Get Updates
Get notified of breaking news, exclusive insights, and must-see stories!

ದಕ್ಷಿಣ ಆಫ್ರಿಕ ಕ್ರಿಕೆಟ್‌ ಪ್ರವಾಸಕ್ಕೆ ನಾನು ಸಿದ್ಧ- ಅ-ನಿ-ಲ್‌ ಕುಂಬ್ಳೆ

ಬೆಂಗಳೂರು : ನಾನೀಗ ಕ್ರಿಕೆಟ್‌ ಆಡಲು ಪೂರ್ಣ ಫಿಟ್‌ ಆಗಿದ್ದು, ದಕ್ಷಿಣ ಆಫ್ರಿಕ ಪ್ರವಾಸಕ್ಕೆ ತೆರಳಲು ಸಿದ್ಧ ಎಂದು ಲೆಗ್ಗಿ ಅನಿಲ್‌ ಕುಂಬ್ಳೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದ್ದಾರೆ. ಶ್ರೀಲಂಕಾ ಪ್ರವಾಸದ ಮೊದಲ ಪಂದ್ಯದಲ್ಲೇ ಎಡಗೈ ಕಿರು ಬೆರಳಿಗೆ ಪೆಟ್ಟು ತಿಂದು ನಿರ್ಗಮಿಸಿರುವ ಶ್ರೀನಾಥ್‌, ಇನ್ನು ಒಂದು ಒಂದೂವರೆ ವಾರದಲ್ಲಿ ಗುಣಮುಖರಾಗಲಿದ್ದಾರೆ.

ಬರುವ ಅಕ್ಟೋಬರ್‌ 17ರಂದು ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಕುಂಬ್ಳೆ 61 ಟೆಸ್ಟ್‌ ಪಂದ್ಯಗಳಿಂದ 276 ಹಾಗೂ 208 ಒಂದು ದಿನದ ಪಂದ್ಯಗಳಿಂದ 274 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅವರ ಟೆಸ್ಟ್‌ ಕ್ರಿಕೆಟ್‌ನ 300 ವಿಕೆಟ್‌ಗಳ ಕನಸು ನನಸಾಗಿಸುವ ಕಾಲ ಹತ್ತಿರವಾಗಿದೆ.

ಭಾರತದ ಫಿಸಿಯೋ ಆ್ಯಂಡ್ರೂ ಲೀಪಸ್‌ ಇವತ್ತೋ ನಾಳೆಯೋ ಇಲ್ಲಿಗೆ ಬಂದು, ನನ್ನನ್ನು ಪರೀಕ್ಷಿಸಲಿದ್ದಾರೆ. ಇನ್ನು ಒಂದು ವಾರ ಅಥವಾ ಒಂದೂವರೆ ವಾರದೊಳಗೆ ನಾನು ಫಿಟ್‌ ಆಗಲಿದ್ದೇನೆ ಎಂದು ಜಾವಗಲ್‌ ಶ್ರೀನಾಥ್‌ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಸಚಿನ್‌ ಸೇರಿದಂತೆ ದಿಗ್ಗಜರ ಅನುಪಸ್ಥಿತಿಯಲ್ಲಿ ಕಳೆಗುಂದಿರುವ ಭಾರತದ ಕ್ರಿಕೆಟ್ಟಿಗೆ ಕುಂಬ್ಳೆ ಪುನರಾಗಮನ ಚೇತೋಹಾರಿ ವಿಷಯವಾಗಿದೆ. ಶ್ರೀಲಂಕಾದಿಂದ ಮೊದಲ ಟೆಸ್ಟ್‌ನಲ್ಲೇ ಗಾಯಗೊಂಡರೂ, 5 ವಿಕೆಟ್‌ ಉರುಳಿಸಿದ್ದ ಶ್ರೀನಾಥ್‌ ಕೂಡ ದಕ್ಷಿಣ ಆಫ್ರಿಕ ಪ್ರವಾಸಕ್ಕೆ ಆಯ್ಕೆಯಾಗುವುದು ಹೆಚ್ಚೂ ಕಮ್ಮಿ ಖರೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+