವಿಯಾಳಗೆ ಪ್ರತಿಯಾಬ್ಬರಿಗೂ ಸೂರೊದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಕಳೆದ ಮೂರು ವರ್ಷಗಳಲ್ಲಿ 34 ಲಕ್ಷ ಮನೆಗಳ ನಿರ್ಮಾಣಕ್ಕೆ ಹುಡ್ಕೋ ನೆರವು ನೀಡಿದೆ. ಇದರಲ್ಲಿ 15 ಲಕ್ಷ ಮನೆಗಳು ಈಗಾಗಲೇ ಸಿದ್ಧವಾಗಿದ್ದು , ಉಳಿದ 19 ಲಕ್ಷ ಮನೆಗಳು ಮುಕ್ತಾಯದ ವಿವಿಧ ಹಂತಗಳಲ್ಲಿವೆ ಎಂದು ಅನಂತಕುಮಾರ್‌ ಹೇಳಿದರು.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+