ಜಾತಿವಾದಿ ಉತ್ತರ ಪ್ರದೇಶದಲ್ಲಿ ಪೇರಿ ಪ್ರೇಮ ಪ್ರಸಂಗ ಹಾಗೂ ಸಾವು
ನವದೆಹಲಿ : ಮಹಾತ್ಮ ಗಾಂಧಿ ಹರಿಜನ ಕೇರಿ ತುಳಿದದ್ದಾಯಿತು. ಬಿಹಾರದ ಲಾಲೂ ಪ್ರಸಾದ್ ಯಾದವ್ ಮೋಚಿ ಮನೆಯ ಜಗಲಿ ಮೇಲೆ ಮಲಗಿದ್ದು, ಮಜ್ಜಿಗೆ ಕುಡಿದದ್ದೂ ಸುದ್ದಿಯಾಯಿತು. ಅಂಬೇಡ್ಕರರು ತಮ್ಮ ಶಾಲಾ ದಿನಗಳಲ್ಲಿ ಅನುಭವಿಸಿದ ಅಸ್ಪೃಶ್ಯತೆಯ ನರಕ ಯಾತನೆ ಇವತ್ತಿಗೂ ಪಠ್ಯ ಪುಸ್ತಕಗಳ ವಸ್ತು. ಜಾತ್ಯತೀತ ಎಂಬ ಸ್ಲೋಗನ್ನು ಭವ್ಯ ಭಾರತದ ಮೂಲೆ ಮೂಲೆಗಳಲ್ಲಿ ಮೊಳಗುತ್ತಿದ್ದರೂ ಅದು ಉತ್ತರ ಪ್ರದೇಶದ ಮಂದಿಗೆ ಕೇಳೋದೇ ಇಲ್ಲ.
ಇಷ್ಟೆಲ್ಲಾ ಮಾತುಗಳು ಯಾಕಪ್ಪಾ ಅಂದರೆ... ಹರಯದ ಹೊಸ್ತಿಲಲ್ಲಿರುವ ಹಕ್ಕಿ ಮನಸ್ಸಿನ ಹುಡುಗ- ಹುಡುಗಿ ಜಾತಿ ಮರೆತು, ಪರಸ್ಪರ ಮುತ್ತಿಕ್ಕಿ, ಒಂದಾಗುವಾ ಅಂತ ತೀರ್ಮಾನಿಸೋದರಲ್ಲಿ ಅವನ ಅಥವಾ ಅವಳ ಕೊಲೆಯಾಗಿರುತ್ತಾರೆ. ಇಲ್ಲವೇ, ಮದುವೆಯಾದ ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮೊನ್ನೆ ಭಾನುವಾರ (ಸೆಪ್ಟೆಂಬರ್ 2) 17 ವರ್ಷದ ಸೀಮಾ ಮಾಡಿಕೊಂಡದ್ದು ಇದನ್ನೇ. ಹಿಂದುಳಿದ ಜಾತಿಯಲ್ಲಿ ಹುಟ್ಟಿದ್ದೇ ಆಕೆಯ ತಪ್ಪು ! ಓಡಿಹೋಗಿ ಮದುವೆಯಾಬೇಕೆಂದಿದ್ದ ಹುಡುಗ ಮೇಲ್ಜಾತಿಯವ. ಪೊಲೀಸರ ದೃಷ್ಟಿಯಲ್ಲಿ ಸಂಪ್ರದಾಯ ಹಾಗೂ ಜಾತಿವಾದಿಗಳ ಹಠಕ್ಕೆ ಬಿದ್ದ ಮತ್ತೊಂದು ಬಲಿ ಇದು, ಅಷ್ಟೆ. ಪುರಾವೆ ಸಿಗದ ಕಾರಣ ಕೇಸು ಖುಲಾಸೆ !
ಇಲ್ಲೇ ಹೀಗೇಕೆ ?: ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ 19 ಪ್ರತಿಶತ ಕೆಳಜಾತಿಯವರು. 52 ಪ್ರತಿಶತ ಮಂದಿ ಮೇಲ್ಜಾತಿಗೆ ಸೇರಿದವರು. ಮೇಲ್ಜಾತಿಗೆ ಸೇರಿದ ಎಲ್ಲಾ ಹುಡುಗರಿಗೆ, ತಮ್ಮ ಜಾತಿಯ ಹುಡುಗಿ ತಮ್ಮೂರಲ್ಲೇ ಸಿಗಲು ಸಾಧ್ಯವೇ? ಅಂಕಿ- ಅಂಶಗಳ ಪ್ರಕಾರ ಇಲ್ಲವೇ ಇಲ್ಲ. ಸಲೀಂ- ಅನಾರ್ಕಲಿ, ರೋಮಿಯೋ- ಜ್ಯೂಲಿಯಟ್ ಪ್ರೇಮ ಪ್ರಕರಣಗಳನ್ನು ಪದೇ ಪದೇ ಪುಸ್ತಕಗಳಲ್ಲಿ ಓದಿ, ಚಿತ್ರಗಳನ್ನು ನೋಡಿ ತಿಳಿದಿರುವ ಹರೆಯದ ಹೃದಯಗಳಲ್ಲಿ ಪ್ರೀತಿ ಹುಟ್ಟದೇ ಇರುವುದೇ?
ಪ್ರೀತಿಯ ಬೀಜ ಹೆಮ್ಮರವಾದಾಗ ಗೊತ್ತಾಗುತ್ತದೆ- ಮನೆಯವರು ಮದುವೆಗೆ ಒಪ್ಪೋದಿಲ್ಲ. ಹೀಗಾಗಿ ಓಡಿಹೋಗಿ, ಮದುವೆಯಾಗದೆ ಬೇರೆ ದಾರಿಯಿಲ್ಲ. ಕಳೆದ ಏಳೆಂಟು ತಿಂಗಳಲ್ಲಿ ಈ ರೀತಿ ಹುಡುಗ- ಹುಡುಗಿ ಓಡಿಹೋಗಿರುವ ಸಾಕಷ್ಟು ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಆದರೆ ಆ ಜೋಡಿಗಳು ಮದುವೆಯಾಗಿ ಬಂದ ನಂತರ, ಆಗುತ್ತಿರುವ ಕೊಲೆ- ಆತ್ಮಹತ್ಯೆಗಳಿಗೆ ಸರಿಯಾದ ತನಿಖೆಯೇ ನಡೆದಿಲ್ಲ. ಕಾರಣ ಸಾಕಷ್ಟು ಪುರಾವೆ ಸಿಕ್ಕಿಲ್ಲ !
ಉತ್ತರ ಪ್ರದೇಶದ ಯಾವುದೋ ಹಳ್ಳಿಯ ಜನ ಹೆಣದ ಮುಂದೆ ಅಳುತ್ತಿರುವಾಗಲೇ ಇನ್ನೊಂದು ಜೋಡಿ ಕನಸಿನ ಅರಮನೆ ಕಟ್ಟಲು ಪೇರಿ ಕಿತ್ತಿರುತ್ತದೆ. ಜಾತಿ ಸತ್ತು, ಪ್ರೀತಿ ಹುಟ್ಟುವ ಭವ್ಯ ಭಾರತ ಇದೇ ಅನ್ನೋಣವೇ?!
(ಇನ್ಫೋ ವಾರ್ತೆ)
What do you think about this article?
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications