ಮಾನವ ಕ್ಲೋನಿಂಗ್ ಪ್ರಯತ್ನಗಳಿಗೆ ಯುನೆಸ್ಕೋ ನಿರ್ದೇಶಕರ ವಿರೋಧ
ಬೀಜಿಂಗ್ : ಮನುಷ್ಯನ ಕ್ಲೋನಿಂಗ್ ಕುರಿತು ನಡೆಯುತ್ತಿರುವ ಪ್ರಯತ್ನಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಯುನೆಸ್ಕೋದ ಪ್ರಧಾನ ನಿರ್ದೇಶಕ ಕೊಚಿರೊ ಮಟ್ಸೂರ್ ಅವರು, ಇಂಥ ಪ್ರಯತ್ನಗಳು ಮನುಷ್ಯ ಜನಾಂಗದ ಘನತೆಗೆ ವಿರುದ್ಧವಾದುದು ಎಂದು ಟೀಕಿಸಿದ್ದಾರೆ.
ಕೆಲವು ಮಂದಿ ಮನುಷ್ಯನ ಕ್ಲೋನಿಂಗ್ಗೆ ಪ್ರಯತ್ನಿಸುತ್ತಿರುವ ಸುದ್ದಿಗಳನ್ನು ಓದಿ ನನಗೆ ಆಘಾತವಾಯಿತು ಎಂದು ಇ-9 ರಾಷ್ಟ್ರಗಳ ಸಚಿವಾಲಯ ಸಮೀಕ್ಷೆ ಸಭೆಯಲ್ಲಿ ಭಾಗವಹಿಸಲು ಬೀಜಿಂಗ್ಗೆ ಆಗಮಿಸಿರುವ ಕೊಚಿರೊ ಪಿಟಿಐ ಪ್ರತಿನಿಧಿಗೆ ತಿಳಿಸಿದ್ದಾರೆ.
1997 ರಲ್ಲಿಯೇ ಮನುಷ್ಯನ ಕ್ಲೋನಿಂಗ್ ನಿಷೇಧಕ್ಕೆ ಸಂಬಂಧಿಸಿದ ಜಾಗತಿಕ ಘೋಷಣೆಯನ್ನು ಯುನೆಸ್ಕೋ ಹೊರಡಿಸಿತ್ತು . ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಈ ಘೋಷಣೆ ಅಂಗೀಕೃತವಾಗಿತ್ತು ಎನ್ನುವ ಅಂಶಗಳನ್ನು ಕೊಚಿರೊ ನೆನಪಿಸಿಕೊಂಡರು. ಬಯೋ ಎಥಿಕ್ಸ್ಗೆ ಸಂಬಂಧಿಸಿದ ನೂತನ ನೀತಿ ಸಂಹಿತೆಯ ಮುಂದಾಳಾಗಿ ಯುನೆಸ್ಕೋ ಇರುವುದಾಗಿ ಅವರು ಹೇಳಿದರು.
2001 ನೇ ಇಸವಿಯ ಪ್ರಾರಂಭದಲ್ಲಿ ಪಶ್ಚಿಮದ ಕೆಲವು ಸಂಶೋಧಕರು ಮಾನವ ಕ್ಲೋನಿಂಗ್ಗೆ ಪ್ರಯತ್ನಿಸುತ್ತಿರುವುದಾಗಿ ನೀಡಿದ್ದ ಹೇಳಿಕೆ ಕ್ಲೋನಿಂಗ್ ಕುರಿತು ಬಿಸಿ ಚರ್ಚೆ ಉಂಟು ಮಾಡಿದುದನ್ನು ಇಲ್ಲಿ ಸ್ಮರಿಸಬಹುದು. ಅಮೆರಿಕ, ರಷ್ಯಾ, ಇಟಲಿ, ಬ್ರಿಟನ್ ಮುಂತಾದ ದೇಶಗಳು ಮಾನವ ಕ್ಲೋನಿಂಗ್ಗೆ ವಿರೋಧ ವ್ಯಕ್ತಪಡಿಸಿವೆ.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications