ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.31ರಂದು ಬೆಂಗಳೂರಲ್ಲೂ ನಡೆಯಲಿದೆ‘ಅಕ್ಟೋಬರ್‌ ಫೆಸ್ಟ್‌’

By Staff
|
Google Oneindia Kannada News

ಬೆಂಗಳೂರು : ಕಳೆದೆರಡು ಶತಮಾನಗಳಿಂದ ಮ್ಯೂನಿಚ್‌ನಲ್ಲಿ ಪ್ರತಿವರ್ಷ ನಡೆಯುವ ಜರ್ಮನ್‌ ಅಕ್ಟೋಬರ್‌ ಫೆಸ್ಟ್‌ ವಿಶ್ವ ವಿಖ್ಯಾತಿಯನ್ನು ಪಡೆದಿದೆ. ಈ ಉತ್ಸವ ದೇಶ ವಿದೇಶಗಳ ಸುಮಾರು 6 ಮಿಲಿಯನ್‌ ಜನರನ್ನು ಆಕರ್ಷಿಸಿದೆ ಎಂದರೆ ಇದರ ಜನಪ್ರಿಯತೆ ತಿಳಿದೀತು. ಈಗ ಇದೇ ಮಾದರಿಯ ಉತ್ಸವ ಬೆಂಗಳೂರಿನಲ್ಲೂ ನಡೆಯುತ್ತಿದೆ.

ಮೊಟ್ಟ ಮೊದಲ ಬಾರಿಗೆ ಭಾರತದ ಸಿಲಿಕಾನ್‌ ಕಣಿವೆಗೆ ಕಾಲಿಟ್ಟಿರುವ ಈ ಉತ್ಸವ ಅಕ್ಟೋಬರ್‌ 31ರಂದು ಜರುಗಲಿದೆ. ಜರ್ಮನಿಯಲ್ಲಿ ಅಕ್ಟೋಬರ್‌ ಫೆಸ್ಟ್‌ ಫ್ರುಹ್‌ಶೊಪೆನ್‌ ಎಂದೇ ಖ್ಯಾತಿ. ಇಂತಹ ಉತ್ಸವವನ್ನು ಬೆಂಗಳೂರಿನಲ್ಲಿ ನಡೆಸುವ ಬಗ್ಗೆ ಕಳೆದ ವರ್ಷ ಬವೇರಿಯನ್‌ ಸ್ಟೇಟ್‌ ಮಿನಿಸ್ಟರ್‌ ಎರ್ವಿನ್‌ ಹುಬೆರ್‌ ಅವರೊಂದಿಗೆ ನಡೆದಿದ್ದ ಮಾತುಕತೆಯ ಫಲಶ್ರುತಿಯ ಪರಿಣಾಮವಾಗಿ ಈ ಉತ್ಸವ ನಡೆಯುತ್ತಿದೆ.

ಈ ಉತ್ಸವವನ್ನು ಬೆಂಗಳೂರಲ್ಲಿ ನಡೆಸಲು ಇಂಡೋ ಜರ್ಮನ್‌ ಕಲ್ಚರಲ್‌ ಸೊಸೈಟಿ, ಬೆಂಗಳೂರಿನಲ್ಲಿರುವ ಹಲವು ಜರ್ಮನ್‌ ಮೂಲದ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚಿಸಿ ರೂಪು-ರೇಷೆ ಸಿದ್ಧಪಡಿಸಿತು. ಈ ಎರಡು ದೇಶಗಳ ಜನರ ನಡುವೆ ಸಾಂಸ್ಕೃತಿಕ ಸಂಬಂಧ ಬೆಸೆಯುವುದೇ ಉತ್ಸವದ ಉದ್ದೇಶವಾಗಿದೆ ಎಂಬುದು ಸೊಸೈಟಿ ಹೇಳಿಕೆ.

ಪ್ರತಿವರ್ಷವೂ ಬೆಂಗಳೂರಿನಲ್ಲಿ ಅಕ್ಟೋಬರ್‌ ಫೆಸ್ಟ್‌ ಆಚರಿಸುವ ಯೋಜನೆ ಸೊಸೈಟಿಗಿದೆ. 2001ರ ಅಕ್ಟೋಬರ್‌ 31ರಂದು ಸಂಜೆ 6 ಗಂಟೆಗೆ ಸಮಾರಂಭ ನಗರದ ತಾಜ್‌ ರೆಸಿಡೆನ್ಸಿಯಲ್ಲಿ ನಡೆಯಲಿದೆ. ನವೆಂಬರ್‌ 1ರಂದು ಫ್ರುಹ್‌ಶೊಪೆನ್‌ ಮಾದರಿ ಉತ್ಸವ ಜರುಗಲಿದೆ.

ಈ ಉತ್ಸವದಲ್ಲಿ ಜರ್ಮನ್‌ ಸೊಗಡಿನ ಆಹಾರ ಸರಬರಾಜು ಮಾಡಲಾಗುತ್ತದೆ. ಜರ್ಮನ್‌ ಸಾಸೆಜ್‌, ಎಲೆಕೋಸಿನ ವಿವಿಧ ಆಹಾರಗಳು, ಆಲೂಗಡ್ಡೆ ಸಲಾಡ್‌ ಮೊದಲಾದವು ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಭಾರತದಲ್ಲಿ ನಡೆಯುತ್ತಿರುವ ಪ್ರಪ್ರಥಮ ಉತ್ಸವ ಇದಾಗಿದೆ. ಕೊರೆಯುವ ಚಳಿಯಲ್ಲಿ ಬಿಸಿಬಿಸಿ ಜರ್ಮನ್‌ ಖಾದ್ಯ ತಿನ್ನ ಬಯಸುವ ಸಸ್ಯಹಾರಿಗಳಿಗೆ ವಿಶೇಷ ಆಹಾರಗಳ ದೊಡ್ಡ ಪಟ್ಟಿಯೇ ಇದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X