ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲಿ ಜ್ವರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ 20 ಸಾವಿನ ಶಂಕೆ

By Staff
|
Google Oneindia Kannada News

ಬೆಂಗಳೂರು : ರಾಜ್ಯದ ಕರಾವಳಿಯಲ್ಲಿ ಇಲಿ ಜ್ವರದ ಭೀತಿ ಮನೆ ಮಾಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಲಿ ಜ್ವರದ ಸಾವಿನ ಪ್ರಕರಣಗಳು ಅಧಿಕೃತವಾಗಿ ವರದಿಯಾಗಿದೆ. ಈ ಮಧ್ಯೆ ಉತ್ತರ ಕನ್ನಡ ಜಿಲ್ಲೆಯಾಂದರಲ್ಲೇ 18-20 ಮಂದಿ ಇಲಿಜ್ವರಕ್ಕೆ ಬಲಿಯಾಗಿದ್ದಾರೆ ಎಂಬ ಸುದ್ದಿಗಳು ನಾಗರಿಕರನ್ನು ಆತಂಕಕ್ಕೀಡು ಮಾಡಿವೆ.

ಅಂಕೋಲ ಹಾಗೂ ಶಿರಸಿಯಲ್ಲಿ ಸತ್ತವರು ನಿಮೋನಿಯಾ ಪೀಡಿತರೇ ವಿನಾ ಇಲಿ ಜ್ವರಕ್ಕೆ ತುತ್ತಾದವರಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಕೋಲ ತಾಲೂಕಿನ ಮಧುಕೇಶ್ವರ ಬಾಬುರಾಯ ನಾಯ್ಕ ಅವರಿಗೆ ಮಾತ್ರ ಇಲಿ ಜ್ವರ ಇತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ಸಾಮಾನ್ಯವಾಗಿ ಇಲಿ ಜ್ವರ ಸಾಕು ಪ್ರಾಣಿಗಳ ಸಂಪರ್ಕ ಹಾಗೂ ಇಲಿ ಅಥವಾ ಹೆಗ್ಗಣದ ಮೂತ್ರದಿಂದ ವ್ಯಾಪಕವಾಗಿ ಹರಡುತ್ತದೆ. 1999ರಲ್ಲಿ ಪಾವಂಜೆ (ಸುರತ್ಕಲ್‌ ಸಮೀಪ) ನದಿ ತಟದಲ್ಲಿ ಈ ವ್ಯಾಧಿ ಕಾಣಿಸಿಕೊಂಡಿತ್ತು. ನದಿಯ ನೀರೆ ಈ ರೋಗಕ್ಕೆ ಕಾರಣ ಇರಬೇಕು ಎಂದು ಪರೀಕ್ಷಿಸಿದಾಗ ಇಲಿಯ ಮೂತ್ರ ನೀರಿನಲ್ಲಿ ಬೆರೆತಿರುವುದು ಮತ್ತು ಮೂತ್ರದಲ್ಲಿ ಬ್ಯಾಕ್ಟೀರಿಯಾ ಇದ್ದದ್ದು ಪತ್ತೆಯಾಯಿತು ಎಂದು ವರದಿಯಾಗಿತ್ತು.

ಈಗ ಮತ್ತೆ ಇಲಿ ಜ್ವರ ಕಾಣಿಸಿಕೊಂಡಿದೆ. ಅಂಕೋಲ, ಶಿರಸಿ, ಮೂಲ್ಕಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಸತ್ತವರಿಗೆ ಇಲಿ ಜ್ವರದ ಸೋಂಕಿತ್ತು ಎಂಬುದು ಸಹಜವಾಗಿಯೇ ಊಹಾ ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಮೂಲಗಳ ಪ್ರಕಾರ ಅಂಕೋಲ ತಾಲೂಕಿನಲ್ಲೇ 16ಮಂದಿ ಇಲಿ ಜ್ವರದಿಂದ ನರಳುತ್ತಿದ್ದಾರೆ.

ವೈರಲ್‌ ಫೀವರ್‌ : ಋತುಮಾನದ ಬದಲಾವಣೆಯ ಪರಿಣಾಮವಾಗಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ವೈರಲ್‌ ಫೀವರ್‌ ಕಾಣಿಸಿಕೊಂಡಿದೆ. ಆದರೆ, ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈದ್ಯರು ತಿಳಿಸಿದ್ದಾರೆ.

ಋತುಮಾನ ಬದಲಾವಣೆಯಾದ ಸಂದರ್ಭದಲ್ಲಿ ವೈರಲ್‌ ಫೀವರ್‌ ಕಾಣಿಸಿಕೊಳ್ಳುವುದು ಸಹಜ. ಆದರೆ, ಬೆಂಗಳೂರಿನಲ್ಲಿ ಜ್ವರದ ಪ್ರಕರಣದಲ್ಲಿ ಹೆಚ್ಚಳವೇನೂ ಕಂಡುಬಂದಿಲ್ಲ ಎಂದು ಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ಡಾ. ಆರ್‌. ಚಂದ್ರಶೇಖರ್‌ ತಿಳಿಸಿದ್ದಾರೆ.

ವಾರ್ತಾ ಸಂಚಯ:
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X