Get Updates
Get notified of breaking news, exclusive insights, and must-see stories!

ಸೆ.5ರಿಂದ ಬೆಂಗಳೂರಲ್ಲಿ 2ನೇ ಸುತ್ತಿನ ಖಾತಾ ಮೇಳ ಆರಂಭವಾಗಿದೆ

ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆ ಎರಡನೇ ಹಂತದ ಖಾತಾ ಮೇಳವನ್ನು ಅರಂಭಿಸಿದೆ. ಈ ಮೇಳ ಸೆಪ್ಟೆಂಬರ್‌ 5ರಿಂದ 7ನೇ ತಾರೀಖಿನವರೆಗೆ ನಡೆಯಲಿದೆ ಎಂದು ಪಾಲಿಕೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಆಗಸ್ಟ್‌ ತಿಂಗಳಿನಲ್ಲಿ ನಡೆದ ಸರಳ ಖಾತಾ ಮೇಳದಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ಖಾತಾ ಮೇಳ ನಡೆಯುತ್ತಿದೆ ಎಂದು ಪಾಲಿಕೆಯ ಆಯುಕ್ತ ಅಶೋಕ್‌ ದಳವಾಯಿ ತಿಳಿಸಿದ್ದಾರೆ. ಕಳೆದ ಬಾರಿಯಂತೆ ಈ ಸಾರಿ ಕೂಡ ನಗರದ 28 ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲದೆ, ವಿಶೇಷ ಖಾತಾ ಮೇಳ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುವುದು.

ಹೊಸ ಖಾತಾ, ಖಾತಾ ವರ್ಗಾವಣೆ ಈ ಮೇಳದಲ್ಲಿ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು - 2227822, ಉಪ ಆಯುಕ್ತರು ಪೂರ್ವ - 5582247, ಉಪ ಆಯುಕ್ತರು ಪಶ್ಚಿಮ - 3361704, ಉಪ ಆಯುಕ್ತರು ದಕ್ಷಿಣ - 2223197.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+