Get Updates
Get notified of breaking news, exclusive insights, and must-see stories!

ಮುಂದಿನ ವರ್ಷದಿಂದ ‘ಉತ್ತಮ ಶಾಲೆ’ಪ್ರಶಸ್ತಿ - ಸಚಿವ ವಿಶ್ವನಾಥ್‌

ಕಾರವಾರ : ಉತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿರುವ ಹಾಗೆಯೇ ಮುಂದಿನ ವರ್ಷದಿಂದ ಉತ್ತಮ ಶಾಲೆಗಳನ್ನೂ ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ಹೇಳಿದ್ದಾರೆ.

ಅವರು ಬುಧವಾರ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ , ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಗಳನ್ನು ಪ್ರದಾನ ಮಾಡಿ ಮಾತನಾಡುತ್ತಿದ್ದರು. ಪ್ರತಿಯಾಂದು ಬ್ಲಾಕ್‌ನಿಂದ 3 ಉತ್ತಮ ಶಾಲೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುವುದು. ರಾಜ್ಯದಲ್ಲಿ ಒಟ್ಟು 600 ಶಾಲೆಗಳಿಗೆ ಈ ಬಹುಮಾನ ನೀಡಲಾಗುವುದು ಎಂದು ಸಚಿವರು ಹೇಳಿದರು.

ಉತ್ತಮ ಶಾಲೆಯ ಪ್ರಶಸ್ತಿಯು ಫಲಕದ ಜೊತೆಗೆ ಕಿರಿಯ ಪ್ರಾಥಮಿಕ ಶಾಲೆಗಾದರೆ, 10 ಸಾವಿರ ರೂಪಾಯಿಗಳನ್ನು, ಹಿರಿಯ ಪ್ರಾಥಮಿಕ ಶಾಲೆಗೆ 15 ಸಾವಿರ ರೂಪಾಯಿಗಳನ್ನು ಮತ್ತು ಪೌಢ ಶಾಲೆಗೆ 25 ಸಾವಿರ ರೂ.ಳನ್ನೊಳಗೊಂಡಿರುತ್ತದೆ. ಶಾಲೆಗಳಲ್ಲಿ ಶಿಕ್ಷಕರ ಕರ್ತವ್ಯ ನಿಷ್ಠೆ, ಪರೀಕ್ಷಾ ಕ್ರಮ ಮತ್ತು ಮೌಲ್ಯಮಾಪನ ಜೊತೆಗೆ ಶಾಲಾ ಪರಿಸರವನ್ನೂ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಖಾತೆ ಸಚಿವ ಎಚ್‌. ಕೆ. ಪಾಟೀಲ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಹಟ್ಟಿ, ಶಾಸಕ ಮೋಹನ ಶೆಟ್ಟಿ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ:
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+