Get Updates
Get notified of breaking news, exclusive insights, and must-see stories!

ಈ ಬಾರಿಯ ಬೇಸಗೆಯ ಧಗೆ ಅಸಹನೀಯವಾಗಿರುತ್ತದೆಯೇ?

ಬಹಳಷ್ಟು ಜನ ಹೌದೆನ್ನುತ್ತಿದ್ದಾರೆ. ಮಳೆ ಮರೀಚಿಕೆಯಾಗಿ ರಾಜ್ಯದೆಲ್ಲೆಡೆ ಬರದ ಕರಾಳ ಛಾಯೆ ಕವಿದಿರುವಾಗ ಇಂಥ ಅನ್ನಿಸಿಕೆ ಸಹಜವೇ! ಋತುಮಾನದ ಹಂಗಿಲ್ಲದೆ ನಿತ್ಯ ಹರಿದ್ವರ್ಣದಂತಿದ್ದ ಬೆಂಗಳೂರಿನಂಥ ಬೆಂಗಳೂರೇ ಮುಂಗಾರಿನ ದಿನಗಳಲ್ಲೇ ಬಾಯ್ಬಿಟ್ಟು ಕೂತಿರುವಾಗ, ಬೇಸಗೆ ಸಹನೀಯವಾಗಿರುತ್ತದೆಂದು ಯಾವ ಬಾಯಲ್ಲಿ ಹೇಳುವುದು!? ಆದರೆ ಆ ಧೈರ್ಯವನ್ನು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಪ್ರದರ್ಶಿಸಿದೆ. ಈ ಸಲದ ಬೇಸಗೆ ನೀವು ಅಂಜುವಷ್ಟು ಅಧ್ವಾನವಾಗೇನೂ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಬರುವ ಮೇ, ಜೂನ್‌ ತಿಂಗಳಲ್ಲಿ ಮುಂಬಯಿ ಹೊರತಾಗಿ ಉಳಿದ ನಗರಗಳ ತಾಪಮಾನದಲ್ಲಿ ಅಂಥ ಏರಿಕೆಯೇನೂ ಕಂಡುಬರುವುದಿಲ್ಲ ಎನ್ನುತ್ತದೆ ಇಲಾಖೆ. ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ನಡೆಸಿರುವ ವಾತಾವರಣದ ಅಧ್ಯಯನವೇ ಈ ಹೇಳಿಕೆಗೆ ಮೂಲ.

1969 ರಿಂದ ಈವರೆಗಿನ ಏಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳುಗಳ ದಿನನಿತ್ಯದ ಕನಿಷ್ಠ- ಗರಿಷ್ಠ ಉಷ್ಣಾಂಶಗಳು ಹಾಗೂ ವಾತಾವರಣದ ಏರಿಳಿತಗಳನ್ನು ಹವಾಮಾನ ಇಲಾಖೆಯ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಈ ಅಂಕಿ ಅಂಶಗಳನ್ನು ಬಳಸಿಕೊಂಡು ಹವಾಮಾನದ ಟ್ರೆಂಡ್‌ ಬಗೆಗಿನ ವರದಿಯನ್ನು ಎ.ಕೆ.ಶ್ರೀವಾಸ್ತವ, ಕೆ.ಸಿ. ಸಿನ್ಹ ರೇ ಹಾಗೂ ಆರ್‌.ವಿ.ಯಾದವ್‌ ಸಿದ್ಧಪಡಿಸಿದ್ದಾರೆ. ಬೆಂಗಳೂರಿನ ಇಂಡಿಯನ್‌ ಅಕಾಡೆಮಿ ಆಫ್‌ ಸೈನ್ಸ್‌ನ ಪ್ರಕಟಣೆ ‘ಕರಂಟ್‌ ಸೈನ್ಸ್‌’ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದೆ.

ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ ಮೇ ತಿಂಗಳಲ್ಲಿ - ಐದು ದಿನಗಳ ಅವಧಿಯ ಪೆಂಟಾಡ್‌ ಮಾನದಂಡದ ಪ್ರಕಾರ ಉಷ್ಣಾಂಶ ತುಸು ಏರುಮುಖದಲ್ಲಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಆದರೆ, ದೆಹಲಿ, ಕೋಲ್ಕತಾ, ಚೆನ್ನೈ ನಗರಿಗಳಲ್ಲಿ ಕಳೆದ 30 ವರ್ಷಗಳಲ್ಲಿ ಉಷ್ಣಾಂಶದ ಪ್ರಮಾಣ ಸಮತೋಲನದಲ್ಲಿರುವುದಾಗಿ ಅಧ್ಯಯನ ತಿಳಿಸಿದೆ. ವಿವಿಧ ಕಾರಣಗಳಿಂದಾಗಿ ಮಹಾನಗರಗಳು ಬಿಸಿ ದ್ವೀಪಗಳಾಗುತ್ತಿರುವ ಬಗೆಗೆ ವರದಿ ಆತಂಕ ವ್ಯಕ್ತಪಡಿಸಿದೆ.

ಸೆಪ್ಟಂಬರ್‌ ನಡುವರೆಗೆ ಬೆಂಗಳೂರಿನಲ್ಲಿ ಬಿಸಿಲಿನದೇ ಹಾಡು!

ದಕ್ಷಿಣ ಭಾರತದಲ್ಲಿ ದುರ್ಬಲಗೊಂಡಿರುವ ಮುಂಗಾರಿನ ಕಳೆಗುಂದಿದ ಛಾಯೆ ಕಳೆದ ಹದಿನೈದು ದಿನಗಳಿಂದ ಬೆಂಗಳೂರಿನಲ್ಲೂ ಪ್ರತಿಬಿಂಬಿಸಿದ್ದು , ಸೆಪ್ಟಂಬರ್‌ ಮಧ್ಯಭಾಗದವರೆಗೂ ಇದೇ ಪರಿಸ್ಥಿತಿ ಮುಂದುವರಿಯುವುದು ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಆನಂದ್‌ ಎಲ್‌ ಕೊಪ್ಪಾರ್‌ ತಿಳಿಸಿದ್ದಾರೆ.

ಉ.ಪ್ರ.ದಲ್ಲಿ ಧಾರಾಕರ ಮಳೆಗೆ 141 ಸಾವು

ಕಳೆದ ನಾಲ್ಕು ದಿನಗಳಿಂದ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಬೀಳುತ್ತಿರುವ ಧಾರಾಕಾರ ಮಳೆಗೆ ಈವರೆಗೆ ಸುಮಾರು 141 ಮಂದಿ ಬಲಿಯಾಗಿದ್ದಾರೆ. ನದಿಗಳು ತುಂಬಿ ಹರಿಯುತ್ತಿದ್ದು , 1 ಸಾವಿರ ಹಳ್ಳಿಗಳಲ್ಲಿನ 60 ಸಾವಿರ ಹೆಕ್ಟೇರ್‌ ಕೃಷಿಭೂಮಿಗೆ ಹಾನಿಯಾಗಿದೆ. 4 ಲಕ್ಷ ಮಂದಿ ಮಳೆಯಿಂದ ತೊಂದರೆ ಅನುಭವಿಸಿದ್ದು , 1 ಸಾವಿರ ಮನೆಗಳು ಪೂರ್ಣ ಅಥವಾ ಅರೆ ಜಲಾವೃತವಾಗಿವೆ. ಈ ನಡುವೆ ಪರಿಹಾರ ಕಾಮಗಾರಿಗಳೂ ತ್ವರಿತ ಗತಿಯಿಂದ ಸಾಗಿವೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+