Get Updates
Get notified of breaking news, exclusive insights, and must-see stories!

ಸೆಪ್ಟೆಂಬರ್‌ 9ರಿಂದ 16 ರವರೆಗೆ ಸಾಯಿ ನಮನ ಸಪ್ತಾಹ- 2001

ಬೆಂಗಳೂರು : ಇದು ಅಪರೂಪದ ಕಾರ್ಯಕ್ರಮ. ಓಂ ಸಾಯಿ, ಶ್ರೀ ಸಾಯಿ, ಜಯಜಯ ಸಾಯಿ ಎಂಬ ಮಂತ್ರವನ್ನು ಏಳು ದಿನಗಳ ಕಾಲ ಅಂದರೆ 168 ಗಂಟೆಗಳ ಕಾಲ ನಿರಂತರ ಜಪಿಸುವ ಸಾಯಿನಮನ ಸಪ್ತಾಹ ಕಾರ್ಯಕ್ರಮ.

ಕಾರ್ಯಕ್ರಮ ಸೆಪ್ಟೆಂಬರ್‌ 9ರ ಭಾನುವಾರ ಬೆಂಗಳೂರಿನಲ್ಲಿ ಶುರುವಾಗುತ್ತದೆ. ಸೆಪ್ಟೆಂಬರ್‌ 16ರಂದು ಸಮಾರೋಪ. ಕಾರ್ಯಕ್ರಮದ ಹಿನ್ನೆಲೆ : ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶ್ರೀ ಸಾಯಿ ಸ್ನೇಹಧಾಮ ವೃದ್ಧಾಶ್ರಮದ ಬಳಿ (ಮೇಟಿ ಪಾಳ್ಯ ಗ್ರಾಮ, ತಾವರೆಕೆರೆ- ಸೊಂಡೆಕೊಪ್ಪ ರಸ್ತೆ, ಬೆಂಗಳೂರು) ಶತಶೃಂಗ ವಿದ್ಯಾ ಸಂಸ್ಥೆ ಯ ಘಟಕದ ಉದ್ಘಾಟನೆಯಾಯಿತು. ಸೆಪ್ಟೆಂಬರ್‌ 7ರಿಂದ ಅಕ್ಟೋಬರ್‌ 29 ರವರೆಗೆ ಸಾಯಿ ಬಾಬಾ ತಾರಕ ಮಂತ್ರ ಜಪ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.

ಸಮರ್ಥ ಸದ್ಗುರು ಸಾಯಿನಾಥ್‌ ಮಹಾರಾಜ್‌ ಈ ಸಂದರ್ಭದಲ್ಲಿ ಭಕ್ತರಿಗೆ ಕಾಣಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಭಕ್ತ ಪ್ರಿಯ ಸಾಯಿಬಾಬಾ , ಸಾಯಿ ತಾರಕ ಮಂತ್ರ ಜಪದ ಸಂದರ್ಭದಲ್ಲಿ ಅನೇಕ ಮಂದಿ ಭಕ್ತರಿಗೆ ದರ್ಶನ ನೀಡುತ್ತಾರಂತೆ.

ಎಂದಿಗೆ ಆಗುವುದೋ ನಿನ್ನ ದರುಶನಾ

ಕಳೆದ ಸೆಪ್ಟಂಬರ್‌ 9 ರಂದು ಭಕ್ತರಿಗೆ ಬಾಬಾ ಕಾಣಿಸಿಕೊಂಡು ಆಶೀರ್ವದಿಸಿದ ಘಟನೆ ನಡೆದಿತ್ತಂತೆ. ಈ ಹಿನ್ನೆಲೆಯಲ್ಲಿ ವಿದ್ಯಾ ಸಂಸ್ಥೆಯು ಸಾಯಿ ತಾರಕ ಮಂತ್ರ ಜಪ ಕಾರ್ಯಕ್ರಮವನ್ನು ಈ ಬಾರಿಯೂ ಆಯೋಜಿಸಿದೆ. ಈ ವರ್ಷದ ಸೆಪ್ಟೆಂಬರ್‌ಗೆ ಬಾಬಾ ದರ್ಶನ ನೀಡಿ ಒಂದು ವರ್ಷವಾಗುತ್ತದೆ. ಆ ನೆನಪಿಗೆ ಮತ್ತೊಮ್ಮೆ ಬಾಬಾನನ್ನು ಒಲಿಸಿಕೊಳ್ಳಲು ಈ ಜಪ.

ಈ ಸಪ್ತಾಹದಲ್ಲಿ ಭಾಗವಹಿಸಲಿಚ್ಚಿಸುವವರು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ-ಬಿ.ಆರ್‌. ರಮಾಪ್ರಸಾದ್‌(ಸ್ಥಾಪಕರು), ಎಚ್‌. ಎ. ನಾಗವೇಣಮ್ಮ (ಗೌರವ ಕಾರ್ಯದರ್ಶಿ) , ಶತ ಶೃಂಗ ವಿದ್ಯಾ ಸಂಸ್ಥೆ, ಚೆಕ್‌ ಪೋಸ್ಟ್‌ ಬಳಿ, ಮಾಗಡಿ ಮುಖ್ಯ ರಸ್ತೆ, ಕಾಮಾಕ್ಷಿ ಪಾಳ್ಯ ಎಕ್ಸ್‌ಟೆನ್ಷನ್‌, ಬೆಂಗಳೂರು , 560 079, ಫೋನ್‌- 91080 3488157, 3486044, ಇ-ಮೇಲ್‌ [email protected]

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+