Get Updates
Get notified of breaking news, exclusive insights, and must-see stories!

ಜನವರಿ16ರಂದು ಉಡುಪಿ ಶ್ರೀಕೃಷ್ಣ ಮಠದ ಬ್ರಹ್ಮಕಲಶೋತ್ಸವ

ಉಡುಪಿ : ಶ್ರೀ ಕೃಷ್ಣ ಮಠದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಮುಂದಿನ ಜನವರಿ ತಿಂಗಳ 16ರಂದು ನಡೆಯಲಿದೆ ಎಂದು ಪರ್ಯಾಯ ಪೀಠ ಸ್ವಾಮೀಜಿ ವಿಶ್ವೇಶ ತೀರ್ಥ ಶ್ರೀಪಾದ ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಬ್ರಹ್ಮ ಕಲಶೋತ್ಸವದ ಅಂಗವಾಗಿ ಗರ್ಭ ಗೃಹದ ಸುತ್ತ ಮಹಾವಿಷ್ಣುವಿನ ಹತ್ತು ಅವತಾರಗಳನ್ನು ಬಿಂಬಿಸುವ ಶಿಲ್ಪಗಳನ್ನು ಅಳವಡಿಸಲಾಗುವುದು. ದೇವಸ್ಥಾನದಲ್ಲಿ ಬೆಳ್ಳಿ ಮಂಟಪ ಮತ್ತು ಬೆಳ್ಳಿ ಕಮಾನುಗಳನ್ನು ನಿರ್ಮಿಸುವ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ. ಎಂದು ಸ್ವಾಮೀಜಿಯವರ ಪ್ರಕಟಣೆ ತಿಳಿಸಿದೆ. ಸುಮಾರು ಒಂದುವರೆ ಕೆಜಿ ತೂಕದ ಚಿನ್ನದ ಗೋವಿನ ಮೂರ್ತಿಯನ್ನೂ ಉಡುಪಿ ಕೃಷ್ಣನಿಗೆ ಈ ಸಂದರ್ಭದಲ್ಲಿ ಸಮರ್ಪಿಸಲಾಗುವುದು.

ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಆಸಕ್ತ ಭಕ್ತಾದಿಗಳು ನೀಡುವ ಚಿನ್ನ, ಬೆಳ್ಳಿ, ಧನ ಇತ್ಯಾದಿ ಯಥಾನುಶಕ್ತಿ ದಾನವನ್ನು ಸ್ವೀಕರಿಸಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ. ಜನವರಿ 17, 2002ರಂದು ವಿಶ್ವೇಶ ತೀರ್ಥ ಶ್ರೀಪಾದರ ಪರ್ಯಾಯ ಪೀಠದ ಅವಧಿ ಮುಗಿಯಲಿದ್ದು ನಂತರ ಫಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿಗಳು ಪರ್ಯಾಯ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+