Get Updates
Get notified of breaking news, exclusive insights, and must-see stories!

‘2002- ತಾಂತ್ರಿಕ ಕ್ಷೇತ್ರಕ್ಕೆ ಶುಕ್ರದೆಶೆ, ಬಂದೇ ಬರತಾವ ಕಾಲ’

ಅಮೆರಿಕ ಆರ್ಥಿಕ ಹಿಂಜರಿಕೆಯಿಂದ ಲಯ ತಪ್ಪಿದ್ದ ತಾಂತ್ರಿಕ ಕ್ಷೇತ್ರದ ಪೆಂಡ್ಯೂಲಮ್‌ ಆವರ್ತನೆ ಬರುವ ವರ್ಷದ ಮಧ್ಯದ ಹೊತ್ತಿಗೆ ಯಥಾ ಸ್ಥಿತಿಗೆ ಮರಳಲಿದೆ. ಅಮೆರಿಕಾ ಟೆಲಿ ಕಮ್ಯುನಿಕೇಷನ್ಸ್‌ ದಿಗ್ಗಜ ಸಂಸ್ಥೆ ‘ಆಲ್‌ಕೇಟೆಲ್‌’ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಕಂಪನಿಯ ಅಧ್ಯಕ್ಷರ ಮುಖ್ಯ ಸಲಹೆಗಾರ, ಮೇಲಾಗಿ ಕರ್ನಾಟಕದಲ್ಲಿ ಹುಟ್ಟಿದ ಕ್ರಿಷ್‌ ಅನಂತ್‌ ಪ್ರಭು ಈ ಮಾತನ್ನು ಹೇಳಿದ್ದಾರೆ.

ಪ್ರಭು ಮಾತಿನ ಸಾರ ಇಂತಿದೆ....

  • ತಾಂತ್ರಿಕ ಕ್ಷೇತ್ರದ ಇಳಿಮುಖ- ಏರುಮುಖ ಒಂದು ಚಕ್ರದ ಚಲನೆಯಂತೆ. ಕಳೆದ 20 ವರ್ಷಗಳಲ್ಲಿ ಹಲವಾರು ಬಾರಿ ಹಿಂಜರಿಕೆಯಾಗಿದೆ. ಆದರೆ ಪ್ರಸ್ತುತ ಹಿಂಜರಿಕೆಯ ಪ್ರಮಾಣ ಕೊಂಚ ಜಾಸ್ತಿಯಿರುವುದರಿಂದ ಆತಂಕ ಹೆಚ್ಚಿದೆ.
  • ಮುಂದಿನ ವರ್ಷ (2002) ಬಂದೇ ಬರತಾವ ಕಾಲ.
  • ಇಂಟರ್ನೆಟ್‌ ವಿತ್ತ ವ್ಯವಸ್ಥೆಯಲ್ಲಿ ಏರುಮುಖವಾಗಲಿದ್ದು, ಸೇವಾ ಕ್ಷೇತ್ರದ ಉದ್ಯೋಗಾವಕಾಶ ಕಂಡಾಪಟ್ಟೆ ಏರಲಿದೆ. ಉತ್ಪನ್ನವೂ ಸಂತೃಪ್ತ ಸ್ಥಿತಿ ಮುಟ್ಟಲಿದೆ.
ಯಾರೀ ಪ್ರಭು?

ಭೌತಶಾಸ್ತ್ರ ವಿಷಯದಲ್ಲಿ ಐಐಟಿ ಬಾಂಬೆಯ ಸ್ನಾತಕೋತ್ತರ ಪದವಿ ಪಡೆದ ಪ್ರಿಷ್‌ ಪ್ರಭು ಅಮೆರಿಕೆಗೆ ಹಾರಿದ್ದು 1975ರಲ್ಲಿ. ಇಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಪಿಟ್ಸ್‌ಬರ್ಗ್‌ ವಿಶ್ವವಿದ್ಯಾಲಯದ ಒಂದು ಸ್ನಾತಕೋತ್ತರ ಹಾಗೂ ಡಾಕ್ಟೊರಲ್‌ ಪದವಿಯನ್ನು ಬುಟ್ಟಿಗೆ ಹಾಕಿಕೊಂಡರು. ಬೆಲ್‌ ಲ್ಯಾಬ್ಸ್‌ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಪ್ರಭು, ಎಟಿ ಅಂಡ್‌ ಟಿ ಕಾರ್ಪೊರೇಷನ್‌ ಹಾಗೂ ಲ್ಯೂಸೆಂಟ್‌ ಟೆಕ್ನಾಲಜೀಸ್‌ನಲ್ಲೂ ಹೆಸರು ಮಾಡಿದರು. ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡಿದ ನಂತರ ಉತ್ಪನ್ನ ವಿಭಾಗಕ್ಕೆ ವರ್ಗಾವಣೆ.

ಡಲ್ಲಾಸ್‌ನ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಟೆಲಿಕಮ್ಯುನಿಕೇಷನ್‌ ವಿಷಯದಲ್ಲಿ ಹೆಚ್ಚುವರಿ ಪ್ರೊಫೆಸರ್‌ ಆಗಿ ಪ್ರಭು ಪಾಠ ಕೂಡ ಹೇಳಿದ್ದಾರೆ. ಪ್ರಸ್ತುತ ಅಲ್‌ಕೇಟೆಲ್‌ನಲ್ಲಿ ವ್ಯಾಪಾರ ವೃದ್ಧಿಸಿರುವ ಅಗ್ಗಳಿಕೆ ಇವರದ್ದು. ಅಮೆರಿಕಾ ಮೂಲದ ಐಐಟಿ ಅಲ್ಯುಮಿನಿ, ಮುಂಬಯಿ- ಇಲ್ಲಿ ಸಾಕಷ್ಟು ನಿಧಿ ಸಂಗ್ರಹಿಸಿ ವಿದ್ಯಾರ್ಥಿ ವೇತನ ದತ್ತಿಯನ್ನೂ ಪ್ರಭು ಸ್ಥಾಪಿಸಿದ್ದಾರೆ. ಮೈಸೂರಿನ ಬಡ ವಿದ್ಯಾರ್ಥಿಗಳಿಗೆ ಸುಮಾರು 10 ಲಕ್ಷ ರುಪಾಯಿ ಸಹಾಯವನ್ನು ಈ ದತ್ತಿ ಮಾಡುತ್ತಿದೆ.

ಸಾಧನೆಯ ಹಾದಿಯಲ್ಲಿ ಸಾಕಷ್ಟು ಮೈಲುಗಲ್ಲು ನೆಟ್ಟಿರುವ ಪ್ರಭು ಗುರಿ ಗಗನ ಕುಸುಮದತ್ತ. ಅಮೆರಿಕೆಯಲ್ಲಷ್ಟೇ ಅಲ್ಲದೆ ದಕ್ಷಿಣ ಏಷ್ಯಾದಲ್ಲೂ ಸಾಕಷ್ಟು ಉದ್ಯೋಗ ಸೃಷ್ಟಿಸುವಂಥಾ ಆರ್ಥಿಕ ಸ್ಥಿತಿ ನಿರ್ಮಿಸಬಹುದು ಎನ್ನುವ ಪ್ರಭು ಕಣ್ಣಲ್ಲಿ ಒಬ್ಬ ಅರ್ಥಶಾಸ್ತ್ರಜ್ಞನೂ ಕುಳಿತಿದ್ದಾನೆ. ತಂತ್ರಜ್ಞಾನಿಗಳಿಗೆ ಕೆಟ್ಟ ಕಾಲ ಇದ್ದರೂ, ಇಲ್ಲ ಎನ್ನುವುದೇ ಕಠೋರ ಸತ್ಯ ಎನ್ನುವ ಪ್ರಭು ಸಣ್ಣಗೆ ನಗುವಾಗ ಕಣ್ಣು ಹೊಳೆಯುತ್ತದೆ.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+