ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ 22 ಫ್ಲೈ ಓವರ್‌ ನಿರ್ಮಾಣಕ್ಕೆ ಅಧ್ಯಯನ ಆರಂಭ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಿನ ಸಂಚಾರದ ಒತ್ತಡ ನಿಯಂತ್ರಿಸಲು 22 ಮೇಲು ಸೇತುವೆಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಹುಡ್ಕೋ ನೆರವಿನಿಂದ ಈ ಕಾಮಗಾರಿಗಳಿಗೆ ಬರುವ ಜನವರಿಯಲ್ಲಿ ಚಾಲನೆ ದೊರೆಯಲಿದೆ. ಇದಕ್ಕಾಗಿ ಈಗಾಗಲೇ ಅಧ್ಯಯನ ಆರಂಭವಾಗಿದೆ.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಕೈಗೆತ್ತಿಕೊಂಡಿರುವ ಈ ಕಾಮಗಾರಿಗಳ ಬಗ್ಗೆ ಅಧ್ಯಯನ ಆರಂಭಿಸಲಾಗಿದ್ದು, ಡಿಸೆಂಬರ್‌ ಅಂತ್ಯದೊಳಗೆ ವರದಿ ಸಿದ್ಧವಾಗಲಿದೆ. ಜನವರಿಯಲ್ಲಿ ಯೋಜನೆಗಳಿಗೆ ಚಾಲನೆ ದೊರಕುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಮೂಲಗಳು ತಿಳಿಸಿವೆ.

ಯೋಜನೆಗೆ ಹುಡ್ಕೋ ಸಂಸ್ಥೆ 175 ಕೋಟಿ ರುಪಾಯಿಗಳ ನೆರವು ನೀಡುತ್ತಿದ್ದು, ಮೊದಲ ಹಂತದಲ್ಲಿ ಹತ್ತು ಮೇಲು ಸೇತುವೆಗಳನ್ನು ನಿರ್ಮಿಸಲು ಬೆಂಗಳೂರಿನಲ್ಲಿ ಸ್ಥಳ ಗುರುತಿಸಲಾಗಿದೆ. ಆಗಸ್ಟ್‌ 26ರಿಂದ ಜಾರಿಗೆ ತರಲಾಗಿರುವ ಹೊಸ ಏಕಮುಖ ಸಂಚಾರ ವ್ಯವಸ್ಥೆಗೆ ಅನುಗುಣವಾಗಿ ಈ ಫ್ಲೈಓವರ್‌ಗಳ ನಿರ್ಮಾಣ ಆಗಲಿದೆ.

ಪ್ರಸ್ತುತ ಆನಂದರಾವ್‌ ವೃತ್ತ, ಮಹಾರಾಣಿ ಕಾಲೇಜು ವೃತ್ತ, ಕೆ.ಆರ್‌.ವೃತ್ತ, ಹಡ್ಸನ್‌ ವೃತ್ತ, ರಾಜಾಜಿನಗರದ ಮೋದಿ ಆಸ್ಪತ್ರೆ ರಸ್ತೆ ಮತ್ತು ಕಾರ್ಡ್‌ ರಸ್ತೆಯನ್ನು ಸಂಪರ್ಕಿಸುವ ವೃತ್ತ, ಲಾಲ್‌ಬಾಗ್‌ ಈಸ್ಟ್‌ ಗೇಟ್‌ ವೃತ್ತ, ನ್ಯಾಷನಲ್‌ ಕಾಲೇಜು ಮುಂಭಾಗದ ವೃತ್ತ, ಸೌತ್‌ ಎಂಡ್‌ ಸರ್ಕಲ್‌, ಟ್ರಿನಿಟಿ ವೃತ್ತದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ವೃತ್ತ, ರಿಚ್‌ಮಂಡ್‌ ವೃತ್ತದಿಂದ ವೆಲ್ಲಾರದವರೆಗೆ ಹಾಗೂ ವಿಮಾನ ನಿಲ್ದಾಣ ರಸ್ತೆಯಿಂದ ಕೋರಮಂಗಲ ರಿಂಗ್‌ರಸ್ತೆವರೆಗೆ ಸಂಪರ್ಕ ಕಲ್ಪಿಸುವ ವೃತ್ತಗಳಲ್ಲಿ ಈ ಹೊಸ ಮೇಲು ಸೇತುವೆಗಳ ನಿರ್ಮಾಣ ಆಗಲಿದೆ.

ಕಾಲಮಿತಿ : ಮೇಲು ಸೇತುವೆಗಳು ನೇರರಸ್ತೆ, ಅಡ್ಡ ಮಾರ್ಗಗಳನ್ನು ಒಳಗೊಂಡಿದ್ದು, ಒಂದು ಮೇಲ್ಸೇತುವೆ ನಿರ್ಮಾಣಕ್ಕೆ 9ರಿಂದ 15 ತಿಂಗಳು ಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಮೇಲ್ಸೇತುವೆಗಳ ಜೊತೆಗೆ ನೂರಕ್ಕೂ ಹೆಚ್ಚು ಜಂಕ್ಷನ್‌ಗಳನ್ನು ಅಭಿವೃದ್ಧಿ ಪಡಿಸಲೂ ನಿರ್ಧರಿಸಲಾಗಿದೆ.

ವಾರ್ತಾ ಸಂಚಯ:
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X