Get Updates
Get notified of breaking news, exclusive insights, and must-see stories!

ಕಾಡುಗಳ್ಳ ವೀರಪ್ಪನ್‌ ಸಹಚರನ ಬಂಧನ : ಶಸ್ತ್ರಾಸ್ತ್ರ ವಶ

ಕೊಯಮತ್ತೂರು : ವೀರಪ್ಪನ್‌ ಶಿಕಾರಿಯಲ್ಲಿ ತೊಡಗಿರುವ ವಿಶೇಷ ಕಾರ್ಯಪಡೆ ಆಂದಿಯೂರು ಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ನ ಸಹಚರನೊಬ್ಬನನ್ನು ಬಂಧಿಸಿದ್ದು, ಆತನಿಂದ ಒಂದು ನಾಡ ಪಿಸ್ತೂಲು, ಗನ್‌ಪೌಡರ್‌ ಹಾಗೂ ಮತ್ತಿತ್ತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಬಂಧಿತನನ್ನು ನಾಗಲೂರು ಗ್ರಾಮದ ಚೆನ್ನಿತಾಡರ್‌ (55) ಎಂದು ಗುರುತಿಸಲಾಗಿದೆ. ಆಂದಿಯೂರು ಸಮೀಪದ ಕೊಂಡಗೈ ಅರಣ್ಯದಲ್ಲಿ ವೀರಪ್ಪನ್‌ಗಾಗಿ ಶೋಧ ನಡೆಸುತ್ತಿರುವ ವಿಶೇಷ ಕಾರ್ಯಪಡೆ ಈತನನ್ನು ಬಂಧಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನಿತಾಡರ್‌ ತನ್ನ ನಾಲ್ವರು ಸಹಚರರೊಂದಿಗೆ ಜಿಂಕೆ ಭೇಟೆಯಾಡುತ್ತಿದ್ದಾಗ ಬಂಧಿಸಲಾಯಿತು. ಈತ ಪ್ರಾಣಿಗಳನ್ನು ಭೇಟೆಯಾಡುವುದಲ್ಲದೆ, ಮರಗಳ ಕಳ್ಳಸಾಗಣೆಯನ್ನೂ ಮಾಡುತ್ತಿದ್ದ. ನಾಡಿನ ವಿಧ್ಯಮಾನಗಳನ್ನು ಕಾಡುಗಳ್ಳನಿಗೆ ತಲುಪಿಸುವುದು ಈತನ ಮುಖ್ಯ ಕಾಯಕ ಎಂದು ಎಸ್‌.ಟಿ.ಎಫ್‌. ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+