ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಗ್ರಾ. ಜಿಲ್ಲೆಯ ಹಲವು ಕೇಂದ್ರಗಳ STD

By Staff
|
Google Oneindia Kannada News

ಬೆಂಗಳೂರು : ನೀವು ಬೆಂಗಳೂರಿಗರೆ? ನಿಮಗೊಂದು ದೂರವಾಣಿ ಅಗತ್ಯ ಇದೆಯೇ? ದೂರವಾಣಿಗಾಗಿ ಅರ್ಜಿ ಸಲ್ಲಿಸಿ ಹಲವಾರು ವರ್ಷಗಳಿಂದ ಕಾಯುತ್ತಿದ್ದೀರಾ? ಇನ್ನು ನಿಮಗೆ ಆ ಚಿಂತೆ ಇಲ್ಲ. ದೂರವಾಣಿ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದ ಕೂಡಲೇ ದೂರವಾಣಿ ಮಂಜೂರು ಮಾಡಲು ಬೆಂಗಳೂರು ದೂರಸಂಪರ್ಕ ಜಿಲ್ಲೆ ನಿರ್ಧರಿಸಿದೆ.

ಇದೇ ವರ್ಷದ ಡಿಸೆಂಬರ್‌ ಅಂತ್ಯಕ್ಕೆ ಈ ಯೋಜನೆ ಜಾರಿಗೆ ಬರಿಲಿದ್ದು, ಕೇಳಿದ ಕೂಡಲೇ ಹೊಸ ದೂರವಾಣಿ ಸಂಪರ್ಕ ನೀಡಲಾಗುವುದು ಎಂದು ಬೆಂಗಳೂರು ದೂರ ಸಂಪರ್ಕ ಜಿಲ್ಲೆಯ ಪ್ರಧಾನ ವ್ಯವಸ್ಥಾಪಕ ಬಿ.ಆರ್‌. ಬಾಳಿಗಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ದೂರವಾಣಿ ಸಂಪರ್ಕ ಕೋರಿ 27 ಸಾವಿರ ಮಂದಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ವೈಟಿಂಗ್‌ ಲಿಸ್ಟ್‌ನಲ್ಲಿರುವ ಈ ಎಲ್ಲರೂ ನವೆಂಬರ್‌ ಅಂತ್ಯದೊಳಗೆ ದೂರವಾಣಿ ಸಂಪರ್ಕ ಪಡೆಯಲಿದ್ದಾರೆ. ದೂರವಾಣಿ ಸೌಲಭ್ಯ ಒದಗಿಸಲೆಂದೇ ಕೇಬಲ್‌ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ ಎಂದು ಅವರು ಹೇಳಿದರು.

ರಸ್ತೆ ಅಗೆದು ಕೇಬಲ್‌ ಅಳವಡಿಸಲು ಪಾಲಿಕೆಯ ಅನುಮತಿ ದೊರಕದ ಕಾರಣ ಕೆಲವು ಬಡಾವಣೆಗಳಲ್ಲಿ ಸಂಪರ್ಕ ಕಲ್ಪಿಸುವ ಕಾರ್ಯದಲ್ಲಿ ವಿಳಂಬವಾಯಿತು. ಈಗ ಪಾಲಿಕೆ ಅಧಿಕಾರಿಗಳ ಜತೆ ಮಾತುಕತೆ ನಡೆದಿದ್ದು, ಇಲಾಖೆ ಅನುಮತಿ ಪಡೆದುಕೊಂಡಿದೆ ಎಂದರು.

ಎಸ್‌.ಟಿ.ಡಿ. ಕೋಡ್‌ : ಸೆಪ್ಟೆಂಬರ್‌ 1ರಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾದ್ಯಂತ 080 ಎಸ್‌ಟಿಡಿ ಕೋಡ್‌ ಜಾರಿಗೆ ತರಲಾಗಿದೆ. 080 ಕೋಡ್‌ ನಂಬರ್‌ ಜೊತೆಗೆ ಆಯಾ ತಾಲೂಕಿನ ಎರಡಂಕಿಯ ನೂತನ ಕೋಡ್‌ ಸಂಖ್ಯೆ ಸೇರಿಸಿ ಫೋನ್‌ ಮಾಡಬಹುದಾಗಿದೆ ಎಂದು ಅವರು ವಿವರಿಸಿದರು.

ಈ ವ್ಯವಸ್ಥೆಯಿಂದ ಆಭಾದಿತವಾಗಿ ದೂರವಾಣಿ ಸಂಪರ್ಕ ಸಿಗಲಿದ್ದು, ಹಾಲಿ ಪಲ್ಸ್‌ ದರವೇ ಅನ್ವಯಿಸಲಿದೆ. ಇದಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದರು.

ಹೊಸ ಕೇಂದ್ರ: 20 ಸಾವಿರ ಸಂಪರ್ಕ ಸಾಮರ್ಥ್ಯದ ಬಿ.ಟಿ.ಎಂ. ಬಡಾವಣೆ ಕೇಂದ್ರ ಈ ತಿಂಗಳ ಕೊನೆಯಲ್ಲೂ, 15 ಸಾವಿರ ಸಂಪರ್ಕದ ಎಚ್‌ಎಎಲ್‌ ವಿಮಾನಪುರ ದೂರವಾಣಿ ವಿನಿಮಯ ಕೇಂದ್ರ ಸೆಪ್ಟೆಂಬರ್‌ ಮೂರನೇ ವಾರದಲ್ಲೂ ಕಾರ್ಯಾರಂಭ ಮಾಡಲಿದೆ ಎಂದು ಬಾಳಿಗಾ ತಿಳಿಸಿದರು. ನವೆಂಬರ್‌ ತಿಂಗಳಿನಲ್ಲಿ ಕನ್ನಡ ಟೆಲಿಫೋನ್‌ ಡೈರೆಕ್ಟರಿ ಬಿಡುಗಡೆ ಮಾಡಲಾಗುವುದು ಎಂದೂ ಅವರು ಹೇಳಿದರು.

ಹೊಸ ಎಸ್‌ಟಿಡಿ ಕೋಡ್‌ನ ವಿವರ :

  • ದೊಡ್ಡಬಳ್ಳಾಪುರ - 08076
  • ದೇವನಹಳ್ಳಿ - 08076
  • ನೆಲಮಂಗಲ - 08077
  • ಹೊಸಕೋಟೆ - 08079
  • ಆನೇಕಲ್‌ - 08078
  • ಮಾಗಡಿ - 08077
  • ರಾಮನಗರ - 08072
  • ಚನ್ನಪಟ್ಟಣ - 08072
  • ಕನಕಪುರ - 08075
ಈ ಮೆಲ್ಕಂಡ ಹೊಸ ಎಸ್‌ಟಿಡಿ ಕೋಡ್‌ಗಳ ಜೊತೆ ನೀವು ಸಂಪರ್ಕಿಬೇಕಾದ ಆಯಾ ಊರಿನ ದೂರವಾಣಿ ಸಂಖ್ಯೆ ಡಯಲ್‌ ಮಾಡಿ ಸುಲಭವಾಗಿ ಸಂಪರ್ಕ ಪಡೆಯಬಹುದು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X