ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಯಾವುದೇ ಯುದ್ಧ ಖೈದಿಗಳು ನಮ್ಮ ವಶದಲ್ಲಿಲ್ಲ - ಪಾಕ್‌

By Staff
|
Google Oneindia Kannada News

ಇಸ್ಲಮಾಬಾದ್‌ : ಪಾಕಿಸ್ತಾನದ ಜೈಲುಗಳಲ್ಲಿ ಭಾರತದ ಯಾವುದೇ ಯುದ್ಧ ಖೈದಿಗಳಿಲ್ಲ ಎಂದು ಪಾಕಿಸ್ತಾನ ಅಧಿಕೃತವಾಗಿ ಘೋಷಿಸಿದೆ. ಈ ಬಗ್ಗೆ ಅನುಮಾನಗಳಿದ್ದರೆ, ಖೈದಿಗಳ ಸಂಬಂಧಿಗಳು ಪಾಕಿಸ್ತಾನಕ್ಕೆ ಭೇಟಿ ಕೊಟ್ಟು ಖುದ್ದು ಪರೀಕ್ಷೆ ನಡೆಸಬಹುದೆಂದು ಪಾಕ್‌ ಅಧ್ಯಕ್ಷ ಮುಷರ್ರಫ್‌ ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ವಕ್ತಾರರೊಬ್ಬರು ಬುಧವಾರ ಈ ಕುರಿತು ಹೇಳಿಕೆಯನ್ನು ಹೊರಡಿಸಿದ್ದು , ಪಾಕಿಸ್ತಾನದ ಜೈಲುಗಳಲ್ಲಿ ಭಾರತದ ಯಾವುದೇ ಯುದ್ಧ ಖೈದಿಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಅವರ ಸೂಚನೆಯ ಮೇರೆಗೆ ನಡೆಸಿರುವ ತನಿಖೆಯಲ್ಲಿ ಈ ವಿಷಯ ದೃಢೀಕರಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಆಗ್ರಾ ಶೃಂಗಸಭೆ ಸಂದರ್ಭದಲ್ಲಿ ಪಾಕಿಸ್ತಾನದ ಜೈಲುಗಳಲ್ಲಿರುವ ಭಾರತದ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ವಾಜಪೇಯಿ ಅವರು ಮುಷರ್ರಫ್‌ ಅವರಲ್ಲಿ ಮನವಿ ಮಾಡಿದ್ದರು. 30 ವರ್ಷಗಳ ನಂತರವೂ ಯುದ್ಧ ಖೈದಿಗಳು ಪಾಕ್‌ ಜೈಲುಗಳಲ್ಲಿರುವ ಬಗೆಗೆ ಸಂಶಯ ವ್ಯಕ್ತಪಡಿಸಿದ್ದ ಮುಷರ್ರಫ್‌, ಈ ಕುರಿತು ಮತ್ತೊಮ್ಮೆ ತಾವೇ ಖುದ್ದು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು.

ಪಾಕ್‌ ಜೊತೆ ಮಾತುಕತೆ ಮುಂದುವರಿಕೆ- ವಾಜಪೇಯಿ
ಪಾಕಿಸ್ತಾನದ ಜೊತೆಗಿನ ಮಾತುಕತೆಗಳನ್ನು ಮುಂದುವರಿಸುವುದಾಗಿ ಪ್ರಧಾನಿ ವಾಜಪೇಯಿ ಗುರುವಾರ ಪುನರುಚ್ಛರಿಸಿದ್ದಾರೆ. ಕಾಶ್ಮೀರ ಕೊಳ್ಳದಲ್ಲಿ ಹಿಂಸಾಚಾರ ಮುಂದುವರಿಯುತ್ತಿದ್ದರೂ, ತಾವು ಮಾತುಕತೆ ಪ್ರಯತ್ನಗಳನ್ನು ಮುಂದುವರಿಸುವುದಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X