ಉದ್ಯಾನ ನಗರಿಯ ಖ್ಯಾತಿ ಉಳಿಸಲುಮುಖ್ಯಮಂತ್ರಿ ಕೃಷ್ಣ ಸಂಕಲ್ಪ
ನವದೆಹಲಿ : ರಾಜ್ಯದ ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿ ಕೇಂದ್ರ ಕಾರಾಗೃಹ ಇರುವುದು ನಿಮಗೂ ಗೊತ್ತಲ್ಲ. ಮಹಾರಾಣಿ ಮಹಿಳಾ ಕಾಲೇಜಿನ ಎದುರೇ ಇರುವ ಈ ಕೇಂದ್ರ ಕಾರಾಗೃಹ ಈಗ ನಗರದ ಹೊರವಲಯಕ್ಕೆ ಸ್ಥಳಾಂತರಗೊಂಡಿದೆ.
ತೆರವಾಗಿರುವ ಈ ಪ್ರದೇಶದಲ್ಲಿ ಸುಂದರವಾದ ಮಕ್ಕಳ ಉದ್ಯಾನ ನಿರ್ಮಾಣ ಮಾಡಲು ರಾಜ್ಯ ಸರಕಾರ ಯೋಜಿಸಿದೆ. ಈಗಿನ ಸರಕಾರವಾಗಲೀ, ಮುಂದೆ ಬರುವ ಸರಕಾರಗಳೇ ಆಗಲಿ ರಾಜಧಾನಿಯ ಕೇಂದ್ರಭಾಗದಲ್ಲಿರುವ ಈ ಜಾಗದಲ್ಲಿ ಕಟ್ಟಡ ನಿರ್ಮಿಸದಂತೆ ನೋಡಿಕೊಳ್ಳಲು ಕೃಷ್ಣ ಕಂಕಣಬದ್ಧರಾಗಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಆಸ್ಪದ ನೀಡದಿರಲು ವಿಧೇಯಕವೊಂದನ್ನು ತರಲೂ ಅವರು ನಿರ್ಧರಿಸಿದ್ದಾರೆ. ಶನಿವಾರ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು ತಮ್ಮ ಮನದಾಳದ ಈ ಇಂಗಿತವನ್ನು ಹೊರಹಾಕಿದರು. ಈ ವಿಶಾಲ ಪ್ರದೇಶದಲ್ಲಿ ಸುಂದರ ಮಕ್ಕಳ ಉದ್ಯಾನ ನಿರ್ಮಿಸಲಾಗುವುದೆಂದೂ ತಿಳಿಸಿದರು. ಈ ಜಾಗದಲ್ಲಿ ಸರಕಾರಿ ವಸತಿ ಸಮುಚ್ಚಯ ನಿರ್ಮಿಸಬೇಕೆಂಬ ಒತ್ತಡವೂ ಬಂದಿತ್ತೆಂಬುದನ್ನು ಸ್ಮರಿಸಿದ ಅವರು, ಆದರೆ, ಸರಕಾರ ಇಲ್ಲಿ ಹಸಿರು ಉಸಿರಾಗಿರಬೇಕು ಎಂದು ನಿರ್ಧರಿಸಿದೆ ಎಂದರು.
ರೇಸ್‌ಕೋರ್ಸ್: ರೇಸ್‌ಕೋರ್ಸ್ ಅನ್ನು ಕೂಡ ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಈ ವಿಶಾಲ ಪ್ರದೇಶದಲ್ಲಿ ಕೂಡ ಯಾವುದೇ ಕಟ್ಟಡ ತಲೆ ಎತ್ತದಂತೆ ನೋಡಿಕೊಳ್ಳಲಾಗುವುದು. ಉದ್ಯಾನ ನಗರಿ ಎಂದು ಹೆಸರು ಪಡೆದಿರುವ ಬೆಂಗಳೂರಿನ ಖ್ಯಾತಿ ಉಳಿಸಲು ಇಲ್ಲೂ ಒಂದು ಉದ್ಯಾನ ನಿರ್ಮಿಸಲು ತಾವು ಬಯಸಿರುವುದಾಗಿ ಕೃಷ್ಣ ಹೇಳಿದರು.
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications